ಹೆರಿಗೆಯಾದ ನಾಲ್ಕೇ ತಿಂಗಳಿಗೆ ಇಷ್ಟೊಂದು ಕುಣಿದ ನಟಿ, ಹುಷಾರಿ ಎಂದ ಫ್ಯಾನ್ಸ್
ಪೊರ್ಕಿ ನಟಿ ಪ್ರಣೀತಾ, ಹೆರಿಗೆ ನಂತ್ರ ಮಗು ಆರೈಕೆ ಜೊತೆ ತಮ್ಮ ಫಿಟ್ನೆಸ್ ಗೂ ಆದ್ಯತೆ ನೀಡ್ತಿದ್ದಾರೆ. ಈಗಾಗಲೇ ವರ್ಕ್ ಔಟ್ ಗೆ ಬಂದಿರುವ ಅವರು, ಬಾಲಿವುಡ್ ಹಾಡಿಗೆ ಡಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಬಹುತಾರಾ ನಟಿ ಪ್ರಣೀತಾ ಸುಭಾಷ್ (actress Pranitha Subhash) ಎರಡು ಮಕ್ಕಳ ತಾಯಿ. ನಾಲ್ಕು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿರುವ ಪ್ರಣೀತಾ ಆಗ್ಲೇ ವೃತ್ತಿ ಬದುಕಿಗೆ ವಾಪಸ್ ಆಗುವ ತಯಾರಿ ನಡೆಸಿದ್ದಾರೆ. ಹೆರಿಗೆ ಆದ್ಮೇಲೆ ಮೂರು ತಿಂಗಳು ಎಲ್ಲಿಗೂ ಹೋಗ್ಬಾರದು, ಹೆಚ್ಚಿನ ಆರೈಕೆ ಬೇಕು ಅಂತ ಕತ್ತಲ ಕೋಣೆಯಲ್ಲಿ ತಾಯಂದಿರನ್ನು ಕೂಡಿಹಾಕುವ ಕಾಲ ಈಗಿಲ್ಲ. ಹೆರಿಗೆಯಾದ ಕೆಲವೇ ದಿನಗಳಲ್ಲಿ ಫಿಟ್ನೆಸ್ (fitness), ಕೆಲಸ ಅಂತ ಮಹಿಳೆಯರು ಬ್ಯುಸಿ ಆಗ್ತಿದ್ದಾರೆ. ಅದ್ರಲ್ಲೂ ಈಗಿನ ನಟಿಯರು ಸಿಕ್ಕಾಪಟ್ಟೆ ಫಾಸ್ಟ್. ಹೆರಿಗೆಯಾದ ಕೆಲವೇ ಕೆಲವು ದಿನಗಳಲ್ಲಿ ಸಿನಿಮಾ ಪ್ರಚಾರಕ್ಕೆ ಇಳಿದಿದ್ದರು ಮಿಲನಾ ನಾಗರಾಜ್ (Milana Nagaraj). ಈಗ ಪ್ರಣೀತಾ ಕೂಡ ಇದೇ ಪಟ್ಟಿಗೆ ಸೇರಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಪ್ರಣೀತಾ, ಈಗ ತಮ್ಮ ಡಾನ್ಸ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್ ಹಾಡಿಗೆ ಅವರು ಡಾನ್ಸ್ (dance) ಮಾಡಿದ್ದಾರೆ. ವರ್ಕ್ ಔಟ್ ಸೆಷನ್ (workout session), ಅದನ್ನು ಬಾಲಿವುಡ್ ಮಾಡಿ. ಹೆರಿಗೆಯಾಗಿ ನಾಲ್ಕು ತಿಂಗಳ ನಂತ್ರ. ಇದು ತುಂಬಾ ಮಜವಾಗಿತ್ತು ಎನ್ನುವ ಶೀರ್ಷಿಕೆಯಲ್ಲಿ ಪ್ರಣೀತಾ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಆನ್ಲೈನ್ ನಲ್ಲಿ ಸಿಗ್ತಿದೆ ಪುಷ್ಪ 2 , ಪೈರಸಿಗೆ ಒಳಗಾಯ್ತು ಪ್ಯಾನ್ ಇಂಡಿಯಾ ಸಿನಿಮಾ
ಅವರ ಡಾನ್ಸ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಡಾನ್ಸ್ ಅದ್ಭುತ ಅಂತ ಕಮೆಂಟ್ ಮಾಡಿದ್ದಾರೆ. ಇದ್ರ ಜೊತೆ ಅಭಿಮಾನಿಯೊಬ್ಬರು, ಹೆರಿಗೆ ನಂತ್ರ ಎಚ್ಚರಿಕೆಯಿಂದ ಇರುವುದು ಸೂಕ್ತ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಶೀಘ್ರದಲ್ಲೇ ನಿಮ್ಮನ್ನು ತೆಲುಗು ಟಿವಿಯಲ್ಲಿ ನೋಡಲು ಬಯಸ್ತೇವೆ ಎಂದು ಕಮೆಂಟ್ ಮಾಡಿದ್ದಾರೆ. ಕೆಲ ಫ್ಯಾನ್ಸ್, ಅಮ್ಮಂದಿರಿಗೆ ನೀವು ಸ್ಪೂರ್ತಿ, ಯುವಕರನ್ನು ನಾಚಿಸುವಂತೆ ಡಾನ್ಸ್ ಮಾಡಿದ್ದೀರಿ, ಸಿನಿಮಾದಲ್ಲಿ ಆಕ್ಟಿಂಗ್ ಮಾಡಿ ಎಂದು ಮನವಿ ಮಾಡಿದ್ದಾರೆ.
ಪ್ರಣೀತಿ ಸೆಪ್ಟೆಂಬರ್ 5ರಂದು ಗಂಡು ಮಗುವಿಗೆ ಜನ್ಮಿ ನೀಡಿದ್ದಾರೆ. ಅವರಿಗೆ ಈಗಾಗಲೇ ಒಂದು ಹೆಣ್ಣು ಮಗುವಿದ್ದು ಅದಕ್ಕೆ ಆರ್ನಾ ಎಂದು ಹೆಸರಿಡಲಾಗಿದೆ. ಮಗುವಿನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದ ಪ್ರಣೀತಾ, ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಎರಡನೇ ಬಾರಿ ಅಮ್ಮನಾಗಿದ್ದು ಖುಷಿ ನೀಡಿದೆ. ನನ್ನ ಮಗಳು ಆರ್ನಾ, ಮಗುವನ್ನು ಬೇಬಿ ಎಂದು ಕರೆಯುತ್ತಿದ್ದಾಳೆ. ಮಗಳು ಮತ್ತು ನನಗೆ ಸಂತೋಷವಾಗಿದೆ. ಈ ತಾಯ್ತನವನ್ನು ನಾನು ಎಂಜಾಯ್ ಮಾಡ್ತಿದ್ದೇನೆ ಎಂದು ಬರೆದುಕೊಂಡಿದ್ದರು.
ಮುಂದಿನ ವಾರ ಮದುವೆ, ಈಗೇನ್ ಮಾಡ್ತಿದಾರೆ ಕೀರ್ತಿ ಸುರೇಶ್?
ಚೊಚ್ಚಲ ಹೆರಿಗೆ ಸಮಯದಲ್ಲಿ ನನಗೆ ಸಾಕಷ್ಟು ಗೊಂದಲವಿತ್ತು. ಅನೇಕ ಮಾತುಗಳನ್ನು ಅನಿವಾರ್ಯವಾಗಿ ಕೇಳ್ಬೇಕಿತ್ತು. ಆದ್ರೆ ಈ ಬಾರಿ ನಾನು ಕೂಲ್ ಆಗಿದ್ದೇನೆ. ನನ್ನ ಮಗುವಿಗೆ ಏನು ಮಾಡ್ಬೇಕು ಎಂಬುದು ನನಗೆ ತಿಳಿದಿದೆ. ಹಾಗಾಗಿ ಹೆಚ್ಚಿನ ಒತ್ತಡವಿಲ್ಲ ಎಂದಿದ್ದರು. ಅಷ್ಟೇ ಅಲ್ಲ ವಿಶ್ರಾಂತಿಯನ್ನು ತುಂಬಾ ದಿನ ಪಡೆಯಲು ಸಾಧ್ಯವಿಲ್ಲ. ಕೆಲಸಕ್ಕೆ ವಾಪಸ್ ಆಗ್ಬೇಕಿದೆ. ಕೆಲಸದ ಮೇಲೆ ಪ್ರೀತಿ ಹೆಚ್ಚಿದ್ದು, ಆದಷ್ಟು ಬೇಗ ಕೆಲಸಕ್ಕೆ ವಾಪಸ್ ಆಗ್ತೇನೆ ಎಂದಿದ್ದರು. ಈಗ ವರ್ಕ್ ಔಟ್ ಶುರು ಮಾಡಿರುವ ಪ್ರಣೀತಾ, ಶೀಘ್ರವೇ ಕೆಲಸಕ್ಕೆ ವಾಪಸ್ ಆಗುವ ಮುನ್ಸೂಚನೆ ನೀಡಿದ್ದಾರೆ.
ಕನ್ನಡದಲ್ಲಿ ಪೊರ್ಕಿ ಚಿತ್ರದಲ್ಲಿ ಅಭಿನಯಿಸುವ ಮೂಲಕ ಮೊದಲ ಬಾರಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಪ್ರಣೀತಾ, ಕನ್ನಡ, ತೆಲುಗು, ತಮಿಳು, ಹಿಂದಿಯ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಸದ್ಯ ಸಿನಿಮಾದಿಂದ ದೂರವಿರುವ ಅವರು, ಕೆಲ ಕಿರುತೆರೆ ಶೋಗಳಲ್ಲಿ ಕಾಣಿಸಿಕೊಳ್ತಾರೆ. ಅನೇಕ ಬ್ರ್ಯಾಂಡ್ ಗೆ ರಾಯಬಾರಿಯಾಗಿರುವ ಅವರು, ಹೊಟೇಲ್ ಒಂದರ ಓನರ್ ಕೂಡ ಹೌದು.