ಆನ್ಲೈನ್ ನಲ್ಲಿ ಸಿಗ್ತಿದೆ ಪುಷ್ಪ 2 , ಪೈರಸಿಗೆ ಒಳಗಾಯ್ತು ಪ್ಯಾನ್ ಇಂಡಿಯಾ ಸಿನಿಮಾ
ಪುಷ್ಪ 2 ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದಿದೆ. ಒಂದ್ಕಡೆ ಸಿನಿಮಾ ತೆರೆಗೆ ಬಂದಿದ್ರೆ ಇನ್ನೊಂದು ಕಡೆ ಮೂವಿ, ಆನ್ಲೈನ್ ನಲ್ಲಿ ಲಭ್ಯವಾಗಿದೆ. ಬಹುನಿರೀಕ್ಷಿತ ಸಿನಿಮಾ ಪೈರಸಿಗೆ ಒಳಗಾಗಿದೆ.
ಅಲ್ಲು ಅರ್ಜುನ್ (Allu Arjun) ಅಭಿನಯದ ಮಾಸ್ ಎಂಟರ್‌ಟೈನರ್ ಪುಷ್ಪ 2: ದಿ ರೂಲ್ (mass entertainer Pushpa 2: The Rule), ತನ್ನ ದರ್ಬಾರ್ ಶುರು ಮಾಡಿದೆ. ಪ್ಯಾನ್ ಇಂಡಿಯಾ (pan India) ಚಿತ್ರ ಪುಷ್ಪ 2, ಇಂದು ಥಿಯೇಟರ್ ಗಳಲ್ಲಿ ಧೂಳೆಬ್ಬಿಸುತ್ತಿದೆ. ರೆಕಾರ್ಡ್ ಮೂಲಕವೇ ಥಿಯೇಟರ್ ಗೆ ಅಪ್ಪಳಿಸಿರುವ ಪುಷ್ಪ 2, 12 ಸಾವಿರ ಸ್ಕ್ರೀನ್ಗಳಲ್ಲಿ ತೆರೆಕಂಡಿದ್ದು, ಶರವೇಗದಲ್ಲಿ ಓಡ್ತಿದೆ. ಆದ್ರೆ ಬಹುನಿರೀಕ್ಷಿತ ಚಿತ್ರವೂ ಪೈರಸಿ (Piracy) ಗೆ ಬಲಿಯಾಗಿದೆ ಎಂಬ ವರದಿ ಕೇಳಿ ಬಂದಿದೆ. ಚಿತ್ರ ಬಿಡುಗಡೆಯಾದ ತಕ್ಷಣ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ ಎಂಬ ವರದಿ ಕೇಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಡಿಸೆಂಬರ್ ಐದು ಅಂದ್ರೆ ಇಂದು ಸಿನಿಮಾ ತೆರೆಗೆ ಬಂದಿದ್ದು, ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆ ಆಗ್ತಿದ್ದಂತೆ ಇತ್ತ ಆನ್ಲೈನ್ನಲ್ಲಿ ಸಿನಿಮಾ ಲಭ್ಯವಾಗಿದೆ. TamilYogi, Tamilblasters, Bolly4u, Jaisha Moviez, 9xmovies and Moviesda, bomma, Movierulz, Tamilrockers ಮತ್ತು Filmyzilla ನಂತಹ ಸೈಟ್‌ಗಳ ಪೈರಸಿಗೆ ಪುಷ್ಪಾ 2 ಬಲಿಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆನ್ಲೈನ್ ನಲ್ಲಿ ಸಿನಿಮಾ ಲಭ್ಯವಿದ್ದು, ಜನರು ಅದನ್ನು ಡೌನ್ಲೋಡ್ ಮಾಡ್ತಿ ನೋಡ್ತಿದ್ದಾರೆ ಎಂಬ ಬಗ್ಗೆ ಚರ್ಚೆಯಾಗ್ತಿದೆ. ಕೆಲ ಸೈಟ್ಗಳು ಹೆಚ್ ಡಿ ಪ್ರಿಂಟ್ನಲ್ಲಿ ಸಿನಿಮಾ ಅಪ್ಲೋಡ್ ಮಾಡಿವೆ.
ಅಲ್ಲು ಅರ್ಜುನ್ ಫಿಟ್ನೆಸ್ ರಹಸ್ಯ ಬಯಲು; ಬೆಳಗಿನ ಈ ತಿಂಡಿಯೇ ಎನರ್ಜಿಟಿಕ್ ಆಗಿ ಕಾಣುವ ಹಿಂದಿನ
ಮೊದಲ ದಿನವೇ ಧಮಾಲ್ ಮಾಡಿದ ಚಿತ್ರ : ಇಂದು ಬೆಳಿಗ್ಗೆಯಷ್ಟೇ ಸಿನಿಮಾ ತೆರೆಗೆ ಬಂದಿದ್ದು, ಫಸ್ಟ್ ಶೋ ಮೊದಲೇ ಸಿನಿಮಾ ಕಲೆಕ್ಷನ್ ಮಾಹಿತಿ ಲಭ್ಯವಾಗಿದೆ. ಬೆಳಿಗ್ಗೆ 8 ಗಂಟೆಯ ವೇಳೆಗೆ ಸಿನಿಮಾ ಕಲೆಕ್ಷನ್ 21.04 ಕೋಟಿ ಎಂದು ಮಾಧ್ಯಮಗಳು ವರದಿ ಮಾಡಿವೆ. ಇನ್ನು ರಾತ್ರಿ ವೇಳೆಗೆ ಸಿನಿಮಾ ದಾಖಲೆ ಮಟ್ಟದಲ್ಲಿ ಹಣ ಬಾಚಿಕೊಳ್ಳೋದ್ರಲ್ಲಿ ಅಚ್ಚರಿಯೇನಿಲ್ಲ. ಪುಷ್ಪಾ 2 ಸಿನಿಮಾ ರಿಲೀಸ್ಗೆ ಮೊದಲೇ ಅನೇಕ ಕಡೆ ಟಿಕೆಟ್ ಸೋಲ್ಡ್ ಔಟ್ ಆಗಿದೆ. 1500, 1000ದ ದರದಲ್ಲಿ ಟಿಕೆಟ್ ಗಳನ್ನು ಫ್ಯಾನ್ಸ್ ಖರೀದಿ ಮಾಡಿದ್ದಾರೆ.
ಪುಷ್ಪ 2 ಚಿತ್ರವನ್ನು ಮೈತ್ರಿ ಮೂವಿ ಪ್ರೊಡಕ್ಷನ್‌ನಲ್ಲಿ ನಿರ್ಮಿಸಲಾಗಿದ್ದು, ಸುಕುಮಾರ್ ನಿರ್ದೇಶನದ ಚಿತ್ರವು ಅದ್ಧೂರಿ ಬಜೆಟ್‌ನಲ್ಲಿ ತಯಾರಾಗಿದೆ. ಪುಷ್ಪಾ 2 ಚಿತ್ರಕ್ಕಾಗಿ ತಯಾರಕರು ಸುಮಾರು 400-500 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಸಿನಿಮಾ ಜೊತೆ ಸಿನಿಮಾ ಪ್ರಚಾರ ಕಾರ್ಯಕೂಡ ಅದ್ಧೂರಿಯಾಗಿ ನಡೆದಿದೆ. ಈಗ ಪೈರಸಿಗೆ ಬಲಿಯಾದ ನಂತರ ಚಿತ್ರಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ.
ಮದುವೆ ಜೀವನ, ಪತ್ನಿಯ ತ್ಯಾಗದ ಬಗ್ಗೆ ನಟ ಸೂರ್ಯ ಮಾತಿಗೆ ಭೇಷ್ ಎಂದ ಹೆಂಗೆಳೆಯರು
ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಈ ಜೋಡಿ ಅಭಿಮಾನಿಗಳಿಗೆ ಮೋಡಿ ಮಾಡೋದ್ರಲ್ಲಿ ಯಶಸ್ವಿಯಾಗಿವೆ. ಪುಷ್ಪ 2, ಎರಡನೇ ಸಾಂಗ್ ಕೂಡ ಬಿಡುಗಡೆಯಾಗಿದ್ದು, ಸಾಂಗ್ ನೋಡಿದ ಫ್ಯಾನ್ಸ್ ಅಲ್ಲು ಹಾಗೂ ರಶ್ಮಿಕಾ ಡಾನ್ಸ್ ಗೆ ಫಿದಾ ಆಗಿದ್ದಾರೆ. ಪುಷ್ಪ ಸಿನಿಮಾ ಬಿಡುಗಡೆಯಾದಾಗಿನಿಂದ್ಲೂ ಪುಷ್ಪ 2ಗೆ ಕಾಯ್ತಿದ್ದ ಅಭಿಮಾನಿಗಳಿಗೆ ಈಗ ಖುಷಿಯಾಗಿದೆ. ಪುಷ್ಪ 2 ಬಿಡುಗಡೆಗೂ ಮುನ್ನವೇ ರಶ್ಮಿಕಾ ಭಾವನಾತ್ಮಕ ಪೋಸ್ಟ್ ಒಂದನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡು, ಪುಷ್ಪ, ಪುಷ್ಪ 2 ಶೂಟಿಂಗ್ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಯಾವ ಒಟಿಟಿಯಲ್ಲಿ ಪುಷ್ಪ 2 ? : ಪುಷ್ಪ 2 ಸಿನಿಮಾದ ಒಟಿಟಿ ಮಾಹಿತಿ ಕೂಡ ಲಭ್ಯವಾಗಿದೆ. ಸಿನಿಮಾ ನೆಟ್ ಪ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ. ಆದ್ರೆ ತಯಾರಕರು ಒಟಿಟಿ ದಿನಾಂಕವನ್ನು ಘೋಷಣೆ ಮಾಡಿಲ್ಲ. ನೆಟ್‌ಫ್ಲಿಕ್ಸ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ.