ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಹೊಗಳಿದ್ದಕ್ಕೆ ದ್ವೇಷಪೂರಿತ ಹೇಳಿಕೆ ನೀಡಿದ್ದ ನೆಟ್ಟಿಗನೋರ್ವನಿಗೆ ಕವಿ ಮತ್ತು ಚಲನಚಿತ್ರ ಗೀತರಚನೆಕಾರ ಜಾವೇದ್ ಅಖ್ತರ್ ಬಾಯಲ್ಲಿ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ.

ಮುಂಬೈ: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ವಿರುದ್ಧ ಶತಕದೊಂದಿಗೆ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ್ದಕ್ಕಾಗಿ ವಿರಾಟ್ ಕೊಹ್ಲಿಯನ್ನು ಅಭಿನಂದಿಸಿ ಕವಿ ಮತ್ತು ಚಲನಚಿತ್ರ ಗೀತರಚನೆಕಾರ ಜಾವೇದ್ ಅಖ್ತರ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡು ಮೆಚ್ಚುಗೆ ಸೂಚಿಸಿದ್ದರು. ಈ ಪೋಸ್ಟ್‌ಗೆ ದ್ವೇಷಪೂರಿತ ಕಾಮೆಂಟ್ ಮಾಡಿದ ವ್ಯಕ್ತಿಗೆ ಜಾವೇದ್ ಅಖ್ತರ್ ಕಟು ಪದಗಳಲ್ಲಿ ಟ್ವೀಟ್ ಮಾಡಿ ಬೆವರಿಳಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಶತಕ ಬಾರಿಸಿದ ವಿರಾಟ್ ಕೊಹ್ಲಿ ಅವರನ್ನು ಅಭಿನಂದಿಸುತ್ತಾ ಜಾವೇದ್ ಅಖ್ತರ್ ತಮ್ಮ ಎಕ್ಸ್ ಖಾತೆಯಲ್ಲಿ "ವಿರಾಟ್ ಕೊಹ್ಲಿ ಜಿಂದಾಬಾದ್, ನಾವೆಲ್ಲರೂ ನಿಮ್ಮ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ" ಎಂದು ಬರೆದು ಅಭಿನಂದಿಸಿದ್ದರು. 

ಜಾವೇದ್ ಅಖ್ತರ್ ಅವರ ಈ ಪೋಸ್ಟ್‌ಗೆ ವ್ಯಕ್ತಿಯೊಬ್ಬ "ಇಂದು ಸೂರ್ಯ ಎಲ್ಲಿ ಉದಯಿಸಿದನು? ನನ್ನೊಳಗೆ ತುಂಬಾ ದುಃಖವಾಗಿದೆ" ಎಂದು ಬರೆದಿದ್ದರು. ಆದರೆ ಇದಕ್ಕೆ ಜಾವೇದ್ ಅಖ್ತರ್ ಬೆವರಳಿಸುವಂತೆ ಉತ್ತರ ನೀಡಿದ್ದಾರೆ. ಮಗನೇ, ನಿನ್ನ ತಂದೆ ಮತ್ತು ಅಜ್ಜ ಬ್ರಿಟಿಷರ ಬೂಟುಗಳನ್ನು ನೆಕ್ಕುತ್ತಿದ್ದರೆ, ನನ್ನ ಪೂರ್ವಜರು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಾ ಕಾಲಾಪಾನಿ ಜೈಲಿನಲ್ಲಿದ್ದರು. ದೇಶಭಕ್ತಿಯ ರಕ್ತ ನನ್ನ ರಕ್ತನಾಳಗಳಲ್ಲಿ ಹರಿಯುತ್ತಿದೆ. ಆದರೆ ನಿಮ್ಮ ನರಗಳು ಮತ್ತು ಬ್ರಿಟಿಷರಿಗೆ ಗುಲಾಮರಾಗಿ ಕೆಲಸ ಮಾಡಿದವರ ನಡುವಿನ ವ್ಯತ್ಯಾಸವನ್ನು ಕಳೆದುಕೊಳ್ಳಬೇಡಿ ಎಂದು ಜಾವೇದ್ ಅಖ್ತರ್ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ. 

ಜಾವೇದ್ ಅಖ್ತರ್ ಅವರ ಪ್ರತಿಕ್ರಿಯೆಗೆ ಬೆಂಬಲವಾಗಿ ಅನೇಕ ಜನರು ಮುಂದೆ ಬಂದರು. ಅಖ್ತರ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಮತ್ತೊಬ್ಬ ನೆಟ್ಟಿಗ, "ಜಾವೇದ್, ಕೊಹ್ಲಿ ಬಾಬರ್ ತಂದೆ, ಜೈ ಶ್ರೀ ರಾಮ್ ಎಂದು ಹೇಳಿ" ಎಂದು ಬರೆದಿದ್ದಾರೆ. ಇದಕ್ಕೆ ಜಾವೇದ್ ಅಖ್ತರ್ ಕೂಡ ಉತ್ತರಿಸಿದ್ದಾರೆ. "ನಾನು ನಿಮಗೆ ಹೇಳಲು ಬಯಸುವುದೇನೆಂದರೆ, ನೀವು ನೀಚ ಜೀವಿ ಮತ್ತು ನೀವು ನೀಚ ಜೀವಿಯಾಗಿಯೇ ಸಾಯುತ್ತೀರಿ. ದೇಶಪ್ರೇಮ ಎಂದರೇನು ಎಂದು ನಿಮಗೆ ತಿಳಿಯಲು ಯಾವುದೇ ಮಾರ್ಗವಿಲ್ಲ" ಎಂದು ಜಾವೇದ್ ಅಖ್ತರ್ ಉತ್ತರಿಸಿದರು.

ಇದನ್ನೂ ಓದಿ: 'ಅನಿಮಲ್'​ ಯಶಸ್ಸು ಡೇಂಜರಸ್​ ಎಂದ ಜಾವೇದ್​ ಅಖ್ತರ್! ನೀವು ಕಲಾವಿದನೇ ಅಲ್ಲ ಎಂದು ನಿರ್ದೇಶಕ ಗರಂ

ಚಾಂಪಿಯನ್ಸ್ ಟ್ರೋಫಿಯ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 242 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವಿರಾಟ್ ಕೊಹ್ಲಿ ಅಜೇಯ ಶತಕದೊಂದಿಗೆ ಭಾರತವನ್ನು ಗೆಲುವಿನತ್ತ ಕೊಂಡೊಯ್ದರು. ಕೊಹ್ಲಿ 111 ಎಸೆತಗಳಲ್ಲಿ 100 ರನ್ ಗಳಿಸಿ ಅಜೇಯರಾಗುಳಿದರು. ಕೊಹ್ಲಿ ಬೌಂಡರಿ ಬಾರಿಸುವ ಮೂಲಕ ತಮ್ಮ ಗೆಲುವಿನ ಓಟ ಮತ್ತು ಶತಕವನ್ನು ಪೂರ್ಣಗೊಳಿಸಿದರು. ಇದು ಕೊಹ್ಲಿ ಅವರ ಏಕದಿನ ವೃತ್ತಿಜೀವನದ 51 ನೇ ಶತಕವಾಗಿದೆ.

ಇದನ್ನೂ ಓದಿ: ಮುಸ್ಲಿಂರ ಬಹುಪತ್ನಿತ್ವ ನೋಡಿ ಬೇರೆಯವರಿಗೆ ಹೊಟ್ಟೆಕಿಚ್ಚು: ಜಾವೇದ್ ಅಖ್ತರ್

Scroll to load tweet…
Scroll to load tweet…
Scroll to load tweet…