Asianet Suvarna News Asianet Suvarna News

ಅರೆರೆ.. KGF​ ನಟಿಗೆ ಇದೇನಾಯ್ತು? ಆಸ್ಪತ್ರೆಯಲ್ಲಿ 9 ದಿನ! ಮಾಹಿತಿ ನೀಡಿದ ಮೌನಿ ರಾಯ್

ನಟಿ ಮೌನಿ ರಾಯ್​ 9 ದಿನಗಳವರೆಗೆ ಆಸ್ಪತ್ರೆಗೆ ದಾಖಲಾಗಿದ್ದು, ಬಿಡುಗಡೆಯಾಗಿರುವ ಕುರಿತು ಪೋಸ್ಟ್​ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ನಟಿಗೆ  ಆಗಿದ್ದೇನು?
 

Actress Mouni Roy Returns Home After 9 Days In Hospital suc
Author
First Published Jul 23, 2023, 1:22 PM IST

ಕೆಜಿಎಫ್​ ಖ್ಯಾತಿಯ ನಟಿ ಮೌನಿ ರಾಯ್ ರಾಯ್​ (Mouni Roy) ಖ್ಯಾತ  ಕಿರುತೆರೆ ನಟಿ. ಈಕೆ  ಬಾಲಿವುಡ್​ ತಾರೆ ಕೂಡ.  ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮೌನಿ ಹೆಚ್ಚಾಗಿ ಫೇಮಸ್​ ಆಗಿರುವುದು ಹಿಂದಿ  ಧಾರಾವಾಹಿಗಳ ಮೂಲಕ.  ಪಶ್ಚಿಮ ಬಂಗಾಳದ ಮೂಲದ ಮೌನಿ 2007 ರ ಹಿಂದಿ ಸೀರಿಯಲ್ `ಕ್ಯೂಂಕಿ ಸಾಸ್ ಭಿ ಕಬಿ ಬಹು ಥಿ' ಮೂಲಕ ನಟನೆ ಆರಂಭಿಸಿದವರು. ಆದರೆ ಇವರಿಗೆ ಮೊದಲ ಖ್ಯಾತಿ ಕೊಟ್ಟಿದ್ದು ದೇವೋಂಕೆ ದೇವ ಮಹಾದೇವ ಸೀರಿಯಲ್​ನ ಪೌರಾಣಿಕ ಪಾತ್ರದಲ್ಲಿ. ಇದರಲ್ಲಿ ಈಕೆ  ಸತಿ ಪಾತ್ರ ವಹಿಸಿದ್ದರು. ನಂತರ ನಾಗಿಣಿ ಧಾರಾವಾಹಿ ಮೂಲಕ ಮತ್ತಷ್ಟು ಖ್ಯಾತಿ ಪಡೆದರು. 2018 ರಲ್ಲಿ ತೆರೆಕಂಡ ಅಕ್ಷಯ ಕುಮಾರ್ ಅಭಿನಯದ `ಗೋಲ್ಡ್' ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದರು ಮೌನಿ.  ನಂತರ ಕನ್ನಡದ ಕೆಜಿಎಫ್ ಚಿತ್ರದಲ್ಲಿ ಯಶ್ ಜೊತೆ ಒಂದು ಗೀತೆಯಲ್ಲಿ ಕಾಣಿಸಿಕೊಂಡರು. 2019 ರಲ್ಲಿ ತೆರೆಕಂಡ ಜಾನ್ ಅಬ್ರಾಹಂ ನಟನೆಯ `ರಾ' ಚಿತ್ರದಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದ ‘ಗಲಿ ಗಲಿ ಮೇ..’ ಹಾಡಿನಲ್ಲಿ ಯಶ್​ ಜೊತೆ ಸಕತ್​ ಸ್ಟೆಪ್​ ಹಾಕಿದ್ದಾರೆ. ನಂತರ ಕಳೆದ ಸೆಪ್ಟೆಂಬರ್​ನಲ್ಲಿ ಬಿಡುಗಡೆಗೊಂಡ  'ಬ್ರಹ್ಮಾಸ್ತ್ರ' ಚಿತ್ರದ ಜುನೂನ್ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಮೌನಿ ಚಿತ್ರದ ಮುಖ್ಯ ಕಲಾವಿದರಾದ ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಗಿಂತ ಉತ್ತಮ ಪಾತ್ರ ನಿರ್ವಹಿಸಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದವು. 

ಇತ್ತೀಚೆಗಷ್ಟೇ ನಟಿ,  ವಿಮಾನದಲ್ಲಿ ಪ್ರಯಾಣಿಸಲು ಏರ್​ಪೋರ್ಟ್​ಗೆ ಹೋಗಿದ್ದಾಗ ಪಾಸ್​ಪೋರ್ಟ್​ ಅನ್ನೇ ಮರೆತು ಹೋಗಿದ್ದರು!  ಆಗಾಗ್ಗೆ ವಿದೇಶಗಳಿಗೆ ಹೋಗುತ್ತಿರುವ ನಟಿ ಮೌನಿ ರಾಯ್​  ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai Airport) ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದರು. ಆದರೆ ಈ ಸಮಯದಲ್ಲಿಯೇ ಅವರು ಪಾಸ್​ಪೋರ್ಟ್​ ತರಲು ಮರೆತಿರುವ ವಿಷಯ ತಿಳಿದಿದೆ! ಪಾಸ್​ಪೋರ್ಟ್​ ಇಲ್ಲದ ಕಾರಣ ಅವರನ್ನು ವಾಪಸ್​ ಮನೆಗೆ ಕಳುಹಿಸಲಾಗಿತ್ತು.  ಏರ್​ಪೋರ್ಟ್​ ಸಿಬ್ಬಂದಿ ಒಳಗೆ ಹೋಗಲು ಅವಕಾಶ ನೀಡಲಿಲ್ಲ. ಇದರ ವಿಡಿಯೋ ಸಕತ್​ ವೈರಲ್​ ಆಗಿತ್ತು.  ಇದೀಗ ನಟಿಯ ಕುರಿತು ಆಘಾತಕಾರಿ ವಿಷಯವೊಂದು ಬಹಿರಂಗಗೊಂಡಿದೆ. ಅದೇನೆಂದರೆ ನಟಿ 9 ದಿನಗಳ ಕಾಲ ದಾಖಲಾದ ಆಸ್ಪತ್ರೆಗೆ ದಾಖಲಾಗಿದ್ದರಂತೆ! ಈ ಕುರಿತು ಅವರು ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಸಹಿತ ಮಾಹಿತಿ ನೀಡಿದ್ದು ಫ್ಯಾನ್ಸ್​ ಶಾಕ್​ ಆಗಿದ್ದಾರೆ. ಅವರು ತಾವು ಆಸ್ಪತ್ರೆಗೆ ದಾಖಲಾಗಿದ್ದ ಕಾರಣವನ್ನು ನೀಡಲಿಲ್ಲ. ಬದಲಿಗೆ  ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದಾಗಿ ತಿಳಿಸಿ  ಪೋಸ್ಟ್ ಮಾಡಿದ್ದಾರೆ. ಒಂಬತ್ತು ದಿನಗಳವರೆಗೆ ಆಸ್ಪತ್ರೆಯಲ್ಲಿ ಇದ್ದೆ. ಇಂದು ಡಿಸ್​ಚಾರ್ಜ್​ ಆಗಿದ್ದೇನೆ ಎಂದಿದ್ದಾರೆ.

Mouni Roy: ಪಾಸ್​ಪೋರ್ಟ್​ ಮರೆತು ಏರ್​ಪೋರ್ಟ್​ಗೆ ಹೋದ KGF ನಟಿ: ಮುಂದೇನಾಯ್ತು?

ತಾವು ಆಸ್ಪತ್ರೆಗೆ ದಾಖಲಾಗಿದ್ದ ವಿಷಯ ಕೇಳಿ ಫ್ಯಾನ್ಸ್ ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ ಅದಕ್ಕೆ ನಟಿ ಉತ್ತರಿಸಿಲ್ಲ. ಬದಲಿಗೆ ನಾನು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ತಾವು ಆಸ್ಪತ್ರೆಗೆ ದಾಖಲಾಗಿದ್ದ ವಿಷಯ ತಿಳಿದಿದ್ದ ಅಭಿಮಾನಿಗಳು ಶುಭ ಹಾರೈಸಿರುವುದಕ್ಕೆ ಧನ್ಯವಾದ ಹೇಳಿದ್ದಾರೆ. ಕಾರಣ ಕೇಳಲು ಅಭಿಮಾನಿಗಳು ಕಾತರರಾಗಿದ್ದರೂ,  ಶೀಘ್ರದಲ್ಲೇ ಗುಣವಾಗಲಿ ಎಂಬ ಸಂದೇಶ ಕಳಿಸುತ್ತಿದ್ದಾರೆ. ಕಿರುತೆರೆ ಕಲಾವಿದರಾದ  ನಿಯಾ ಶರ್ಮಾ (Nia Sharma), ದಿಶಾ ಪರ್ಮಾರ್‌, ಕರಣ್ ಟ್ಯಾಕರ್‌ ಸೇರಿದಂತೆ ಹಲವು  ಸೆಲೆಬ್ರಿಟಿಗಳು   ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ತಮ್ಮ ಪತಿಯ ಜೊತೆಗಿರುವ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.  2022ರ ಜನವರಿಯಲ್ಲಿ  ನಟಿ, ಉದ್ಯಮಿ ಸೂರಜ್ ನಂಬಿಯಾರ್ ಅವರೊಂದಿಗೆ ವಿವಾಹವಾದರು.  ಇತ್ತೀಚೆಗೆ ಸೂರಜ್ ನಂಬಿಯಾರ್ (Sooraj Nambiyar) ಅವರೊಂದಿಗಿನ  ಮದುವೆಯ ಕುರಿತು ಈಚೆಗೆ ಮಾತನಾಡಿದ್ದ ಮೌನಿ,  'ನಾನು ಎಲ್ಲರಿಗೂ ಮದುವೆಯನ್ನು ಶಿಫಾರಸು ಮಾಡುತ್ತೇನೆ. ನಿಮಗೊಬ್ಬ ಉತ್ತಮ ಸ್ನೇಹಿತ ಸಿಗುತ್ತಾನೆ. ಪ್ರತಿಯೊಬ್ಬರ ಜೀವನದಲ್ಲಿಯೂ ಮದುವೆ ಮುಖ್ಯ' ಎನ್ನುವ ಮೂಲಕ ತಮ್ಮ ಸುಖಿ ದಾಂಪತ್ಯದ ಕುರಿತು ಹೇಳಿದ್ದರು. 

ಬ್ಲ್ಯಾಕ್ ಅಂಡ್ ವೈಟ್ ಗೌನ್‌ನಲ್ಲಿ ಮಿಂಚಿದ 'ಕೆಜಿಎಫ್' ಸುಂದರಿ
 

 
 
 
 
 
 
 
 
 
 
 
 
 
 
 

A post shared by mon (@imouniroy)

Follow Us:
Download App:
  • android
  • ios