Asianet Suvarna News Asianet Suvarna News

ಡಾರ್ಲಿಂಗ್ ಕೃಷ್ಣ ಮನೆಗೆ ಬಂದ ಗೌರಿ..ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್

ಸ್ಯಾಂಡಲ್ವುಡ್ ಗೆ ಖುಷಿ ಸುದ್ದಿ ಸಿಕ್ಕಿದೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ಜೋಡಿಗೆ ಮುದ್ದಾದ ಮಗುವಾಗಿದೆ. ಮಿಲನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿ ಸುದ್ದಿಯನ್ನು ಡಾರ್ಲಿಂಗ್ ಕೃಷ್ಣ ಹಂಚಿಕೊಂಡಿದ್ದಾರೆ.

Actress Milana Nagaraj gave birth to baby girl
Author
First Published Sep 5, 2024, 8:46 AM IST | Last Updated Sep 5, 2024, 8:59 AM IST

ಪತ್ನಿ ಮಿಲನಾ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆಂದು ಕೃಷ್ಣ ತಿಳಿಸಿದ್ದಾರೆ. ಇದು ಹೆಣ್ಣು ಮಗು ಎಂದು ಮುತ್ತಿರುವ ಎಮೋಜಿ ಹಾಕಿರುವ ಕೃಷ್ಣ, ತಾಯಿ ಮತ್ತು ಮಗು ಚೆನ್ನಾಗಿದ್ದಾರೆ. ಈ ಪಯಣದಲ್ಲಿ ನೀವು ತೋರಿದ ನೋವು, ತ್ಯಾಗ ಮತ್ತು ಧೈರ್ಯಕ್ಕಾಗಿ @milananagaraj ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ. ಈ ಅದ್ಭುತ ಪ್ರಯಾಣದಲ್ಲಿ ಸಾಗುತ್ತಿರುವ ಎಲ್ಲಾ ತಾಯಂದಿರಿಗೆ ಒಂದು ದೊಡ್ಡ ನಮಸ್ಕಾರ. ಮಹಿಳೆಯರ ಬಗ್ಗೆ ನನ್ನ ಗೌರವವು ದ್ವಿಗುಣಗೊಂಡಿದೆ.  ನಾನು ಹೆಮ್ಮೆ ಮತ್ತು ಅದೃಷ್ಟದ ತಂದೆ ಏಕೆಂದರೆ ನನಗೆ ಈಗ ಮಗಳಿದ್ದಾಳೆ ಎಂದು ಡಾರ್ಲಿಂಗ್ ಕೃಷ್ಣ ಖುಷಿಯಿಂದ ಪೋಸ್ಟ್ ಹಂಚಿಕೊಂಡಿದ್ದಾರೆ.

ಕೆಲವೇ ಕೆಲವು ಸಮಯದ ಹಿಂದೆ ಡಾರ್ಲಿಂಗ್ ಕೃಷ್ಣ ಈ ಪೋಸ್ಟ್ ಹಂಚಿಕೊಂಡಿದ್ದು, ಮೋಸ್ಟ್ಲಿ ನಿನ್ನೆ ಮಧ್ಯರಾತ್ರಿ ಮಿಲನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅಂದಾಜಿಸಲಾಗ್ತಿದೆ. ಸೆಪ್ಟೆಂಬರ್‌ ತಿಂಗಳಿನಲ್ಲಿ ಹೆರಿಗೆ ಡೇಟ್‌ ನೀಡಿದ್ದರಿಂದ ಮಿಲನಾ ನಾಗರಾಜ್‌, ಮೂರ್ನಾಲ್ಕು ದಿನಗಳ ಹಿಂದೆಯೇ ತಮ್ಮ ಕೆಲಸವನ್ನು ಪೂರ್ಣಗೊಳಿಸಿದ್ದರು. ಅದ್ರ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಹೆರಿಗೆ ನಂತ್ರ ಸಿನಿಮಾ ಕೆಲಸಕ್ಕೆ ಸ್ವಲ್ಪ ದಿನ ಬ್ರೇಕ್ ನೀಡಬೇಕಾಗುವ ಕಾರಣ ಮಿಲನಾ ನಾಗರಾಜ್ ಎಲ್ಲ ಪ್ರಾಜೆಕ್ಟ್‌ ಮುಗಿಸಿದ್ದರು. 

ಗರ್ಭಿಣಿಯಾದಾಗಿನಿಂದ್ಲೂ ಮಿಲನಾ ನಾಗರಾಜ್ ವಿಶ್ರಾಂತಿ ಪಡೆದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅವರು, ತಮ್ಮ ಅನೇಕ ಫೋಟೋಗಳನ್ನು ಹಂಚಿಕೊಳ್ತಿದ್ದಾರೆ. ಬೇಬಿಮೂನ್ (Babymoon) ಅಂತ ವಿದೇಶಕ್ಕೆ ಹೋಗಿದ್ದ ಮಿಲನಾ – ಕೃಷ್ಣ ನಂತ್ರ ಬೇಬಿ ಬಂಪ್ ಫೋಟೋ ಶೂಟ್ (Photo Shoot) ಮಾಡಿಸಿದ್ದರು. ಭಿನ್ನ ಶೈಲಿಯಲ್ಲಿ ಅವರ ಫೋಟೋ ಶೂಟ್ ನಡೆದಿತ್ತು. ಕ್ಯಾಂಡಲ್ ಲೈಟ್ ಮತ್ತು ಕ್ವೀನ್ ಥೀಮ್ ನಲ್ಲಿ ಫೋಟೋ ಶೂಟ್ ಗಮನ ಸೆಳೆದಿತ್ತು. 

ಸಹಾಯಹಸ್ತ ಮರೆಯದಿರಲು ಸ್ವಂತ ಮನೆಗೆ 'ಅಂಬರೀಷ ನಿಲಯ' ಹೆಸರಿಟ್ಟ ನಟ ಸುಧೀರ್!

ಮೂರು ವಾರದ ಹಿಂದೆ ಅದ್ಧೂರಿಯಾಗಿ ಸೀಮಂತ ಸಮಾರಂಭ ಕೂಡ ನಡೆದಿದೆ. ಇದ್ರ ಫೋಟೋಗಳನ್ನು ಮಿಲನಾ ನಾಗರಾಜ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಆರೋಗ್ಯದ ಬಗ್ಗೆಯೂ ಕಾಳಜಿವಹಿಸಿರುವ ಮಿಲನಾ ನಾಗರಾಜ್, ವರ್ಕ್ ಔಟ್ ಮಾಡುತ್ತಿರುವ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದರು. ಯೋಗ, ಪ್ರಾಣಾಯಾಮ ಮಾಡುತ್ತಿರುವ ಅವರು, ಕೆಲ ಆಸನಗಳನ್ನು ಮಾಡ್ತಿದ್ದ ವಿಡಿಯೋ ಹಂಚಿಕೊಂಡಿದ್ದರು.

ಮಿಲನಾ ನಾಗರಾಜ್, ತಾವು ಗರ್ಭಿಣಿ ಎಂಬ ಸಂಗತಿಯನ್ನು ಕೂಡ ಇನ್ಸ್ಟಾಗ್ರಾಮ್ ಮೂಲಕವೇ ಅಭಿಮಾನಿಗಳಿಗೆ ತಿಳಿಸಿದ್ದರು. ಆರು ವರ್ಷ ಪ್ರೀತಿಸಿ, 2021ರಲ್ಲಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಕೈ ಹಿಡಿದಿದ್ದರು. ಮೂರು ವರ್ಷಗಳ ಹಿಂದೆ ಮದುವೆಯಾದ ಜೋಡಿ ಈಗ ಚೊಚ್ಚಲ ಮಗುವಿಗಾಗಿ ಕಾಯುತ್ತಿದ್ದರು. ರೀಲ್ ನಲ್ಲಿ ಮಾತ್ರವಲ್ಲ ರಿಯಲ್ ನಲ್ಲೂ ಸುಂದರ ಜೋಡಿಯನ್ನು ಮೆಚ್ಚಿಕೊಂಡಿರುವ ಕನ್ನಡಿಗರು ಈಗ ಮಗುವನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು.

ಬಿಗ್ ಬಾಸ್ ನಿರೂಪಣೆಗೆ ಕಮಲ್ ಹಾಸನ್ ಬದಲು ವಿಜಯ್ ಸೇತುಪತಿ, ಬರೋಬ್ಬರಿ 50 ಕೋಟಿ ಸಂಭಾವನೆ?

ಈಗ ಮಿಲನಾ ನಾಗರಾಜ್‌ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅಭಿಮಾನಿಗಳಿಂದ ಶುಭಾಷಯದ ಮಳೆ ಹರಿದು ಬರ್ತಿದೆ. ನಾನು ಏನ್‌ ಗೆಸ್‌ ಮಾಡಿದ್ನೋ ಅದು ಸರಿಯಾಗಿದೆ ಅಂತ ಚೈತ್ರಾ ವಾಸುದೇವನ್‌ ಕಮೆಂಟ್‌ ಮಾಡಿದ್ದಾರೆ. ಅನೇಕ ಸ್ಯಾಂಡಲ್ವುಡ್‌ ಕಲಾವಿದರು ಹಾಗೂ ಕಿರುತೆರೆ ಕಲಾವಿದರು, ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ಅವರಿಗೆ ಶುಭಾಷಯ ಹೇಳ್ತಿದ್ದಾರೆ.

Latest Videos
Follow Us:
Download App:
  • android
  • ios