ಚಪ್ಪಲಿ ಬಿಟ್ಬಂದ ವಿದ್ಯಾಬಾಲನ್ ಗೆ ಕ್ಲಾಸ್ ತೆಗೆದುಕೊಂಡ ಮಾಧುರಿ ದೀಕ್ಷಿತ್!
ಬಾಲಿವುಡ್ ನ ಬಹುನಿರೀಕ್ಷಿತ ಕಾಮಿಡಿ- ಥ್ರಿಲ್ಲರ್ ಸಿನಿಮಾ ಭೂಲ್ ಬೈಲೈಯಾ 3. ಈ ಚಿತ್ರ ದೀಪಾವಳಿಯಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಹಾಡುಬಿಡುಗಡೆ ಸಮಾರಂಭದಲ್ಲಿ ವಿದ್ಯಾ ಬಾಲನ್ ಹಾಗೂ ಮಾಧುರಿ ದೀಕ್ಷಿತ್ ಗಮನ ಸೆಳೆದಿದ್ದಾರೆ.
ಭೂಲ್ ಭುಲೈಯಾ 3 ಸಿನಿಮಾ (Bhool Bhulaiya 3 movie) ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಕಾರ್ತಿಕ್ ಆರ್ಯನ್ (Karthik Aryan), ಟ್ರಿಪ್ತಿ ಡಿಮ್ರಿ (Tripti Dimri) ಜೊತೆ ವಿದ್ಯಾ ಬಾಲನ್ (Vidya Balan) ಮತ್ತು ಮಾಧುರಿ ದೀಕ್ಷಿತ್ (Madhuri Dixit) ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಮಿ ಜೆ ತೋಮರ್ ಈ ಸಿನಿಮಾದಲ್ಲೂ ಭಾಗವಾಗಿದೆ. ಹಾರರ್ ಕಾಮಿಡಿ ಭೂಲ್ ಭುಲೈಯಾ ಸಿನಿಮಾದ ಮೊದಲ ಹಾಗೂ ಎರಡನೇ ಭಾಗದಲ್ಲೂ ಈ ಹಾಡಿತ್ತು. ಈಗ ಆಮಿ ಜೆ ತೋಮರ್ 3.O ಬಿಡುಗಡೆಯಾಗಿದೆ. ಈ ಹಾಡಿನ ಬಿಡುಗಡೆ ಕಾರ್ಯಕ್ರಮವನ್ನು ಶುಕ್ರವಾರ ಮುಂಬೈನಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ವಿದ್ಯಾ ಬಾಲನ್ ಮತ್ತು ಮಾಧುರಿ ದೀಕ್ಷಿತ್ ಗಮನ ಸೆಳೆದಿದ್ದಾರೆ. ಇಬ್ಬರು ಅದ್ಭುತ ಡಾನ್ಸ್ ಪ್ರದರ್ಶನ ನೀಡಿದ್ದಾರೆ. ವಿದ್ಯಾ ಬಾಲನ್ ಹಾಗೂ ಮಾಧುರಿ ದೀಕ್ಷಿತ್ ಡಾನ್ಸ್ ಜೊತೆ ಕಾರ್ಯಕ್ರಮದ ಅನೇಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ.
ವಿದ್ಯಾ ಬಾಲನ್ ಹಾಗೂ ಮಾಧುರಿ ದೀಕ್ಷಿತ್, ಡಾನ್ಸ್ ಕಾರ್ಯಕ್ರಮದ ನಂತ್ರ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಈ ಸಮಯದಲ್ಲಿ ವಿದ್ಯಾ ಬಾಲನ್ ಚಪ್ಪಲಿ ಧರಿಸಿರಲಿಲ್ಲ. ಅದನ್ನು ಗಮನಿಸಿದ ಮಾಧುರಿ ದೀಕ್ಷಿತ್, ನಿಮ್ಮ ಚಪ್ಪಲಿ ಎಲ್ಲಿ, ಬೇಗ ಹಾಕಿಕೊಂಡು ಬನ್ನಿ ಅಂತ ವಿದ್ಯಾ ಬಾಲನ್ ಗೆ ಮೃದುವಾಗಿ ಗದರಿದ್ದಾರೆ. ಚಪ್ಪಲಿ ಮರೆತು ನಿಂತಿದ್ದ ವಿದ್ಯಾ ಬಾಲನ್, ಮಾಧುರಿ ಹೇಳ್ತಿದ್ದಂತೆ ಚಪ್ಪಲಿ ಹಾಕಿಕೊಳ್ಳಲು ಚಿಕ್ಕ ಮಕ್ಕಳಂತೆ ಓಡಿದ್ದಾರೆ.
ಪಾಪರಾಜಿಗಳ ಮೇಲೆ ಕೋಪಗೊಂಡ ರಣಬೀರ್, ರಿಯಾಕ್ಟ್ ಮಾಡದ ಆಲಿಯಾ
ಹೈ ಹೀಲ್ಡ್ ಹಾಕಿಕೊಳ್ಳಲು ಪ್ರಯತ್ನಿಸಿದ ವಿದ್ಯಾ ಅದ್ಯಾಕೋ ಮತ್ತೆ ಬರಿಗಾಲಿನಲ್ಲಿ ಬಂದಿದ್ದಾರೆ. ಬರ್ತಾ, ಚಪ್ಪಲಿ ಬೇಡ ಎನ್ನುವ ರಿಯಾಕ್ಷನ್ ನೀಡಿದ್ದಾರೆ. ವಿದ್ಯಾ ಈ ಆಟ ನೋಡಿದ ಮಾಧುರಿ ಮುಖ ಹಿಂಡಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಮಾಧುರಿ ದೀಕ್ಷಿತ್ ಮುಖಭಾವ ನೋಡಿ ಎಂದು ಶೀರ್ಷಿಕೆ ಹಾಕಲಾಗಿದೆ. ಇದಕ್ಕೆ ಅನೇಕ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಮಕ್ಕಳ ವಾರ್ಷಿಕೋತ್ಸವ ಕಾರ್ಯಕ್ರಮ ನೋಡಿದಂತಾಯ್ತು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಮಾಧುರಿ ಶಿಕ್ಷಕಿ, ವಿದ್ಯಾ ಬಾಲನ್ ಮಗು ಅಂತ ಒಬ್ಬರು ಹೇಳಿದ್ರೆ, ಮಾಧುರಿ ಅಮ್ಮನಂತೆ ರಿಯಾಕ್ಟ್ ಮಾಡಿದ್ರೆ, ವಿದ್ಯಾ ಮಗುವಿನಂತೆ ಆಡ್ತಿದ್ದಾರೆಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ವಿದ್ಯಾಬಾಲನ್, ಮಾಧುರಿಯಿಂದ ಬೈಸಿಕೊಂಡಿದ್ದನ್ನು ನೋಡಿದ ಫ್ಯಾನ್ಸ್, ವಿದ್ಯಾಗೆ ಏನಾಗಿದೆ ಅಂತ ಕೇಳಿದ್ದಾರೆ. ಈ ವಿಡಿಯೋ ನೋಡಿದ ಫ್ಯಾನ್ಸ್ ಮುಖದಲ್ಲಿ ಸಣ್ಣ ನಗುವೊಂದು ಕಾಣಿಸಿಕೊಂಡಿದೆ. ವಿದ್ಯಾ ಬಾಲನ್ ನ್ಯಾಚುರಲ್ ಆಗಿರೋದು ಫ್ಯಾನ್ಸ್ ಗೆ ಇಷ್ಟವಾಗಿದೆ. ಡಾನ್ಸ್ ಮಾಡುವಾಗ್ಲೂ ವಿದ್ಯಾ ಕೆಳಗೆ ಬಿದ್ದಿದ್ದರು. ಈಗ ಚಪ್ಪಲಿ ಮರೆತಿದ್ದಾರೆ. ವಯಸ್ಸಾಯ್ತಾ ಎಂದು ನೆಟ್ಟಿಗರು ಪ್ರಶ್ನೆಯಿಟ್ಟಿದ್ದಾರೆ.
ವಿದ್ಯಾ ಬಾಲನ್ ಹಾಗೂ ಮಾಧುರಿ ದೀಕ್ಷಿತ್ ಕಾರ್ಯಕ್ರಮದಲ್ಲಿ ಅಧ್ಬುತವಾಗಿ ಡಾನ್ಸ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾ ಬಾಲನ್ ಕೆಳಗೆ ಬಿದ್ದಿದ್ದರು. ತಕ್ಷಣ ಅಲ್ಲಿಯೇ ಸ್ಟೆಪ್ಸ್ ಹಾಕಿ ಎದ್ದುನಿಂತ ವಿದ್ಯಾ, ಏನೂ ಆಗೇ ಇಲ್ಲ ಎನ್ನುವಂತೆ ಡಾನ್ಸ್ ಮುಂದುವರೆಸಿದ್ದರು. ಸಿನಿಮಾದಲ್ಲಿ ಕೂಡ ಇಬ್ಬರು ಹಿರಿಯ ಹಾಗೂ ಅನುಭವಿ ಕಲಾವಿದರ ಡಾನ್ಸ್ ಅತ್ಯಧ್ಬುತವಾಗಿ ಮೂಡಿ ಬಂದಿದೆ. ಡಾನ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಕೆಜಿಎಫ್ ಹೆಸರು ಹೇಳಿ ಪ್ರಚಾರ ಮಾಡ್ತಿದ್ಯಾ ಪುಷ್ಪ-2 ತಂಡ: ಯಶ್ ಮೇಲೆ ಹೊಟ್ಟೆ ಉರಿನಾ?
ಭೂಲ್ ಭುಲೈಯಾ 3 ದೀಪಾವಳಿಯಂದು ಅಂದರೆ ನವೆಂಬರ್ 1 ರಂದು ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೇ ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದು, ಬಿಡುಗಡೆಯಾದ ತಕ್ಷಣ ವೈರಲ್ ಆಗಿತ್ತು. ಆಮಿ ಜೆ ತೋಮರ್ 3.O ಹಾಡನ್ನು ಶ್ರೇಯಾ ಘೋಷಾಲ್ ಹಾಡಿದ್ದು, ಮಾಧುರಿ ಹಾಗೂ ವಿದ್ಯಾ ಹೆಜ್ಜೆ ಹಾಕಿದ್ದಾರೆ.