Asianet Suvarna News Asianet Suvarna News

ಮದುವೆಯಾಗಿದ್ದು ಬಿಟ್ಟಿರಲು ಅಲ್ಲ, ನಿಕ್ ಜತೆಗಿರದೇ ರಾತ್ರಿ ಕಳೆಯಲಾರೆ; ಪ್ರಿಯಾಂಕಾ ಚೋಪ್ರಾ

ನಾನು ನೆಪೋಟಿಸಂ ಬಗ್ಗೆ ಮಾತನಾಡಿದ್ದೇನೆ. ಬಾಲಿವುಡ್‌ನಲ್ಲಿ ಸ್ಟಾರ್‌ ಕಿಡ್‌ಗಳಿಗೇ ಹೆಚ್ಚು ಮಣೆ ಹಾಕುವ ಸಂಪ್ರದಾಯದ ಬಗ್ಗೆಯೂ ನನಗೆ ಕೋಪವಿದೆ. ಆದರೆ, ನಾನು ನಟಿಸದಿರಲು ಅದು ಕಾರಣವಲ್ಲ. ನಿಜವಾದ ಕಾರಣ..

Actress Priyanka Chopra clarifies why she cannot act in Indian Movies now srb
Author
First Published May 20, 2024, 4:48 PM IST

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಯಾವುದೇ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಕಾರಣವೇನು ಎಂದು ಅವರ ಹಲವು ಅಭಿಮಾನಿಗಳು ಕಾಯುತ್ತಿದ್ದಾರೆ. 2018 ರಲ್ಲಿ ಅಮೆರಿಕಾದ ಪಾಪ್ ಸಿಂಗರ್ ನಿಕ್ ಜೊನಾಸ್ ಅವರನ್ನು ಮದುವೆಯಾದ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ ಹಿಂದಿಯ, ಅಂದರೆ ಭಾರತದ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ, ಇತ್ತೀಚೆಗೆ ಹಾಲಿವುಡ್ ಸಿನಿಮಾ (Hollywood Movies) ಹಾಗೂ ವೆಬ್ ಸಿರೀಸ್‌ನಲ್ಲಿ ನಟಿಸುತ್ತಿದ್ದಾರೆ. ಅವರಿಗೆ ಬಾಲಿವುಡ್ ಅಥವಾ ತೆಲುಗು ಚಿತ್ರರಂಗಗಳಿಂದ ಆಫರ್ ಇದೆ ಎನ್ನಲಾಗುತ್ತಿದೆ. 

Actress Priyanka Chopra clarifies why she cannot act in Indian Movies now srb

ಹಾಗಿದ್ದರೆ, ನಟಿ ಪ್ರಿಯಾಂಕಾ ಚೋಪ್ರಾ ಭಾರತೀಯ ಸಿನಿಮಾಗಳನ್ನು ಯಾಕೆ ಕಡೆಗಣಿಸುತ್ತಿದ್ದಾರೆ? ಈ ಬಗ್ಗೆ ಪ್ರಿಯಾಂಕಾ ಚೋಫ್ರಾಗೆ ಒಬ್ಬರು ಪ್ರಶ್ನೆ ಕೇಳಲಾಗಿ ಅವರು ಉತ್ತರಿಸಿದ್ದಾರೆ. 'ನನಗೆ ಈಗಲೂ ಬಾಲಿವುಡ್‌ ಕಡೆಯಿಂದ ಆಫರ್‌ಗಳು ಬರುತ್ತಿರುವುದು ನಿಜ. ಟಾಲಿವುಡ್‌ ಕಡೆಯಿಂದ ಕೂಡ ಒಂದೆರಡು ಆಫರ್‌ಗಳು ಬಂದಿವೆ. ನನಗೂ ಸಹಜವಾಗಿಯೇ ನನ್ನ ತವರು ನೆಲ ಭಾರತದ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆಯಿದೆ. ಆದರೆ, ಶೂಟಿಂಗ್‌ಗೆಂದು ಅಮೆರಿಕಾ ಬಿಟ್ಟು ನಾನು ತುಂಬಾ ದಿನಗಳು ಇರಲು ಸಾಧ್ಯವಿಲ್ಲ. 

ಅಸಿಸ್ಟಂಟ್ ಡೈರೆಕ್ಟರ್ ಕೆಲಸ ಕೇಳ್ಕೊಂಡು ಬಂದಿದ್ರು ಕಿಚ್ಚ ಸುದೀಪ್‌; ರಿಜೆಕ್ಟ್ ಮಾಡದ್ಯಾಕೆ ಉಪೇಂದ್ರ?

ಏಕೆಂದರೆ, ನಿಕ್ ಜೊನಾಸ್ ಯಾವತ್ತು ಅಮೆರಿಕಾದಲ್ಲಿಯೇ ಇರಬೇಕಾಗುತ್ತದೆ, ನನ್ನ ಜೊತೆ ಭಾರತದಲ್ಲಿ ಅಷ್ಟೊಂದು ದಿನಗಳ ಕಾಲ ಬಂದಿರಲು ಸಾಧ್ಯವಿಲ್ಲ. ಏಕೆಂದರೆ, ಅವರೊಬ್ಬರು ಪಾಪ್ ಸಿಂಗರ್. ನಾನು ಅವರನ್ನು ತುಂಬಾ ದಿನ ಬಿಟ್ಟಿರಲು ಇಷ್ಟಪಡುವುದಿಲ್ಲ. ನಮ್ಮಿಬ್ಬರದು ಲವ್ ಮ್ಯಾರೇಜ್‌ ಎಂದು ಎಲ್ಲರಿಗೂ ಗೊತ್ತು. ಮದುವೆಯಾಗಿದ್ದು ಬಿಟ್ಟಿರಲು ಅಲ್ಲ ತಾನೆ? ಹೀಗಾಗಿ ನಾನು ಬಾಲಿವುಡ್‌ ಕಡೆಯಿಂದ ಬಂದ ಎಲ್ಲ ಆಫರ್‌ಗಳನ್ನೂ ರಿಜೆಕ್ಟ್ ಮಾಡಬೇಕಾಯ್ತು. 

ತೆಲುಗು ಸೀರಿಯಲ್‌ನಲ್ಲಿ ಕನ್ನಡಿಗ ಸಿದ್ದಾರ್ಥ್ ಮಿಂಚು; ಮನೆಮಾತಾದ ಹ್ಯಾಂಡ್‌ಸಮ್ ಬಾಯ್!

ನಾನು ನೆಪೋಟಿಸಂ ಬಗ್ಗೆ ಮಾತನಾಡಿದ್ದೇನೆ. ಬಾಲಿವುಡ್‌ನಲ್ಲಿ ಸ್ಟಾರ್‌ ಕಿಡ್‌ಗಳಿಗೇ ಹೆಚ್ಚು ಮಣೆ ಹಾಕುವ ಸಂಪ್ರದಾಯದ ಬಗ್ಗೆಯೂ ನನಗೆ ಕೋಪವಿದೆ. ಆದರೆ, ನಾನು ನಟಿಸದಿರಲು ಅದು ಕಾರಣವಲ್ಲ. ನಿಜವಾದ ಕಾರಣ ನಾನು ಈ ಮೊದಲು ಹೇಳಿದ್ದು. ನನಗೆ ನಿಕ್ ಬಿಟ್ಟಿರಲು ಇಷ್ಟವಿಲ್ಲ, ಕರೆದುಕೊಂಡು ಬರಲು ಸಾಧ್ಯವಿಲ್ಲ. ಜತೆಗೆ, ನನಗೆ ಈಗ ನಟನೆಗೆ ಅವಕಾಶ ಹಾಲಿವುಡ್‌ ಚಿತ್ರರಂಗದಲ್ಲಿ ಹೇರಳವಾಗಿದೆ. ಕಲಾವಿದರಿಗೆ, ಕೆಲಸ ಮಾಡುವವರಿಗೆ ಯಾವ ಭಾಷೆ, ಯಾವ ದೇಶವಾದರೇನು? 

ಉಪೇಂದ್ರರ 'ಎ' ಸಿನಿಮಾ ರೀ-ರಿಲೀಸ್, ಧ್ರುವ ಸರ್ಜಾ ಹೇಳಿದ್ದೇನು? ಉಪ್ಪಿ ಕೌಂಟರ್‌?

ಈ ಎಲ್ಲ ಕಾರಣಗಳಿಂದ ಸದ್ಯ ನಾನು ಭಾರತೀಯ ಚಿತ್ರರಂಗಗಳಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಆದರೆ, ಮುಂದೆ ಸೂಕ್ತ ಸಮಯ ಸಿಕ್ಕರೆ ಖಂಡಿತ ಮಾಡಬಹುದು. ಯಾವುದೋ ಕಾರಣಕ್ಕೆ ನಾನು ಹಾಗೂ ನಿಕ್ ತುಂಬಾ ಸಮಯ ರಜಾ ತೆಗೆದುಕೊಂಡು ಬಂದು ಭಾರತದಲ್ಲಿ ಇರಲು ಸಾಧ್ಯವಾದರೆ ನಾನು ಮತ್ತೆ ಬಾಲಿವುಡ್ ಅಥವಾ ಸೌತ್ ಚಿತ್ರಂಗಗಳಲ್ಲಿ ಕೆಲಸ ಮಾಡಬಹುದು. ಈಗಂತೂ ಭಾರತದಲ್ಲಿ ಸೌತ್-ನಾರ್ಥ್ ಎಂಬ ವ್ಯತ್ಯಾಸ ಹೊರಟು ಹೋಗಿದೆ. ಭಾರತೀಯ ಸಿನಿಮಾ ಆಗಿದೆ. ಇದು ಖಂಡಿತವಾಗಿಯೂ ಒಳ್ಳೆಯ ಬೆಳವಣಿಗೆ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.

ಭಾರೀ ಮೊತ್ತಕ್ಕೆ ಸೇಲ್ ಆಯ್ತು ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾ ಡಿಜಿಟಲ್ ರೈಟ್ಸ್!

Latest Videos
Follow Us:
Download App:
  • android
  • ios