ಬಾಲಿವುಡ್‌ನಲ್ಲಿ ಲವ್, ಬ್ರೇಕಪ್, ಗಾಸಿಪ್‌ಗಳಿಗೇನೂ ಕಮ್ಮಿಯಿಲ್ಲ. ಯಾರ ಜೊತೆಗೋ ಇನ್ಯಾರದಾದ್ರು ಹೆಸರು ಕೇಳಿ ಬರುತ್ತೆ. ಈ ಲವ್‌ಸ್ಟೋರಿಗಳ ಸಾಲಿಗೆ ಕತ್ರಿನಾ ಕೈಫ್- ವಿಕ್ಕಿ ಕೌಶಲ್ ಸೇರಿದ್ದಾರೆ. 

ಕಿಶನ್-ಸುಂದರಿ ರಕ್ಷಾ ಸೀಕ್ರೆಟ್ ಪ್ರೇಮ ಪ್ರಕರಣ, ನಾಮಿನೇಶನ್ ಬಲೆಗೆ ಯಾರೆಲ್ಲ?

ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಒಟ್ಟಿಗೆ ಓಡಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈಎಲ್ ಆಗುತ್ತಿವೆ. ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಗುಸುಗುಸು ಕೇಳಿ ಬರುತ್ತಿದೆ. ಇವರಿಬ್ಬರೂ ದೀಪಾವಳಿಯನ್ನು ಒಟ್ಟಿಗೆ ಆಚರಿಸಿದ್ದರು. ಈಗ   ಹೊಸ ವರ್ಷವನ್ನು ಇಬ್ಬರೂ ಒಟ್ಟಿಗೆ ಆಚರಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಎಲ್ಲಿ, ಹೇಗೆ? ಎಂಬುದು ಮಾತ್ರ ರಿವೀಲ್ ಮಾಡಿಲ್ಲ. 

 

ಅಂದಹಾಗೆ ಕತ್ರಿನಾ, ವಿಕ್ಕಿ ಕೌಶಲ್ ಇಬ್ಬರೂ ಸಿಂಗಲ್.  ಕತ್ರಿನಾ ರಣಬೀರ್ ಕಪೂರ್ ಜೊತೆ ಬ್ರೇಕಪ್ ಮಾಡಿಕೊಂಡು ಸಿಂಗಲ್ಲಾಗಿದ್ದಾರೆ. ಇತ್ತ ವಿಕ್ಕಿ ಕೌಶಲ್‌ಗೆ ಬ್ರೇಕಪ್ ಆಗಿದೆಯಂತೆ. ಬ್ರೇಕಪ್ ಬೇಸರದಲ್ಲಿರುವ ಇಬ್ಬರೂ ಒಟ್ಟಿಗೆ ಓಡಾಡುತ್ತಿದ್ದಾರೆ. ಇರ್ಲಿ ಬಿಡಿ! 

ಗಂಡನೊಂದಿಗೆ ಹಾಟ್ ಪೋಟೋ ಹಂಚಿಕೊಂಡ ಐಂದ್ರಿತಾ ಕೊಟ್ಟ ಟಾಸ್ಕ್!

ಕತ್ರಿನಾ ಸದ್ಯ ಅಕ್ಷಯ್ ಕುಮಾರ್ ಜೊತೆ 'ಸೂರ್ಯವಂಶಿ' ಸಿನಿಮಾದಲ್ಲಿ ನಟಿಸಿದ್ದಾರೆ.  2020 ರಲ್ಲಿ ಇದು ರಿಲೀಸ್ ಆಗುವ ಸಾಧ್ಯತೆ ಇದೆ. ಇನ್ನೊಂದು ಕಡೆ ವಿಕ್ಕಿ ಕೌಶಲ್ ಸ್ಯಾಮ್ ಮಾಣಿಕ್ಷಾ ಬಯೋಪಿಕ್‌ನಲ್ಲಿ ಬ್ಯುಸಿಯಾಗಿದ್ದಾರೆ.