Actress Meena: ಆ ನಟನ ಮದ್ವೆ ಸುದ್ದಿ ಕೇಳಿ ನನ್ನ ಹೃದಯನೇ ಒಡೆದು ಹೋಗಿತ್ತು ಎಂದ ನಟಿ
ಕನ್ನಡ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ನಟಿ ಮೀನಾ ಅವರುಇದೇ ಮೊದಲ ಬಾರಿಗೆ ತಮ್ಮ ಕ್ರಷ್ ಬಗ್ಗೆ ಮಾತನಾಡಿದ್ದಾರೆ. ಇವರು ಹೇಳಿದ್ದೇನು?
ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರೋ ಬಹುಮುಖ ಪ್ರತಿಭೆ, ಬಹುಭಾಷಾ ನಟಿ ಮೀನಾ. ಇವರ ಪೂರ್ತಿ ಹೆಸರು ಮೀನಾ ದುರೈರಾಜ್ (Meena Durairaj) ಆದರೂ ಮೀನಾ ಎಂದಷ್ಟೇ ಪ್ರಸಿದ್ಧಿ ಪಡೆದಿರುವ ನಟಿ, 90 ರ ದಶಕದಲ್ಲಿ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದರು. ನಟನೆಯ ಜೊತೆಗೆ, ಇವರು ಹಿನ್ನೆಲೆ ಗಾಯಕಿ, ಡಬ್ಬಿಂಗ್ ಕಲಾವಿದೆ ಕೂಡ. ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳು (Filmfare award), ಮೂರು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಅತ್ಯುತ್ತಮ ನಟಿಗಾಗಿ ಎರಡು ನಂದಿ ಪ್ರಶಸ್ತಿ ಮತ್ತು ಸಿನಿಮಾ ಎಕ್ಸ್‌ಪ್ರೆಸ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಅವರು ಪಡೆದಿರುವುದು ಮಾತ್ರವಲ್ಲದೇ, ತಮಿಳುನಾಡು ಸರ್ಕಾರದ ಕಲೈಮಾಮಣಿ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಕೆಲ ತಿಂಗಳ ಹಿಂದೆ ಪತಿ ವಿದ್ಯಾಸಾಗರ್ ಅವರನ್ನು ಮೀನಾ ಕಳೆದುಕೊಂಡಿದ್ದಾರೆ. ಕೋವಿಡ್ ಸೋಂಕಿನಿಂದ ವಿದ್ಯಾಸಾಗರ್ (Vidya Sagar) ಅವರು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದರು. ಶ್ವಾಸಕೋಶ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾ ಸಾಗರ್ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದರ ಬಳಿಕ 46 ವರ್ಷದ ಮೀನಾ ಅವರು ಎರಡನೆಯ ಮದುವೆಯಾಗುತ್ತಿದ್ದಾರೆ ಎಂಬ ವದಂತಿ ಕೂಡ ಹರಡಿತ್ತು.
ಇದೀಗ ತಮ್ಮ ಜೀವನದ ಕೆಲವೊಂದು ಕುತೂಹಲದ ವಿಷಯಗಳನ್ನು ಮೀನಾ ತೆರೆದಿಟ್ಟಿದ್ದಾರೆ. ತಮಿಳು ಚಾನೆಲ್ ಸಿನಿ ಉಲಗಂನಲ್ಲಿ ನಟಿ ಸುಹಾಸಿನಿ ನಡೆಸಿಕೊಡುವ ಚಾಟ್ ಷೋಗೆ ಆಗಮಿಸಿದ್ದ ಮೀನಾ ತಮ್ಮ ಕ್ರಷ್ ಕುರಿತು ಹೇಳಿಕೊಂಡಿದ್ದಾರೆ. ವಿದ್ಯಾ ಸಾಗರ್ (Vidya Sagar) ಅವರನ್ನು ಮದುವೆಯಾಗುವ ಮುನ್ನ ತಮ್ಮ ಕ್ರಷ್ ಯಾರಾಗಿದ್ದರು, ಕೊನೆಗೆ ಏನಾಯ್ತು ಎಂಬ ಕುತೂಹಲದ ವಿಷಯವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಆ ನಟ ಮದುವೆಯಾದಾಗ ನನ್ನ ಹಾರ್ಟ್ ಬ್ರೇಕ್ ಆಗಿತ್ತು ಎಂದೂ ನಟಿ ಹೇಳಿದ್ದಾರೆ. 'ನನಗೆ ಬಾಲಿವುಡ್ ನಟನ ಮೇಲೆ ಕ್ರಷ್ (Crush) ಆಗಿತ್ತು. ಅವರ ಮದುವೆಯ ಸುದ್ದಿ ನನ್ನ ಹಾರ್ಟ್ ಬ್ರೇಕ್ ಮಾಡಿತ್ತು' ಎಂದು ಮೀನಾ ಮುಲಾಜಿಲ್ಲದೇ ಹೇಳಿಕೊಂಡಿದ್ದಾರೆ.
Amitabh Bachchan: ಪಕ್ಕೆಲುಬಿನ ಕಾರ್ಟಿಲೆಜ್ ಮುರಿದು ನೋವಾಗ್ತಿದೆ: ಆರೋಗ್ಯದ ಬಗ್ಗೆ ಅಮಿತಾಭ್ ಹೇಳಿದ್ದೇನು?
ಅಷ್ಟಕ್ಕೂ ಮೀನಾ ಅವರಿಗೆ ಕ್ರಷ್ ಆಗಿದ್ದ ನಟ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ಅಂತೆ! ನನ್ನ ಕ್ರಷ್ ಆಗಿದ್ದರು ಹೃತಿಕ್ ಎಂದಿದ್ದಾರೆ ಮೀನಾ. ಅವರ ಮೇಲಿನ ಪ್ರೀತಿಯ ಕುರಿತು ಮಾತನಾಡಿದ ಮೀನಾ, 'ನಾನು ಹೃತಿಕ್ ರೋಷನ್ (Hrithik Roshan) ಅವರನ್ನು ತುಂಬಾ ಪ್ರೀತಿಸುತ್ತಿದ್ದೆ. ನನಗೆ ಅವರಂಥ ಹುಡುಗ ಬೇಕು ಎಂದು ಅಮ್ಮನಿಗೆ ಹೇಳುತ್ತಿದ್ದೆ. ನನಗೆ ಅಗಿನ್ನೂ ಮದುವೆಯಾಗಿರಲಿಲ್ಲ. ಮನೆಯಲ್ಲಿ ಮದುವೆಯ ಪ್ರಸ್ತಾಪ ಮಾಡುತ್ತಿದ್ದ ವೇಳೆ, ಅಮ್ಮನಿಗೆ ಇದೇ ವಿಷಯ ಹೇಳುತ್ತಿದ್ದೆ. ಆದರೆ ಈ ಬಗ್ಗೆ ಹೃತಿಕ್ ಅವರ ಮುಂದೆ ಎಂದಿಗೂ ಹೇಳಿಕೊಂಡಿರಲಿಲ್ಲ.ಆದರೆ ಅವರ ಮೇಲೆ ಪ್ರೀತಿ ಇದದ್ದಂತೂ ನಿಜ' ಎಂದಿರುವ ಮೀನಾ, ಹೃತಿಕ್ ಮದುವೆಯ ದಿನದಂದು ನನ್ನ ಹಾರ್ಟ್ ಬ್ರೇಕ್ ಆಗಿತ್ತು ಎಂದಿದ್ದಾರೆ. ಇದೇ ವೇಳೆ, ನಟಿ ಸುಹಾಸಿನಿ ಅವರು ಮೀನಾ, ಹೃತಿಕ್ ಅವರನ್ನು ಭೇಟಿಯಾದ ಹಳೆಯ ಫೋಟೋವನ್ನು ಶೇರ್ ಮಾಡಿಕೊಂಡರು.
ಇದೇ ವೇಳೆ ಮಗಳು ನೈನಿಕಾ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಮೀನಾ ಮಾತನಾಡಿದ್ದಾರೆ. ಈ ಬಗ್ಗೆ ನನಗೆ ಖುಷಿ ಇದೆ. ವಿಜಯ್ ಅಭಿನಯದ ತೇರಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸನ್ನು ಕಂಡಿತ್ತು. ನನಗೆ ಇದು ತುಂಬಾ ಹೆಮ್ಮೆ ವಿಷಯವಾಗಿದೆ ಎಂದಿದ್ದಾರೆ. ಇದೇ ವೇಳೆ ತಮ್ಮ ಸಿನಿ ಪಯಣದ ಕುರಿತೂ ಮಾತನಾಡಿದ ಅವರು, ಪಡಯಪ್ಪ ಚಿತ್ರದಲ್ಲಿ ರಮ್ಯಾ ಕೃಷ್ಣನ್ ನಿರ್ವಹಿಸಿದ ನೆಗೆಟಿವ್ ಪಾತ್ರಕ್ಕೆ ತನ್ನನ್ನು ಮೊದಲು ಆಯ್ಕೆ ಮಾಡಿದ್ದರು. ಆದರೆ ಆ ಪಾತ್ರ ಮಾಡಬೇಡ ಎಂದು ನನ್ನ ತಾಯಿ ಹೇಳಿದ್ರು ಹೀಗಾಗಿ ಮಾಡಿಲ್ಲ ಎಂದು ಹೇಳಿದರು. ನಾಯಕಿ ಪಾತ್ರಗಳಲ್ಲಿ ಮಿಂಚುತ್ತಿರುವಾಗ ವಿಲನ್ ಆಗಿ ನಟಿಸಿದರೆ ಸಿನಿ ಜರ್ನಿ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಅಮ್ಮ ಒಪ್ಪಿರಲಿಲ್ಲ. ಆದರೆ ನಂತರ ಆ ಪಾತ್ರ ಮಾಡಬೇಕಿತ್ತು ಎಂದು ನನಗೂ ಅನಿಸಿತ್ತು ಎಂದು ಮೀನಾ ಹೇಳಿದರು.
ಮಗಳು 25 ವರ್ಷದವರೆಗೆ ಹೀಗಿರಬೇಕು ಎಂದಿದ್ದಾರೆ ನಟಿ Alia Bhatt!
ಅಂದಹಾಗೆ ಮೀನಾ, 3 ದಶಕಗಳಿಗೂ ಹೆಚ್ಚು ಕಾಲ ಸೌತ್ ಸಿನಿಮಾ (South Cinema) ಇಂಡಸ್ಟ್ರಿಯಲ್ಲಿ ಜನಪ್ರಿಯ ನಾಯಕಿಯಾಗಿ ಮಿಂಚುತ್ತಿದ್ದಾರೆ. 6 ವರ್ಷವಿದ್ದಾಗಲೇ ಚಿತ್ರರಂಗ ಪ್ರವೇಶಿಸಿದ ಮೀನಾ ನಟಿಯಾಗಿ 40 ವರ್ಷ ಪೂರೈಸುತ್ತಿದ್ದಾರೆ.