ಕೃತಿ ಸನೋನ್ ಬಾಲಿವುಡ್‌ನಲ್ಲಿ ಕಷ್ಟಪಟ್ಟು ಬೆಳೆದ ನಟಿ. ಆರಂಭದಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ ಅವರು, ಜಾಹೀರಾತು ಮತ್ತು ಐಟಂ ಹಾಡುಗಳಲ್ಲಿ ಕಾಣಿಸಿಕೊಂಡರು. ಒಂದು ಸಿನಿಮಾಗೆ 4-5 ಕೋಟಿ ಸಂಭಾವನೆ ಪಡೆಯುತ್ತಾರೆ. ಬಟ್ಟೆ ಬ್ರ್ಯಾಂಡ್, ಫಿಟ್ನೆಸ್ ಆಪ್ ಮತ್ತು ಸಿನಿಮಾ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ದುಬಾರಿ ಕಾರುಗಳು ಮತ್ತು ಸ್ಕಿನ್ ಕೇರ್ ಬ್ರ್ಯಾಂಡ್ ಸಹ ಹೊಂದಿದ್ದು, ತಿಂಗಳಿಗೆ 17 ಲಕ್ಷ ಬಾಡಿಗೆ ಕಟ್ಟುತ್ತಾರೆ.

ಹಿಂದಿ ಚಿತ್ರರಂಗಕ್ಕೆ ಕಾಲಿಡುವುದು ಸುಲಭದ ಮಾತಲ್ಲ. ಸಿಕ್ಕ ಸಣ್ಣ ಪುಟ್ಟ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಬುದ್ಧಿವಂತರಾದರೆ ಮಾತ್ರ ಸ್ಟಾರ್ ನಟರಿಗೆ ಜೋಡಿ ಆಗುವುದು, ದೊಡ್ಡ ಬಂಗಲೆ ಖರೀದಿಸುವುದು, ಜಾಹೀತಾರುಗಳಲ್ಲಿ ಕಾಣಿಸಿಕೊಳ್ಳಲು ಸಾಧ್ಯ. ಅಷ್ಟೇ ಯಾಕೆ ಬಿ-ಟೌನ್‌ನಲ್ಲಿ ಫೇಮಸ್‌ ಇದ್ದಾರೆ ಮಾತ್ರ ರಿಯಾಲಿಟಿ ಶೋ ಮತ್ತು ಕಾರ್ಯಕ್ರಮಗಳ ವಿಶೇಷ ಅತಿಥಿಯಾಗಿ ಆಹ್ವಾನಿಸುವುದು. ಸಿನಿಮಾ ಬ್ಯಾಗ್ರೌಂಡ್‌ ಇಲ್ಲಿ ಎಂಟ್ರಿ ಕೊಟ್ಟವರು ಸಾಕಷ್ಟು ಮಂದಿ ಇದ್ದಾರೆ ಆದರೆ ಉಳಿದುಕೊಂಡಿರುವವರು ಬೆರಳೆಣಿಕೆಯಷ್ಟು ಮಾತ್ರ. ಸಿಕ್ಕಾಪಟ್ಟೆ ಕಷ್ಟ ಪಟ್ಟು ಸದಾ ಸುದ್ದಿಯಲ್ಲಿ ಇರಲು ಪ್ರಯತ್ನಿಸುವ ನಟಿ ಕೃತಿ ಸನೊನ್.

2014ರಲ್ಲಿ ಟೈಗರ್ ಶ್ರಾಫ್‌ಗೆ ಜೋಡಿಯಾಗಿ ಹೀರೋಪಂತಿ ಸಿನಿಮಾದಲ್ಲಿ ನಟಿಸಿದ ಸುಂದರಿ ಕೃತಿ ಸನೊನ್. 10 ವರ್ಷಗಳ ಜರ್ನಿಯಲ್ಲಿ ಕೃತಿ ಮಾಡಿರುವುದು 25 ಸಿನಿಮಾಗಳು ಮಾತ್ರ. ಒಂದೊಂದು ಸಿನಿಮಾದಲ್ಲಿ ಎರಡನೇ ನಾಯಕಿ, ವಿಶೇಷ ಅತಿಥಿ ಅಥವಾ ಐಟಂ ಸಾಂಗ್‌ಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಕೃತಿ ಹೈಟ್‌ ಆಂಡ್‌ ಲುಕ್‌ಗೆ ಜಾಹೀರಾತುಗಳು ಸುಲಭವಾಗಿ ಹುಡುಕಿಕೊಂಡು ಬರುತ್ತದೆ. ಆದರೂ ಕೂಡ ದುಡಿಮೆ ಎಷ್ಟಿರಬಹುದು? ಎಷ್ಟು ದುಡಿಯುತ್ತಾರೋ ಅಷ್ಟೇ ಖರ್ಚು ಇರುತ್ತದೆ ಹೀಗಿದ್ದರೂ ಮನೆ ಬಾಡಿಗೆ ಕಟ್ಟಲು ಹೇಗೆ ಸಾಧ್ಯ?

ಕನಸಲ್ಲೂ ಈ ಜಾಗದಲ್ಲಿ ಚಪ್ಪಲಿ ಬಿಡಬೇಡಿ...ಬಿಟ್ರೆ ಹಣನೂ ಇರಲ್ಲ ನೆಮ್ಮದಿನೂ ಇರಲ್ಲ!

ಹೌದು! ಕೃತಿ ಸನೊನ್ ತಿಂಗಳು 16 ರಿಂದ 17 ಲಕ್ಷ ರೂ. ಬಾಡಿಗೆ ಕಟ್ಟುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ಅಮಿತಾಭ್ ಬಚ್ಚನ್ ಅಪಾರ್ಟ್ಮೆಂಟ್‌ ಮನೆಯಲ್ಲಿ ವಾಸಿಸುತ್ತಿದ್ದರು, ಆಗ 7 ಲಕ್ಷ ರೂಪಾಯಿ ಬಾಡಿಗೆ ನೀಡುತ್ತಿದ್ದರು. ಸದ್ಯ ಕೈಯಲ್ಲಿ ಯಾವುದೇ ಸಿನಿಮಾ ಇಲ್ಲದೆ ಇಷ್ಟೋಂದು ಬಾಡಿಗೆ ಕಟ್ಟಲು ಹೇಗೆ ಸಾಧ್ಯ ಅನ್ನೋದು ಜನರ ಪ್ರಶ್ನೆ. 2014ರಲ್ಲಿ ನಡೆದ ಸರ್ವೆ ಪ್ರಕಾರ ಕೃತಿ ಒಂದು ಸಿನಿಮಾ ಮಾಡಲು 4 ರಿಂದ 5 ಕೋಟಿ ಸಂಭಾವನೆ ಪಡೆಯುತ್ತಾರಂತೆ. ಸಿನಿಮಾ ರಂಗಕ್ಕೆ ಕಾಲಿಟ್ಟ ಕೆಲವೇ ವರ್ಷಗಳಲ್ಲಿ ತಮ್ಮದೇ ಬಟ್ಟೆ ಬ್ರ್ಯಾಂಡ್ ಆರಂಭಿಸಿದ್ದರು. ಅದೇ ಮಿಸ್ ಟೇಕನ್ ಎಂದು. 2016ರಿಂದ ಈ ಬ್ರ್ಯಾಂಡ್‌ ಬಟ್ಟೆಗಳು ಸುದ್ದಿಯಲ್ಲಿದೆ. ಇದರ ಜೊತೆ ಜೊತೆಯಲಿ ತಮ್ಮದೇ ಫಿಟ್ನೆಸ್ ಆಪ್‌ ಓಪನ್ ಮಾಡಿದ್ದರು. ಇಲ್ಲಿ ನೀವು ಕೃತಿ ಅಷ್ಟು ಫಿಟ್ ಆಂಡ್ ಬ್ಯೂಟಿಫುಲ್ ಆಗಿರಬೇಕು ಅಂದ್ರೆ ಹಣ ಕೊಟ್ಟ ಆಪ್ ಖರೀದಿಸಬೇಕು. ಇದಾದ ಮೇಲೆ ಸಹೋದರೆ ನೂಪುರ್‌ ಜೊತೆ ಬ್ಯೂ ಬಟರ್‌ಫ್ಲೈ ಫಿಲ್ಮಂ ಕಂಪನಿ ಹೊಂದಿದ್ದಾರೆ, ಈಗಾಗಲೆ ಮೂರ್ನಾಲ್ಕು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇಷ್ಟೆಲ್ಲಾ ದುಡಿಮೆ ಇರುವವರು ಬಳಿ ಐಷಾರಾಮಿ ಕಾರು ಇದ್ದೇ ಇರುತ್ತದೆ. ಆಡಿ ಕ್ಯೂ 7, ಮರ್ಷಿಡೀಸ್ ಬೆನ್ಸ್‌ ಇ ಕ್ಲಾಸ್ ಮತ್ತು ಬಿಎಮ್‌ಡ್ಲೂ 3 ಸೀರಿಸ್‌ ಕಾರುಗಳನ್ನು ಖರೀದಿಸಿದ್ದಾರೆ. ಕಳೆದ ವರ್ಷ ಹೈಫನ್‌ ಎಂಬ ಸ್ಕಿನ್‌ ಕೇರ್ ಬ್ರ್ಯಾಂಡ್ ತೆರೆದರು. ಇಷ್ಟು ಸಂಪಾದನೆ ಇದ್ದ ಮೇಲೆ 17 ಲಕ್ಷ ಮನೆ ಯಾವ ಲೆಕ್ಕಾ?

ಧರ್ಮಸ್ಥಳ ಮಂಜುನಾಥ ದರ್ಶನ ಪಡೆದ ತರುಣ್- ಸೋನಲ್; ದೇವಸ್ಥಾನಕ್ಕೂ ಮ್ಯಾಚಿಂಗ್ ಯಾಕೆ ಎಂದ ನೆಟ್ಟಿಗರು