ಕಾಲಿವುಡ್‌-ಟಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ಪೂಜಾ ಹೆಗ್ಡೆ ಈಗ ಬಾಲಿವುಡ್‌ನ ಬೇಡಿಕೆಯ ನಟಿಯಾಗಿದ್ದಾರೆ. ಹೆಚ್ಚಾಗಿ ವಿದೇಶ ಪ್ರಯಾಣ ಮಾಡುವ ಪೂಜಾ ಹೆಗ್ಡೆನೂ 14 ದಿನಗಳ ಕಾಲ ಕ್ವಾರಂಟೈನ್‌ ಆಗಿದ್ದರು ಈ ವೇಳೆ ಅಭಿಮಾನಿಗಳು ಕೇಳಿದ ಒಂದು ಪ್ರಶ್ನೆ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

2.5 ಕೋಟಿ ಪಡೆಯೋ ಈ ನಟಿ ನೋಡಲು 5 ದಿನ ರಸ್ತೇಲಿ ಮಲಗಿದ ಫ್ಯಾನ್!

ಕ್ವಾರಂಟೈನ್‌ನಲ್ಲಿ ಲೈವ್‌ ಚಾಟ್:

ಲಾಕ್‌ಡೌನ್‌ ವೇಳೆ ಅಭಿಮಾನಿಗಳ ಜೊತೆ ಸಂಪರ್ಕ ಹೊಂದಲು ಸಾಕಷ್ಟು ನಟ-ನಟಿಯರು ಲೈವ್‌ನಲ್ಲಿ ಮಾತನಾಡಿದ್ದಾರೆ. ಈ ಪೈಕಿ ಪೂಜಾಗೆ ಹೆಗ್ಡೆ ಕೂಡ ಒಬ್ಬರು. 

ಪ್ರಭಾಸ್‌ಗೆ ಜೋಡಿಯಾಗಿ 'ಜಾನ್‌' ಚಿತ್ರದಲ್ಲಿ ಮಿಂಚುತ್ತಿರುವ ಪೂಜಾ ತಂಡದ ಜೊತೆ ಜಾರ್ಜಿಯಾದಲ್ಲಿ ಚಿತ್ರೀಕರಣ ಮಾಡುತ್ತಿದ್ದರು ಆದರೆ ವಿದೇಶದಲ್ಲೂ ಲಾಕ್‌ಡೌನ್‌ ಭಿಗಿ ಭದ್ರತೆ ಹೆಚ್ಚಾದ ಕಾರಣ ಭಾರತಕ್ಕೆ ಹಿಂತಿರುಗಿದ್ದರು. ಭಾರತ ಸರ್ಕಾರದ ನಿಯಮಗಳ ಪ್ರಕಾರ 14 ದಿನಗಳ ಕ್ವಾರಂಟೈನ್‌ ಖಡ್ಡಾಯವಾಗಿತ್ತು.

ಈ ಸಮಯಲ್ಲಿ ಪೂಜಾ ಲೈವ್‌ ಚಾಟ್‌ ಮಾಡುವ ಅಭಿಮಾನಿಯೊಬ್ಬ 'ಮೇಡಂ ಸದ್ಯದ ಲಾಕ್‌ಡೌನ್‌ನಲ್ಲಿ ನಿಮ್ಮೊಂದಿಗೆ ಅಭಿನಯಿಸಿರುವ ಹೀರೋಗಳಲ್ಲಿ ಯಾರೊಂದಿಗೆ ಕ್ವಾರಂಟೈನ್ನಲ್ಲಿ ಇರಲು ಬಯಸುತ್ತೀರಾ?' ಅವರಿಂದ ಏನು ಕಲಿಯುತ್ತೀರಾ?' ಎಂದು ಪ್ರಶ್ನಿಸಿದ್ದಾಗ ಪೂಜಾ ಕೊಟ್ಟ ಉತ್ತರವೇ ಹೃತಿಕ್‌ ರೋಷನ್‌ ಎಂದು.

'ನಾನು ಇದುವರೆಗೂ ಮಹೇಶ್‌ ಬಾಬು, ಅಲ್ಲು ಅರ್ಜುನ್‌, ಎನ್‌ಟಿಆರ್‌, ಹೃತಿಕ್‌ ರೋಷನ್‌, ಅಕ್ಷಯ್‌ ಕುಮಾರ್ ಹಾಗೂ ಪ್ರಭಾಸ್‌ ಜೊತೆ ಅಭಿನಯಿಸಿರುವೆ. ಅವಕಾಶ ಸಿಕ್ಕರೆ ಎಲ್ಲರೊಂದಿಗೂ ಕ್ವಾರಂಟೈನ್‌ ಆಗಲು ರೆಡಿ. ಎಲ್ಲರಿಂದಲೂ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬೇಕಿದೆ' ಎಂದು ಉತ್ತರಿಸಿದ್ದಾರೆ.

ಜಾರ್ಜಿಯಾದಿಂದ ಭಾರತಕ್ಕೆ ಮರಳಿದ ಬಾಹುಬಲಿಗೆ 14 ದಿನ ಗೃಹ ಬಂಧನ!

ಅಭಿಮಾನಿಗಳು ಒಬ್ಬ ನಟನ ಹೆಸರನ್ನು ಹೇಳಲು ಒತ್ತಾಯಿಸಿದಕ್ಕೆ 'ಹೀಗೆ ಆಗುವುದಿಲ್ಲ ಒಬ್ಬ ಹೆಸರು ಮಾತ್ರ ಬೇಕು ಅಂದ್ರೆ ನಾನು ಹೃತಿಕ್‌ ರೋಷನ್‌ ಆಯ್ಕೆ ಮಾಡಿಕೊಳ್ಳುವೆ. ಚಿಕ್ಕ ವಯಸ್ಸಿನಿಂದಲೂ ಅವರು ನನ್ನ ಡ್ರೀಮ್‌ ಹೀರೋ. ಬಾಲಿವುಡ್‌ ನನ್ನ ಮೊದಲ ಸಿನಿಮಾ ಅದಕ್ಕೆ ಅವರೇ ಹೀರೋ. ಅವರಲ್ಲಿ ಅನೇಕ ಸ್ಪೂರ್ತಿ ನೀಡುವಂತಹ ವಿಚಾರಗಳು ಇದೆ'  ಎಂದು ಮಾತನಾಡಿದ್ದಾರೆ.

'ಮಹರ್ಷಿ' ನಂತರ ಹೆಚ್ಚಿದ ಸಂಭಾವನೆ:

ಟಾಲಿವುಡ್‌ ಸೈಲೆಂಟ್‌ ಮ್ಯಾನ್‌  ಸೂಪರ್ ಸ್ಟಾರ್ ಮಹೇಶ್‌ ಬಾಬುಗೆ ಜೋಡಿಯಾಗಿ 'ಮಹರ್ಷಿ' ಚಿತ್ರದಲ್ಲಿ ಮಿಂಚಿದ ನಂತರ ನಟಿ ಪೂಜಾ ಹೆಗ್ಡೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾತುಗಳು ಚಿತ್ರರಂಗದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ.

ದಿಢೀರನೇ ಸಂಭಾವನೆ ಹೆಚ್ಚಿಸಿಕೊಂಡ 'ಮಹರ್ಷಿ' ನಟಿ!ಕೋಟಿನೂ ಕಮ್ಮಿ ಆಯ್ತಾ?

ಇತ್ತೀಚಿಗೆ ಅಲ್ಲು ಸರ್ಜುನ್‌ ಜೊತೆ ಅಭಿನಯಿಸಿದ 'ಅಲಾ ವೈಕುಂಠಪುರಮುಲೋ' ಚಿತ್ರಕ್ಕೆ 1.5 ರಿಂದ  2 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿತ್ತು. ಅದಾದ ನಂತರ ಕಥೆ ಕೇಳುತ್ತಿರುವ ಪೂಜಾ 2.5 ರಿಂದ 3 ಕೋಟಿ ಡಿಮ್ಯಾಂಡ್‌ ಇಟ್ಟಿದ್ದಾರಂತೆ.