'ನಾನು ಒಮ್ಮೆ ಒಂದು ಸಮಾರಂಭದಲ್ಲಿ ಕಾಣಿಸಿಕೊಂಡ ರೀತಿಯಲ್ಲಿ ಮತ್ತೊಂದು ಸಮಾರಂಭದಲ್ಲಿ ಕಾಣಿಸಿಕೊಳ್ಳಲು ಬಯಸುವುದಿಲ್ಲ. ಭಿನ್ನವಾಗಿ ಇರಬೇಕು, ಬೇರೆ ಬೇರೆ ಫ್ಯಾಷನ್‌ಗಳನ್ನು ಟ್ರೈ ಮಾಡಬೇಕು ಎನ್ನುವ ಆಸೆ ಇದೆ. ಅದಕ್ಕೆ ತಕ್ಕಂತೆ ಹೊಸದಾಗಿ ಬಂದ ಯಾವುದೇ ಟ್ರೆಂಡ್ ಆದರೂ ನಾನು ಸ್ವೀಕರಿಸುತ್ತೇನೆ. ಅದಕ್ಕಿಂತ ಹೆಚ್ಚಾಗಿ ಹೊಸದಾದ ಟ್ರೆಂಡ್‌ಅನ್ನು ನಾನೇ ಹುಟ್ಟು ಹಾಕಲು ಇಷ್ಟಪಡುತ್ತೇನೆ’ ಕತ್ರಿನಾ ಹೀಗೆ ಹೇಳಿದ್ದಕ್ಕೂ ಒಂದು ಕಾರಣವಿದೆ.

ಬಾಲಿವುಡ್ ಗುಸುಗುಸು, ಕತ್ರಿನಾ-ವಿಕ್ಕಿ ಕೌಶಲ್ ನಡುವೆ ನಡಿತಿದ್ಯಾ ಪಿಸುಪಿಸು?

ಅದೇನೆಂದರೆ ಮೊನ್ನೆ ಮೊನ್ನೆ ಒಂದು ಕಾರ್ಯಕ್ರಮದಲ್ಲಿ ಅಪ್ಪಟ ಪಿಂಗ್ ಬಣ್ಣದ ಹೊಸ ಬಗೆಯ ಉಡುಗೆಯೊಂದನ್ನು ತೊಟ್ಟಿದ್ದರು. ಅದರ ಬೆಲೆ ಕರೆಕ್ಟ್ ಆಗಿ ಒಂದು ಲಕ್ಷದ ಎಂಭತ್ತೊಂದು ಸಾವಿರದ ನಾಲ್ಕುನೂರ ಅರವತ್ತೊಂದು ರುಪಾಯಿ (1,81416) ಹೀಗೆ ತೊಟ್ಟು ಮಿಂಚಿದ್ದ ಕತ್ರಿನಾ ಹೊಸ ತಾವು ಹೇಳಿದ ಮಾತಿನಂತೆ ಹೊಸ ಟ್ರೆಂಡ್ ಸೆಟ್ ಮಾಡಲು ಮುಂದಾಗಿದ್ದಾರೆ.

 

 
 
 
 
 
 
 
 
 
 
 
 
 

Kay Beauty Press Day 🧡

A post shared by Katrina Kaif (@katrinakaif) on Dec 2, 2019 at 10:40pm PST