ಸಲ್ಮಾನ್‌ಗೆ ಮಗಳನ್ನು ಕೊಡಲು ನಿರಾಕರಿಸಿದ ಜೂಹಿ ಚಾವ್ಲಾ ತಂದೆ
ಬಾಲಿವುಡ್‌ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಎಷ್ಟೋ ಜನಪ್ರಿಯ ಅವರ ಅಫೇರ್‌ಗಳು ಅಷ್ಟೇ ಫೇಮಸ್. ಹಲವು ವರ್ಷಗಳಿಂದ ಹಿಂದಿ ಸಿನಿಮಾರಂಗದಲ್ಲಿ ತಮ್ಮ ನಟನೆಯಿಂದ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿರುವ ಸಲ್ಲುಬಾಯ್ ಸಾಕಷ್ಟು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡುತ್ತಲೇ ಬಂದಿದ್ದಾರೆ. ಹಲವು ನಟಿಯರ ಜೊತೆ ಡೇಟಿಂಗ್ ನೆಡೆಸಿದರೂ ಇನ್ನೂ ಬ್ರಹ್ಮಚಾರಿಯಾಗೇ ಉಳಿದಿದ್ದಾರೆ ಸಲ್ಮಾನ್ ಖಾನ್. ಸಂಗೀತಾ ಬಿಜ್ಲಾನಿಯಿಂದ ಹಿಡಿದು ಸೋಮಿ ಅಲಿ, ಐಶ್ವರ್ಯಾ ರೈ , ಕತ್ರೀನಾ ಕೈಫ್ ಜೊತೆಯ ಸಲ್ಮಾನ್‌ರ ಅಫೇರ್ ಎಲ್ಲರಿಗೂ ತಿಳಿದಿರುವ ವಿಷಯವೆ. ಆದರೆ ಬಾಡ್‌ಬಾಯ್ ಸಲ್ಮಾನ್ ನಟಿ ಜೂಹಿ ಚಾವ್ಲಾರನ್ನು ಮದುವೆಯಾಗಲು ಬಯಸಿದ್ದರಂತೆ ಈ ವಿಷಯ ಇದೀಗ ವೈರಲ್ ಆಗಿದೆ.
ಸಲ್ಮಾನ್ ಖಾನ್ ಹಲವು ನಟಿಯರ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದರೂ, ಯಾವುದೊಂದೂ ಸಂಬಂಧವೂ ಮದುವೆಯವೆರೆಗೆ ಮುಂದುವರಿಯಲಿಲ್ಲ.
ಸಂಗೀತಾ ಬಿಜ್ಲಾನಿಯಿಂದ ಹಿಡಿದು ಸೋಮಿ ಅಲಿ,ಐಶ್ವರ್ಯಾ ರೈ, ಕತ್ರೀನಾ ಕೈಫ್ ಜೊತೆಯ ಸಲ್ಮಾನ್‌ನ ಡೇಟಿಂಗ್ ವಿಷಯ ನ್ಯಾಷನಲ್ ನ್ಯೂಸ್ ಆಗಿತ್ತು.
ಆದರೆ ನಿಮಗೆ ಗೊತ್ತಾ ಸಲ್ಮಾನ್ ಜೂಹಿ ಚಾವ್ಲಾರನ್ನು ಮದುವೆಯಾಗಲು ಬಯಸಿದ್ರಂತೆ ಸಲ್ಮಾನ್?
ಈ ವಿಷಯ ಬಹಿರಂಗ ಪಡಿಸಿದ ಸಲ್ಮಾನ್‌ರ ಹಳೆ ಇಂಟರ್‌ವ್ಯೂವ್ ವೈರಲ್ ಆಗಿದೆ. ಜೂಹಿ ಅವರನ್ನು ಮದುವೆಯಾಗಲು ಅವರ ತಂದೆ ಬಳಿ ಕೇಳಿದಾಗ ನಿರಾಕರಿಸಿದರು ಎಂದು ಹೇಳಿದ್ದಾರೆ.
ಸಂದರ್ಶನದಲ್ಲಿ ಜೂಹಿಯ ತಂದೆಯ ನಿರಾಕರಣೆಗೆ ಕಾರಣವನ್ನು ಕೇಳಿದಾಗ 'ನಾನು ಅವರ ನಿರೀಕ್ಷೆಗೆ ಫಿಟ್ ಆಗಿಲ್ಲ ಎಂದು ಊಹಿಸುತ್ತೇನೆ' ಎಂದು ಉತ್ತರಿಸಿದ್ದರು ನಟ.
'ಜೂಹಿ ವೆರಿ ಸ್ವೀಟ್ ಅಡೋರಬಲ್ ಗರ್ಲ್ ಅವರನ್ನು ಮದುವೆ ಮಾಡಿಕೊಡಲು ತಂದೆಯನ್ನು ಕೇಳಿದಾಗ, ಇಲ್ಲ ಎಂದು ಹೇಳಿದರು' ಎಂದು ಸಲ್ಮಾನ್ ಶೋನಲ್ಲಿ ಜೂಹಿಯ ಬಗ್ಗೆ ಕೇಳಿದಾಗ ಹೇಳಿದರು.
ಸಲ್ಮಾನ್ ಮತ್ತು ಜೂಹಿ ಯಾವುದೇ ಸಿನಿಮಾದಲ್ಲಿ ಒಟ್ಟಿಗೆ ಲೀಡ್ ರೋಲ್‌ನಲ್ಲಿ ನಟಿಸಲಿಲ್ಲ ಎಂದು ಗಮನಿಸಬಹುದು. ಇದರ ಬಗ್ಗೆ ನಟನಿಗೆ ಕೇಳಿದಾಗ 'ಜೂಹಿಗೆ ನನ್ನ ಜೊತೆ ಕೆಲಸ ಮಾಡಲು ಇಷ್ಟವಿಲ್ಲ' ಎಂದಿದ್ದರು.
ಜೂಹಿ ಹಾಗೂ ಸಲ್ಮಾನ್ ಇಬ್ಬರೂ ಬಾಲಿವುಡ್‌ನ ಪ್ರಮುಖ ಸ್ಟಾರ್‌ಗಳಾಗಿದ್ದು, ಹಲವು ವರ್ಷಗಳಿಂದ ಸಾಕಷ್ಟು ಹಿಟ್ ಸಿನಿಮಾಗಳನ್ನು ನಿಡಿದ್ದರು ಸಹ ಇದುವರೆಗೆ ಜೊತೆಯಾಗಿ ನಟಿಸಿದ್ದು 1997ರ ದೀವಾನಾ ಮಸ್ತಾನ ಸಿನಿಮಾದಲ್ಲಿ. ಸಲ್ಮಾನ್ ಜೂಹಿ ಜೊತೆ ಕೋರ್ಟ್ ಮ್ಯಾರೇಜ್ ಮಾಡಿಕೊಳ್ಳುವ ದೃಶ್ಯವನ್ನು ಕಾಣಬಹುದು.