ಮರಾಠಿ ಚಿತ್ರರಂಗದಿಂದ ಬಾಲಿವುಡ್‌ಗೆ ಬಂದ ಮೃಣಾಲ್ ಠಾಕೂರ್ 'ಸೀತಾ ರಾಮಂ' ಚಿತ್ರದಿಂದ ಯಶಸ್ಸು ಗಳಿಸಿದರು. ಕಿಸ್ಸಿಂಗ್ ಸೀನ್‌ಗಳಿಗೆ ಹೆದರಿ ಹಲವು ಅವಕಾಶಗಳನ್ನು ನಿರಾಕರಿಸಿದ್ದರಂತೆ. ನಂತರ ಪೋಷಕರೊಂದಿಗೆ ಚರ್ಚಿಸಿ, ಸಿನಿಮಾ ಕಥೆ ಮುಖ್ಯವೆಂದು ನಿರ್ಧರಿಸಿದರು. ಸದ್ಯಕ್ಕೆ ಸಿಂಗಲ್ ಆಗಿರುವ ಮೃಣಾಲ್, ಮಾಜಿ ಬಾಯ್‌ಫ್ರೆಂಡ್‌ನಿಂದ ಕಲಿತ ಪಾಠದ ಬಗ್ಗೆ ಮಾತನಾಡಿದ್ದಾರೆ. ಕಿಯಾನ್ ರೀವಿಸ್‌ರನ್ನು ಆದರ್ಶ ವ್ಯಕ್ತಿಯಾಗಿ ಪರಿಗಣಿಸುವುದಾಗಿ ಹೇಳಿದ್ದಾರೆ.
ಮೂರ್ನಾಲ್ಕು ಮರಾಠಿ ಸಿನಿಮಾ ಮಾಡಿ ಆನಂತರ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ಸುಂದರಿ ಮೃಣಾಲ್ ಠಾಕೂರ್. ಲವ್ ಯು ಸೋನಿಯಾ, ಸೂಪರ್ 30, ಗೋಸ್ಟ್ ಸ್ಟೋರಿಸ್, ಧಮಾಕಾ, ಜರ್ಸಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಬಿಗ್ ಹಿಟ್ ತಂದುಕೊಟ್ಟಿದ್ದು ತೆಲುಗು ಸೀತಾ ರಾಮಮ್ ಸಿನಿಮಾ. ಎಷ್ಟರ ಮಟ್ಟಕ್ಕೆ ಹಿಟ್ ಆಯ್ತು ಅಂದ್ರೆ ಸಿನಿಮಾ ಡಬ್ ಆದರೂ ಹಕ್ಕು ಪಡೆಯಲು ನಿರ್ಮಾಪಕರು ವಿತರಕರು ಕಾಯುತ್ತಿದ್ದರು. ಇದಾದ ಮೇಲೆ ಮಾಡಿದ 10 ಸಿನಿಮಾಗಳು ಕೂಡ ಸೂಪರ್ ಹಿಟ್. ಆದರೆ ಮೃಣಾಲ್‌ಗೆ ಕಿಸ್ ಸೀನ್ ಮಾಡುವುದು ಭಯ ಆಗುತ್ತಿತಂತೆ.
'ಕಿಸ್ಸಿಂಗ್ ಸೀನ್ ಅಥವಾ ರೊಮ್ಯಾನ್ಸ್ ಸೀನ್‌ಗಳು ಇರುವ ದೃಶ್ಯಗಳನ್ನು ತೆರೆ ಮೇಲೆ ಮಾಡಲು ನಾನು ತುಂಬಾ ಭಯ ಪಡುತ್ತಿದ್ದೆ. ಸೀಸನ್ ಇದ್ದ ಸಿನಿಮಾಗಳಿಂದ ಭಯ ಪಟ್ಟು ಬೇಡ ಬೇಡ ಎಂದು ಹಲವು ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದೀನಿ. ಆದರೆ ಎಷ್ಟು ದಿನಗಳ ಕಾಲ ನಾನು ಇದನ್ನು ಹೇಳಿಕೊಂಡು ಮುಂದುವರೆಸಲಿ? ಒಂದು ಸಮಯ ಎದುರಾಗಿತ್ತು....ಆಗ ನನ್ನ ಪೋಷಕರನ್ನು ಪಕ್ಕದಲ್ಲಿ ಕೂರಿಸಿಕೊಂಡು ಚರ್ಚೆ ಮಾಡಿದೆ. ಅಪ್ಪ ಸಿನಿಮಾದ ಕಥೆ ಒಪ್ಪಿಕೊಂಡು ನಾನು ಮುಂದುವರೆಯುತ್ತೀನಿ ಆದರೆ ಒಂದೊಂದು ಸೀನ್‌ಗಳನ್ನು ನಾನು ಏನೇ ಮಾಡಿದರೂ ಮಿಸ್ ಮಾಡಲು ಆಗುವುದಿಲ್ಲ. ಸಿನಿಮಾ ಮಾಡಲೇ ಬೇಕು ಆದರೆ ಒಂದು ಸೀನ್‌ನಿಂದ ಸಂಪೂರ್ಣ ಪ್ರಾಜೆಕ್ಟ್ ಕೈ ಬಿಡಲು ಆಗುವುದಿಲ್ಲ. ಸಿನಿಮಾ ಒಪ್ಪಿಕೊಂಡು ಮಾಡಲು ಮುಂದುವರೆದಾಗ ನನ್ನ ಸಂಬಂಧಿಕರು ಕರೆ ಮಾಡಿದರು...ಓ ಈಗ ನೀನು ಈ ವ್ಯಕ್ತಿಯನ್ನು ಡೇಟ್ ಮಾಡುತ್ತಿರುವೆ ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದರು. ಅವರ ಮಾತುಗಳನ್ನು ಕೇಳಿ ಆಶ್ಚರ್ಯ ಆಯ್ತು. ಆದರೆ ನಾವು ಕಲಾವಿದರು ತೆರೆ ಮೇಲೆ ನಮ್ಮ ಕೆಲಸ ಮಾಡುತ್ತೀವಿ ಅಷ್ಟೇ..' ಎಂದು ಈ ಹಿಂದೆ ಸಂದರ್ಶನ ಒಂದರಲ್ಲಿ ಮೃಣಾಲ್ ಮಾತನಾಡಿದ್ದಾರೆ.
ನಾವಿಬ್ಬರೂ ಮಿಡಲ್ ಕ್ಲಾಸ್ ಕುಟುಂಬದಿಂದ ಬೆಳೆದು ಬಂದವರು: ವಿಜಯ್ ದೇವರಕೊಂಡ ಬಗ್ಗೆ ರಶ್ಮಿಕಾ ಮಂಣ್ಣ
ಸದ್ಯ ಮೃಣಾಲ್ ಸಿಂಗಲ್ ಲೈಫ್ ಎಂಜಾಯ್ ಮಾಡುತ್ತಿರುವುದಾಗಿ ಪಬ್ಲಿಕ್‌ನಲ್ಲಿ ಹೇಳಿಕೊಂಡಿದ್ದಾರೆ. ಆದರೂ ಕಿಯಾನ್ ರೀವಿಸ್‌ರನ್ನು ಐಡಿಯಲ್ ಮ್ಯಾನ್ ಆಗಿ ಆದರಿಸುತ್ತೀನಿ ಎಂದಿದ್ದಾರೆ. ಆದರೆ ಹಿಂದಿನ ಬಾಯ್‌ಫ್ರೆಂಡ್ ಬಿಟ್ಟು ಹೋದ ಮೇಲೆ ಜೀವನದ ಪಾಠ ಕಲಿತಿದ್ದೀನಿ ಎಂದಿದ್ದಾರೆ. ಸಾಮಾನ್ಯ ಹುಡುಗಿ ನಟಿಯಾಗುವುದನ್ನು ಮಾಜಿ ಬಾಯ್‌ಫ್ರೆಂಡ್ ಸಹಿಸಿಕೊಳ್ಳಲು ಆಗಲಿಲ್ಲ ಹೀಗಾಗಿ ನಾಯಕಿಯರನ್ನು ಪ್ರೀತಿಸುವುದಿಲ್ಲ ಎಂದು ಬ್ರೇಕಪ್ ಮಾಡಿಕೊಂಡರಂತೆ. ಆದರೆ ಇದುವರೆಗೂ ಭೇಟಿ ಮಾಡಿರುವ ಹುಡುಗರಲ್ಲಿ ಯಾರೂ ಅಷ್ಟು ಅಟ್ರಾಕ್ಟಿವ್ ಆಗಿಲ್ಲ ಆದರೆ ಒಳ್ಳೆಯವರು. ಮುಂದೊಂದು ದಿನ ಪ್ರೀತ ಆದರೆ ಹಂಚಿಕೊಳ್ಳುತ್ತೀನಿ ಎಂದಿದ್ದಾರೆ.
ನಿಜಕ್ಕೂ ಈ ಪ್ರಪಂಚದ ಸುಂದರಿ ನೀನಾ? ಅನುಷ್ಕಾ ಶರ್ಮಾ ಪ್ರಶ್ನೆಗೆ ಅತಿ ಸ್ಮಾರ್ಟ್ ಉತ್ತರ ಕೊಟ್ಟ ಐಶ್ವರ್ಯ ರೈ!

