* ಪುತ್ರನ ಸಾಧನೆ ಮೆಚ್ಚಿ ಕೊಂಡಾಡಿದ ಮಾಧುರಿ * ಹೈಸ್ಕೂಲ್ ಗ್ರಾಜುವೇಶನ್ ಡೇ ಸಂಭ್ರಮ * ಪುತ್ರನಿಗೆ ಶುಭ ಹಾರೈಸಿದ  ತಾಯಿ

ನವದೆಹಲಿ (ಮೇ 30) ಬಾಲಿವುಡ್ ನಟಿ ಮಾಧುರಿ ದೀಕ್ಷಿತ್  ಮತ್ತು ಪತಿ ಶ್ರೀರಾಮ್ ನೆನೆ  ಇದೀಗ ಸಂತಸ ತುಂಬಿದ ಪೋಷಕರು ಪುತ್ರ  ಆರಿನ್ ಹೈಸ್ಕೂಲ್ ಗ್ರಾಜುವೇಶನ್ ಮುಗಿಸಿದ್ದಾರೆ.

ನಟಿ ಮಾಧುರಿ ಈ ಸಂಭ್ರಮವನ್ನು ಸೋಶಿಯಲ್ ಮೀಡಿಯಾ ಮೂಲಕ  ಹಂಚಿಕೊಂಡಿದ್ದಾರೆ. 'graduates from high school with flying colors' ಎಂದು ಬಣ್ಣಿಸಿದ್ದಾರೆ.

ಬಾಲಿವುಡ್ ಹ್ಯಾಂಡ್ ಸಮ್ ಹುಡುಗನ ಒಲ್ಲೆ ಎಂದಿದ್ದ ಮಾಧುರಿ

ಶಾಲೆಯ ಗ್ರಾಜಿವೇಶನ್ ಡೇ ವರ್ಚುವಲ್ ಮಾದರಿಯಲ್ಲಿ ನಡೆಯಿತು. ಈ ವರ್ಷ ಎಂಥ ಸಮಸ್ಯೆಗಳನ್ನು ತಂದಿಟ್ಟಿದೆ ಎನ್ನುವುದು ಎಲ್ಲರಿಗೂ ಗೊತ್ತು. ಅದೆಲ್ಲದರ ನಡುವೆ ನೀನು ಸಾಧನೆ ಮಾಡಿದ್ದೀಯಾ. ಅಭಿನಂದನೆ ಎಂದು ಮಾಧುರಿ ಪುತ್ರನ ಕೊಂಡಾಡಿದ್ದಾರೆ. ಸಣ್ಣ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.

ತಾವೇ ಮುಂದೆ ನಿಂತು ಗ್ರಾಜುವೇಶನ್ ಡೇಗೆ ಪುತ್ರನ ಸಿಂಗರಿಸಿದ್ದಾರೆ. ಜತೆಗೆ ನಿನ್ನ ಮುಂದಿನ ಜೀವನದಲ್ಲಿ ಸದಾ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.

ಒಂದು ಕಾಲದಲ್ಲಿ ಬಾಲಿವುಡ್ ನ ನಂಬರ್ ಒನ್ ನಾಯಕಿಯಾಗಿ ಮೆರೆದ ಮಾಧುರಿ ವೈದ್ಯ ಶ್ರೀರಾಮ್ ಅವರನ್ನು  1999  ರಲ್ಲಿ ವಿವಾಹವಾದರು. ಒಟಿಟಿ ಮಾದರಿಯಲ್ಲಿ ಮಾಧುರಿ ಹೊಸ ಸಾಹಸ ಮಾಡುತ್ತಿದ್ದು ಕೆಲಸಗಳು ಭರದಿಂದ ಸಾಗಿವೆ. ಕರಣ್ ಜೋಹರ್ ನಿರ್ದೇಶನದಲ್ಲಿ ಸೀರಿಸ್ ಮೂಡಿಬರಲಿದೆ.

 

View post on Instagram
 
View post on Instagram