ನಟಿ ಕಂಗನಾ ರಣಾವತ್​ ಅವರು  ಇಸ್ರೇಲಿ ರಾಯಭಾರಿಯನ್ನು ಭೇಟಿಯಾಗಿದ್ದಾರೆ. ಇದರ ಜೊತೆಗೆ ಅಯೋಧ್ಯೆಗೂ ಭೇಟಿ ಕೊಟ್ಟು ರಾಮ್​ಲಲ್ಲಾ ದರ್ಶನ ಪಡೆದಿದ್ದಾರೆ.  

ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರು ಮೊನ್ನೆಯಷ್ಟೇ ದಾಖಲೆ ಸೃಷ್ಟಿಸಿ ಸುದ್ದಿಯಲ್ಲಿದ್ದಾರೆ. ದೆಹಲಿಯ ಕೆಂಪು ಕೋಟೆಯ ಲುವ ಕುಶ ರಾಮಲೀಲಾ ಮೈದಾನದಲ್ಲಿ ರಾವಣನನ್ನು ಸುಟ್ಟು ಹಾಕುವ ಮೂಲಕ 50 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಈ ದಾಖಲೆ ಮಾಡಿದ ಕೀರ್ತಿಗೆ ಭಾಜನರಾಗಿದ್ದಾರೆ. ಇದೀಗ ಮತ್ತೊಮ್ಮೆ ಕಂಗನಾ ಸುದ್ದಿಯಲ್ಲಿದ್ದಾರೆ. ಅದೇನೆಂದರೆ, ಅವರು ನಿನ್ನೆ ಇಸ್ರೇಲ್​ ರಾಯಭಾರಿಯನ್ನು ಭೇಟಿಯಾಗಿದ್ದಾರೆ. ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವೆ ನಡೆಯುತ್ತಿರುವ ದಾಳಿ-ಪ್ರತಿದಾಳಿ ವಿಕೋಪಕ್ಕೆ ಹೋಗಿರುವ ನಡುವೆಯೇ, ಎರಡೂ ಪಕ್ಷಗಳ ಪರವಾಗಿ ತಮ್ಮದೇ ಆದ ರೀತಿಯಲ್ಲಿ ಹಲವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ. ಇಸ್ರೇಲ್‌ ಮೇಲೆ ಭೀಕರವಾಗಿ ದಾಳಿ ನಡೆಸಿ ಸಹಸ್ರಾರು ಮಂದಿಯ ಮಾರಣ ಹೋಮ ಮಾಡಿ ದಾಳಿಗೆ ಕಾರಣರಾದ ಹಮಾಸ್‌ ಗುಂಪನ್ನು ಕೆಲವರು ಉಗ್ರರು ಎಂದರೆ ಇನ್ನು ಕೆಲವರು ಅವರನ್ನು ಸೈನಿಕರು ಎಂದು ಕರೆದು ಅವರ ಪರವಾಗಿ ತಮ್ಮ ವಾದವನ್ನು ಇಡುತ್ತಿದ್ದಾರೆ. ಇನ್ನು ಕೆಲವರು ಇಸ್ರೇಲ್‌ ಮೇಲೆ ಕರುಣೆ ತೋರುತ್ತಿದ್ದರೆ, ಹಮಾಸ್‌ ಪರವಾಗಿ ಇರುವವರು ಇಸ್ರೇಲ್‌ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಕಂಗನಾ ಇಸ್ರೇಲ್​ ರಾಯಭಾರಿಯನ್ನು ಭೇಟಿಯಾಗಿ ಬಂದಿದ್ದು, ಈ ಕುರಿತು ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. 


ಇಂದು ಇಡೀ ಜಗತ್ತು, ವಿಶೇಷವಾಗಿ ಇಸ್ರೇಲ್ ಮತ್ತು ಭಾರತ ಭಯೋತ್ಪಾದನೆಯ ವಿರುದ್ಧ ತಮ್ಮ ಯುದ್ಧವನ್ನು ನಡೆಸುತ್ತಿವೆ. ನಿನ್ನೆ ರಾವಣ ದಹನಕ್ಕೆ ದೆಹಲಿ ತಲುಪಿದಾಗ, ಇಸ್ರೇಲ್ ರಾಯಭಾರ ಕಚೇರಿಗೆ ಬಂದು ಇಂದಿನ ಆಧುನಿಕ ರಾವಣನನ್ನು ಮತ್ತು ಹಮಾಸ್‌ನಂತಹ ಭಯೋತ್ಪಾದಕರನ್ನು ಸೋಲಿಸುವ ಜನರನ್ನು ಭೇಟಿಯಾಗಬೇಕೆಂದು ನನಗೆ ಅನಿಸಿತು. ಸಣ್ಣ ಮಕ್ಕಳು ಮತ್ತು ಮಹಿಳೆಯರನ್ನು ಗುರಿಯಾಗಿಸುತ್ತಿರುವ ರೀತಿ ಹೃದಯ ವಿದ್ರಾವಕವಾಗಿದೆ. ಭಯೋತ್ಪಾದನೆ ವಿರುದ್ಧದ ಈ ಯುದ್ಧದಲ್ಲಿ ಇಸ್ರೇಲ್ ಜಯಶಾಲಿಯಾಗಲಿದೆ ಎಂಬ ಸಂಪೂರ್ಣ ಭರವಸೆ ನನಗಿದೆ. ಈ ಕುರಿತು ಇಸ್ರೇಲ್​ ರಾಯಭಾರಿ ಜೊತೆ ಮಾತನಾಡಿ ಬಂದಿದ್ದೇನೆ ಎಂದು ನಟಿ ಹೇಳಿಕೊಂಡಿದ್ದಾರೆ. ಅಂದಹಾಗೆ ನಟಿಯ ಕಂಗನಾ ರಣಾವತ್ ತಮ್ಮ ಮುಂದಿನ ಚಿತ್ರ 'ತೇಜಸ್' ಬಿಡುಗಡೆಗೆ ಸಿದ್ಧವಾಗಿದೆ. ಅದರ ಬಗ್ಗೆಯೂ ತಾವು ಮಾತನಾಡಿ ಬಂದಿರುವುದಾಗಿ ಕಂಗನಾ ಹೇಳಿಕೊಂಡಿದ್ದಾರೆ. ಇನ್ನು ಇಸ್ರೇಲ್‌ -ಹಮಾಸ್‌ ಘರ್ಷಣೆಯ ಬಗ್ಗೆ ಇಸ್ರೇಲ್‌ ರಾಯಭಾರಿಯ ಜೊತೆ ಚರ್ಚೆ ನಡೆಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಇಸ್ರೇಲ್‌ ಮೇಲೆ ಹಮಾಸ್‌ ದಾಳಿ: ಭಯೋತ್ಪಾದನೆಗೆ ಕುಮ್ಮುಕ್ಕು ನೀಡಿದ ಖ್ಯಾತ ನಟಿ ಅರೆಸ್ಟ್‌


ಇದೇ ವೇಳೆ, ನಟಿ ಶ್ರೀರಾಮಜನ್ಮ ಭೂಮಿ ಅಯೋಧ್ಯೆಗೆ ಭೇಟಿ ನೀಡಿದ್ದು, ರಾಮಲಲ್ಲಾನ ಆಶೀರ್ವಾದ ಬೇಡಿದ್ದಾರೆ. ತೇಜಸ್‌ ಸಿನಿಮಾ ಬಿಡುಗಡೆಯ ಯಶಸ್ಸಿಗೆ ಅವರು ಕೋರಿದ್ದಾರೆ. ಅಯೋಧ್ಯೆಯಲ್ಲಿ ಮಾಧ್ಯಮಗಳ ಜತೆಗೂ ಕಂಗನಾ ರಣಾವತ್‌ ಮಾತನಾಡಿದ್ದಾರೆ. ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ, ತಮ್ಮ ಮುಂಬರುವ ತೇಜಸ್‌ ಸಿನಿಮಾಕ್ಕೂ ಈ ದೇವಾಲಯಕ್ಕೂ ನಂಟು ಇದೆ ಎಂದಿದ್ದಾರೆ.

'ನಮ್ಮ ಸಿನಿಮಾ ತೇಜಸ್‌ನಲ್ಲಿ ಈ ದೇಗುಲವು ಪ್ರಮುಖ ಪಾತ್ರ ವಹಿಸಿದೆ. ನಮ್ಮ ಸಿನಿಮಾವು ಭಾರತೀಯ ವಾಯುಪಡೆಗೆ ಸಂಬಂಧಿಸಿದೆ. ನಾವು ಇಲ್ಲಿ ಆಶೀರ್ವಾದ ಬೇಡಲು ಬಂದಿದ್ದೇವೆ' ಎಂದಿದ್ದಾರೆ. ಕ್ರಿಸ್ಮಸ್‌ಗೆ ವ್ಯಾಟಿಕನ್‌ ಸಿಟಿ ಹೇಗೆ ವಿಶೇಷವೋ, ಹಿಂದೂಗಳಿಗೆ ರಾಮಜನ್ಮಭೂಮಿ ಅಯೋಧ್ಯೆ ಪುಣ್ಯ ಭೂಮಿಯಾಗಿದೆ. ಇದು ಅಂತಹ ಬೃಹತ್‌ ಭವ್ಯ ದೇಗುಲ ಆಗುವುದನ್ನು ನಾವು ನೋಡಲಿದ್ದೇವೆ. ಇದು ಹಲವು ಶತಮಾನಗಳಿಂದ ಹಿಂದುಗಳ ನಿರೀಕ್ಷೆಯಾಗಿತ್ತು. ಜಗತ್ತಿಗೆ ಸನಾತನ ಸಂಸ್ಕೃತಿ ತಿಳಿಸುವ ಪ್ರಮುಖ ದೇಗುಲ ಇದಾಗಲಿದೆ ಎಂದು ಅವರು ಹೇಳಿದ್ದಾರೆ.

ಇತಿಹಾಸ ಸೃಷ್ಟಿಸಿದ ನಟಿ ಕಂಗನಾ ರಣಾವತ್‌: 50 ವರ್ಷಗಳ ದಾಖಲೆ ಮುರಿದು ರಾವಣ ದಹನ!

Scroll to load tweet…