Actress Nithya Menen: ನಟಿ ನಿತ್ಯಾ ಮೆನೆನ್ ಅವರ ಕನ್ನಡ ಪ್ರೀತಿಯ ವಿಡಿಯೋ ತುಣುಕುಗಳು ವೈರಲ್ ಆಗಿವೆ. ಸಂದರ್ಶನದಲ್ಲಿ ಕನ್ನಡ ಹಾಡು ಹಾಡಿ, ಬೆಂಗಳೂರಿನ ಬಗ್ಗೆ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ನಾನು ಕನ್ನಡತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಬಹುಭಾಷಾ ನಟಿ ನಿತ್ಯಾ ಮೆನೆನ್ ಅವರ ಸಂದರ್ಶನದ ವಿಡಿಯೋ ಕ್ಲಿಪ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಅದರಲ್ಲಿಯೂ ನಟಿ ರಶ್ಮಿಕಾ ಮಂದಣ್ಣ ತಾನು ಹೈದರಾಬಾದ್ ನವಳು ಎಂದು ಹೇಳಿಕೊಂಡ ನಂತರವಂತೂ ನಿತ್ಯಾ ಮೆನೆನ್ ಕನ್ನಡ ಮತ್ತು ಬೆಂಗಳೂರು ನಗರದ ಕುರಿತು ಆಡಿರುವ ಮಾತುಗಳ ವಿಡಿಯೋ ತುಣುಕುಗಳು ಹೆಚ್ಚು ವೈರಲ್ ಆಗಿವೆ. ತಮಿಳು ಯುಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ನಿತ್ಯಾ ಮೆನೆನ್ ಕನ್ನಡದ ಹಾಡು ಹಾಡಿದ್ದಾರೆ. ಇದೇ ವೇಳೆ ತೆಲುಗು ಹಾಡು ಹೇಳಿದ್ದಾರೆ.
ಸಂದರ್ಶನದಲ್ಲಿ ನಿರೂಪಕ ನಿಮ್ಮ ನೆಚ್ಚಿನ ಗಾಯಕ ಯಾರು? ವಿಜಯ್ ಪ್ರಕಾಶ್ ಅವರ ಯಾವ ಹಾಡು ನಿಮಗೆ ಇಷ್ಟ ಎಂದು ಕೇಳುತ್ತಾರೆ. ಇದಕ್ಕೆ I Love Him, ನನಗೆ ವಿಜಯ್ ಪ್ರಕಾಶ್ ಅವರ ಧ್ವನಿ ಅಂದ್ರೆ ತುಂಬಾನೇ ಇಷ್ಟ ಎಂದು ಹೇಳಿದ್ದಾರೆ. ಇದೇ ಹಾಡು ಅಂತ ಹೇಳಲು ಸಾಧ್ಯವಿಲ್ಲ. ವಿಜಯ್ ಪ್ರಕಾಶ್ ಧ್ವನಿಯಲ್ಲಿ ಬಂದಿರುವ ಹಾಡುಗಳು ನನಗಿಷ್ಟ ಎನ್ನುತ್ತಾರೆ. ನಿರೂಪಕ, ಯಾವುದಾದರೂ ಒಂದು ಹಾಡು ಹೇಳಿ ಅಂದಾಗ, ನನ್ನ ಮಾತೃಭಾಷೆ ಕನ್ನಡ. ಹಾಗಾಗಿ ಕನ್ನಡದ ಹಾಡು ಹೇಳುತ್ತೇನೆ ಎಂದು ಹೇಳುತ್ತಾರೆ. ಸುದೀಪ್ ಮತ್ತು ನಾನು ಜೊತೆಯಾಗಿ ನಟಿಸಿರುವ ಸಿನಿಮಾಗೂ ವಿಜಯ್ ಪ್ರಕಾಶ್ ಹಾಡಿದ್ದಾರೆ. ಸುದೀಪ್ ಅವರ ಬಚ್ಚನ್ ಸಿನಿಮಾದ, ಹೆಲ್ಲೋ ಹೆಲ್ಲೋ, ಚಮಕ್ ಚಲ್ಲೋ ಹಾಡು ನನಗೆ ತುಂಬಾ ಇಷ್ಟವಾಗುತ್ತೆ ಎಂದು ನಿತ್ಯಾ ಮೆನೆನ್ ಹೇಳಿದ್ದಾರೆ. ಹಾಗೆ ಕನ್ನಡ ಹಾಡನ್ನು ಸಹ ಸಂದರ್ಶನದಲ್ಲಿ ಹಾಡಿದ್ದಾರೆ.
ಕಿಚ್ಚ ಸುದೀಪ್ ಮತ್ತು ನಿತ್ಯಾ ಮೆನೆನ್ ಜೊತೆಯಾಗಿ ಕೋಟ್ಯಧಿಪತಿ-2 ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದ ಸಾಲುತ್ತಿಲ್ಲವೇ, ಸಾಲುತ್ತಿಲ್ಲವೇ ರೊಮ್ಯಾಂಟಿಕ್ ಹಾಡಿಗೆ ವಿಜಯ್ ಪ್ರಕಾಶ್ ಮತ್ತು ಶ್ರೇಯಾ ಘೋಷಾಲ್ ಧ್ವನಿ ನೀಡಿದ್ದಾರೆ. ಯುಟ್ಯೂಬ್‌ನಲ್ಲಿ ಈ ಹಾಡು ಇಂದಿಗೆ 49,138,544 ವ್ಯೂವ್ ಪಡೆದುಕೊಂಡಿದೆ. ಚಿತ್ರದಲ್ಲಿ ಸುದೀಪ್ ಮತ್ತು ನಿತ್ಯಾ ಮೆನೆನ್ ಕೆಮಿಸ್ಟ್ರಿ ಚೆನ್ನಾಗಿ ಮೂಡಿ ಬಂದಿತ್ತು.
ಇದನ್ನೂ ಓದಿ: ಕೋಟಿಗೊಬ್ಬ2 ನಟಿ ನಿತ್ಯಾ ಮೆನನ್‌ಗೆ ಇದೇನಾಯ್ತು; ಏಕಾಏಕಿ ಸಿನಿಮಾ ತೊರೆಯುವುದಾಗಿ ಹೇಳಿದ್ಯಾಕೆ?
ಸಂದರ್ಶನದಲ್ಲಿ ನನ್ನೂರು ಬೆಂಗಳೂರು. ನನಗೆ ಓದಲು, ಬರೆಯಲು ಮತ್ತು ಸ್ಪಷ್ಟವಾಗಿ ಮಾತನಾಡಲು ಒಂದು ಭಾಷೆ ಅಂದ್ರೆ ಕನ್ನಡ. ಸಿನಿಮಾ ಶೂಟಿಂಗ್ ಮುಗಿದ್ಮೇಲೆ ಕೊಚ್ಚಿಗೆ ಫ್ಲೈಟ್ ಟಿಕೆಟ್ ಮಾಡಲು ಎಂದು ಕೇಳುತ್ತಾರೆ. ನಾನು ಬೆಂಗಳೂರಿನಿಂದ ಬರುತ್ತೇನೆ ಅಂತ ಎಲ್ಲರಿಗೂ ಗೊತ್ತಿರುತ್ತೆ. ನೋಡಲು ಮಲಯಾಳಿ ರೀತಿ ಕಾಣೋದರಿಂದ ಕೊಚ್ಚಿ ಅಂತ ಹೇಳುತ್ತಾರೆ. ನನ್ನ ಕಾರ್ KA ಎಂದು ರಿಜಿಸ್ಟರ್ ಅಂತಿದೆ. ರಜೆ ಬಂದ್ರೆ ಸಾಕು ಬೆಂಗಳೂರಿಗೆ ಬರಬೇಕು, ಮನೆಯಲ್ಲಿರಬೇಕು ಅನ್ನಿಸುತ್ತೆ ಎಂದು ನಿತ್ಯಾ ಮೆನೆನ್ ಹೇಳಿದ್ದಾರೆ.

ಬೆಂಗಳೂರು ನನ್ನ ಉಸಿರು. ನಾನು ಈ ನಗರವನ್ನು ತುಂಬಾ ಇಷ್ಟಪಡುತ್ತೇನೆ. ನೀನು ಕೇರಳದವಳು ಅಂತ ಕೇಳಿದಾಗ ಅಲ್ಲ ನಾನು ಬೆಂಗಳೂರಿನವಳು ಎಂದು ಹೇಳುತ್ತೇನೆ. ಸೌಥ್ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವ ನಿತ್ಯಾ ಮೆನೆನ್ ಅವರ ಬನಶಂಕರಿಯಲ್ಲಿದೆ. 90ರ ದಶಕದಲ್ಲಿ ಬೆಂಗಳೂರಿನಲ್ಲಿ ಇಷ್ಟು ಟ್ರಾಫಿಕ್ ಇರಲಿಲ್ಲ. ಎಲ್ಲಿ ನೋಡಿದ್ರೂ ಹಸಿರು ಕಾಣಿಸುತ್ತಿತ್ತು. ಇಂದು ಟ್ರಾಫಿಕ್ ಹೆಚ್ಚಾಗಿದೆ. ಆದರೂ ಬೆಂಗಳೂರು ಇಷ್ಟ ಎಂದು ನಿತ್ಯಾ ಮೆನೆನ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ನಿತ್ಯಾ ಮೆನನ್ ಮತ್ತೊಂದು ಸ್ಪೋಟಕ ಹೇಳಿಕೆ; ಪಿರಿಯಡ್ಸ್ ಇದ್ದರೂ ಬಿಡದ ನಿರ್ದೇಶಕರ ಬಗ್ಗೆ ಅಸಮಾಧಾನ!
