ಬಹುಭಾಷಾ ತಾರೆ ಪೂಜಾ ಹೆಗ್ಡೆ ಕ್ರಿಕೆಟ್‌ ತಾರೆಯನ್ನು ಮದ್ವೆಯಾಗಲಿದ್ದಾರಂತೆ. ಈ ಕುರಿತು ನಟಿ ಹೇಳಿದ್ದೇನು? 

ಟಾಲಿವುಡ್ ಸ್ಟಾರ್ ಹೀರೋಯಿನ್‌ಗಳಲ್ಲಿ ಪೂಜಾ ಹೆಗ್ಡೆ ಕೂಡ ಒಬ್ಬರು. ಇವರು ಮಂಗಳೂರು ಮೂಲದವರಾದರೂ ಟಾಲಿವುಡ್ ಹಾಗೂ ಬಾಲಿವುಡ್​ನಲ್ಲಿ ಬ್ಯುಸಿ ಇದ್ದಾರೆ. ಹೈದಾರಾಬಾದ್​ ಮೊದಲಾದ ಕಡೆ ಮನೆ ಹೊಂದಿದ್ದಾರೆ. ಒಕ ಲೈಲಾ ಚಿತ್ರದ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ ಈ ಚೆಲುವೆ ಈಗ ದಕ್ಷಿಣ ಮತ್ತು ಉತ್ತರದ ಎಲ್ಲಾ ಸ್ಟಾರ್ ಹೀರೋಗಳೊಂದಿಗೆ ಸಿನಿಮಾ ಮಾಡಿದ್ದಾರೆ. ತೆಲುಗಿನಲ್ಲಿ ಮಹೇಶ್ ಬಾಬು, ಅಲ್ಲು ಅರ್ಜುನ್, ಜೂನಿಯರ್ ಎನ್ ಟಿಆರ್, ಪ್ರಭಾಸ್, ರಾಮ್ ಚರಣ್ ಮುಂತಾದ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದ ಪೂಜಾ, ಕಳೆದೊಂದು ವರ್ಷದಿಂದ ಬಾಲಿವುಡ್‌ನಲ್ಲಿಯೂ ಮಿಂಚುತ್ತಿದ್ದಾರೆ. ಹಲವಾರು ಹಿಟ್‌ ಚಿತ್ರಗಳನ್ನು ನೀಡಿದ್ದರೂ, ಸದ್ಯ ಪೂಜಾ ಹೆಗ್ಡೆಯವರ ಸಿನಿಮಾಗಳು ಕಡಿಮೆ ಆಗಿವೆ. ಪೂಜಾ ನಟನೆಯ ಐದು ಸಿನಿಮಾಗಳು ಸೋಲು ಕಂಡಿವೆ. ರಾಧೆ ಶ್ಯಾಮ್, ಬೀಸ್ಟ್, ಆಚಾರ್ಯ, ಸರ್ಕಸ್ ಸಿನಿಮಾಗಳು ಹೀನಾಯ ಸೋಲು ಕಂಡಿವೆ. ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕೊಂಚ ಕಲೆಕ್ಷನ್ ಮಾಡಿದರೂ ಸಹ ನಿರೀಕ್ಷೆಯ ಪ್ರತಿಕ್ರಿಯೆ ಸಿಕ್ಕಿಲ್ಲ. ಪೂಜಾ ಹೆಗ್ಡೆಗೂ ಬೂಸ್ಟ್ ನೀಡಿಲ್ಲ. ಹಾಗಾಗಿ ಪೂಜಾಗೆ ದೊಡ್ಡ ಸಕ್ಸಸ್ ಅನಿವಾರ್ಯವಾಗಿದೆ. ಹಾಗಾಗಿ ಪೂಜಾ ಸದ್ಯ ಹೊಸ ನಿರ್ಧಾರಕ್ಕೆ ಬಂದಿದ್ದು ನಟನೆಯಿಂದ ಐಟಂ ಹಾಡಿನ ಕಡೆ ಗಮನ ಕೊಡುತ್ತಿದ್ದಾರೆ ಎನ್ನಲಾಗಿದೆ.


ಬಾಲಿವುಡ್‌ ಸೇರಿದಂತೆ ಬಹುತೇಕ ಸಿನಿ ಇಂಡಸ್ಟ್ರಿಯಲ್ಲಿ ಈಗ ಮದುವೆಗಳದ್ದೇ ಸದ್ದು. ಅದೇ ರೀತಿ ಪೂಜಾ ಹೆಗ್ಡೆ ಅವರ ಮದುವೆಯ ವಿಷಯವೂ ಈಗ ಚರ್ಚೆಗೆ ಬಂದಿದೆ. ಇವರು ಶೀಘ್ರದಲ್ಲಿಯೇ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಗುಸುಗುಸು ಸುದ್ದಿ ಶುರುವಾಗಿದೆ. ಅಷ್ಟಕ್ಕೂ ಈಕೆಯ ಭಾವಿ ಪತಿ ಮುಂಬೈನ ಖ್ಯಾತ ಕ್ರಿಕೆಟಿಗ ಎನ್ನಲಾಗಿದೆ! ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಸಕತ್‌ ಸುದ್ದಿಯಾಗುತ್ತಿದೆ. ಹೌದು. ಪೂಜಾ ಹೆಗ್ಡೆ ಕ್ರಿಕೆಟಿಗರೊಬ್ಬರನ್ನು ಮದುವೆಯಾಗಲಿದ್ದಾರಂತೆ! ಕಳೆದ ತಿಂಗಳಷ್ಟೇ ಪೂಜಾ ಹೆಗ್ಡೆ ಸಕತ್​ ಸುದ್ದಿಯಾಗಿದ್ದು,ಜನಪ್ರಿಯ ವಿಮರ್ಶಕ ಉಮೈರ್ ಸಂಧು ಟ್ವೀಟ್ ಮಾಡುವ ಮೂಲಕ ಇಂದು ಮಧ್ಯಾಹ್ನ ಪೂಜಾ ಹೆಗ್ಡೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದಿದ್ದರು. ಇದಕ್ಕೆ ಪೂಜಾ ಫ್ಯಾನ್ಸ್​ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ನಟಿ ಮಾತ್ರ ಯಾವುದೇ ರಿಯಾಕ್ಷನ್​ ಕೊಟ್ಟಿರಲಿಲ್ಲ. ಇದೀಗ ಮದುವೆ ಸುದ್ದಿ ಮುನ್ನೆಲೆಗೆ ಬಂದಿದೆ.

ನಾನು ನಂದಿನಿ... ಹಾಡಿಗೆ ನಟಿ ರಮ್ಯಾ ರೀಲ್ಸ್​ ವೈರಲ್​: ಇವ್ಳು ನಮ್​ ನಂದು ಎಂದ ಫ್ಯಾನ್ಸ್​

ಆದರೆ ಈ ಬಗ್ಗೆ ನಟಿ ಮಾತ್ರ ಮೌನ ಧರಿಸಿದ್ದಾರೆ. ತಮ್ಮ ಮದುವೆಯ ಸುದ್ದಿಯನ್ನು ಅವರು ಇದುವರೆಗೆ ಅಲ್ಲಗಳೆದೂ ಇಲ್ಲ, ಮದುವೆಯಾಗುವುದಾದರೆ ಯಾರನ್ನು ಎಂಬ ಬಗ್ಗೆ ಉಲ್ಲೇಖಿಸಿಯೂ ಇಲ್ಲ. ಸ್ಟಾರ್ ಕ್ರಿಕೆಟಿಗ (star cricketer) ಯಾರು ಎಂದು ನಟಿಯನ್ನು ಹೋದಲ್ಲಿ ಬಂದಲ್ಲಿ ಪ್ರಶ್ನಿಸಲಾಗುತ್ತಿದೆ. ಆದರೆ ಪೂಜಾ ಹೆಗ್ಡೆ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಲ ದಿನಗಳ ಹಿಂದೆ, ನಟಿ ಸುಂದರವಾದ ಲೆಹೆಂಗಾಗಳು ಹಾಗೂ ಸೀರೆ ಧರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಮದುಮಗಳಂತೆ ಮಿಂಚಿದ್ದರು. ಮದುವೆಗೆ ಹೇಗೆ ರೆಡಿ ಆಗಬೇಕು ಎಂದು ತೋರಿಸಿದ್ದರು. ಆಗಲೇ ಇವರ ಮದುವೆಯ ವಿಷ್ಯ ಕೆದಕಲಾಗಿತ್ತು. ಇದರ ನಡುವೆಯೇ ಈಗ ಪುನಃ ಮದುವೆ ವಿಷಯ ಮುನ್ನೆಲೆಗೆ ಬಂದಿದ್ದು, ಕ್ರಿಕೆಟಿಗನ ಹೆಸರು ಥಳಕು ಹಾಕಿಕೊಂಡಿದೆ. 

ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ನಟಿ ತಮ್ಮ ನೆಚ್ಚಿನ ಕ್ರಿಕೆಟ್‌ ತಾರೆ ಎಂ.ಎಸ್‌. ದೋನಿ (MS Dhoni) ಎಂದು ಹೇಳಿದ್ದರು. ಪೂಜಾ ಖುದ್ದು ಕ್ರಿಕೆಟ್‌ ಪ್ರೇಮಿ ಕೂಡ. ಆದ್ದರಿಂದ ಇವರು ಈಗ ಯಾರನ್ನು ಮದುವೆಯಾಗುತ್ತಾರೆ ಎನ್ನುವುದು ಕುತೂಹಲದ ವಿಷಯ. ಅಂದಹಾಗೆ ಇವರು, ಬಾಲಿವುಡ್‌ನಲ್ಲಿ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ನಲ್ಲಿ ನಟಿಸಿದ್ದಾರೆ. 

Death Anniversary: ಸಿಲ್ಕ್​ ಸ್ಮಿತಾ ಮೃತದೇಹದ ಜೊತೆ ಹಲವು ಬಾರಿ ಸೆಕ್ಸ್​: ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ಪತ್ರಕರ್ತ