ಸಾರ್ವಜನಿಕ ಪ್ರದೇಶದಲ್ಲಿ ಆತ ನನ್ನ ಮೇಲೆ ಕೈಹಾಕಿದ್ದ. ಆತನ ಅಸಭ್ಯ ವರ್ತನೆಗೆ ನಾನು ಕಪಾಳಕ್ಕೆ ಹೊಡೆದಿದ್ದೆ. ಆದರೆ ಬಳಿಕ ನಡೆದಿದ್ದ ಘನಘೋರ ಎಂದು ನಟಿ ಫಾತಿಮಾ ಸನಾ ಶೇಖ್ ಶಾಕಿಂಗ್ ಘಟನೆ ಬಿಚ್ಚಿಟ್ಟಿದ್ದಾರೆ.

ಮುಂಬೈ (ಜು.11) ಬಾಲಿವುಡ್ ನಟಿ ಫಾತಿಮಾ ಸನಾ ಶೇಕ್ ಶಾಕಿಂಗ್ ಘಟನೆ ಬಿಚ್ಚಿಟ್ಟಿದ್ದಾರೆ. ಇಷ್ಟೇ ಅಲ್ಲ ಈ ಘಟನೆ ಬಳಿಕ ನಾವು ಸಂತ್ರಸ್ತರಾಗಿದ್ದರೂ ಪ್ರತಿಕ್ರಿಯೆ ನೀಡುವಾಗ ಹತ್ತು ಬಾರಿ ಆಲೋಚನೆ ಮಾಡಬೇಕು ಎಂದಿದ್ದಾರೆ. ಕಾರಣ ಸಾರ್ವಜನಿಕ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಮೇಲೆ ಕೈಹಾಕಿದ್ದ. ಆತನ ಕೈಗಳು, ಉದ್ದೇಶ ಸ್ಪಷ್ಟವಾಗಿತ್ತು. ತಕ್ಷಣವೇ ನನ್ನ ಆಕ್ರೋಶ ಹೆಚ್ಚಾಗಿತ್ತು. ಹೀಗಾಗಿ ಆತನ ಕಪಾಳಕ್ಕೆ ಭಾರಿಸಿದ್ದೆ. ಹಲವರು ಸೇರಿದ್ದ ಸ್ಥಳದಲ್ಲಿ ಕಪಾಳಕ್ಕೆ ಭಾರಿಸಿದ ಬೆನ್ನಲ್ಲೇ ಆತ ತಿರುಗಿ ನನಗೆ ಬಲವಾಗಿ ಹೊಡೆದಿದ್ದ. ಆತನ ಹೊಡೆತಕ್ಕೆ ನಾನು ಕುಸಿದು ಬಿದ್ದೆ ಎಂದು ಫಾತಮಿ ಸನಾ ಶೇಖ್ ಹೇಳಿದ್ದಾರೆ.

ನಾನು ಕಪಾಳಕ್ಕೆ ಹೊಡೆದ, ಆದರೆ ಆತ...

ಹೌಟರ್‌ಫ್ಲೈ ಜೊತೆ ಮುಕ್ತ ಸಂವಾದದಲ್ಲಿ ಫಾತಿಮಾ ಸನಾ ಶೇಕ್ ಈ ಘಟನೆ ಬಿಚ್ಚಿಟ್ಟಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಒಬ್ಬ ವ್ಯಕ್ತಿ ನನ್ನ ಹಿಂದಿನ ಭಾಗಕ್ಕೆ ಕೈ ಹಾಕಿದ್ದ. ನನ್ನ ಪಿತ್ತ ನೆತ್ತಿಗೇರಿತ್ತು. ತಕ್ಷಣವೇ ಆತನ ಕಪಾಳಕ್ಕೆ ಭಾರಿಸಿದ್ದೆ. ಸಾರ್ವಜನಿಕ ಪ್ರದೇಶದಲ್ಲಿ ಆತನ ತನ್ನ ತಪ್ಪು ಮುಚ್ಚಿಕೊಳ್ಳಲು ಹಾಗೂ ಮುಜುಗರ ತಪ್ಪಿಸಲು ನನಗೆ ಬಲವಾಗಿ ಹೊಡೆದ. ಆತನ ಹೊಡೆತಕ್ಕೆ ನಾನು ಕುಸಿದು ಹೋದೆ. ಈ ಹೊಡೆತದಿಂದ ಚೇತರಿಸಿಕೊಳ್ಳಲು ಕೆಲ ಹೊತ್ತು ಬೇಕಾಯಿತು ಎಂದು ಫಾತಿಮಾ ಸನಾ ಹೇಳಿದ್ದಾರೆ.

ಮಹಿಳೆ ಮೇಲೆ ಕಿರುಕುಳ ವಿರೋಧಿಸುವುದು ಹೇಗೆ?

ಈ ಘಟನೆ ಬಳಿಕ ಪಾಠ ಕಲಿತುಕೊಂಡೆ. ಇಲ್ಲಿ ನಾನು ಸಂತ್ರಸ್ತೆ. ಆದರೆ ಪ್ರತಿಕ್ರಿಯಿಸುವಾಗ ಮಾತ್ರ ಎಚ್ಚರದಿಂದ ಇರಬೇಕು. ಆತ ಅಸಭ್ಯವಾಗಿ ನನ್ನ ಮೇಲೆ ಹೈಕಾಕಿದರೂ ನಾನು ಪ್ರತಿಕ್ರಿಯಿಸಿದ್ದೇ ತಪ್ಪಾಗಿ ಹೋಯಿತು. ಸಾರ್ವಜನಿಕ ಪ್ರದೇಶದಲ್ಲಿ ಈ ಘಟನೆ ನನ್ನನ್ನು ಮತ್ತಷ್ಟು ಎಚ್ಚರದಿಂದ ಇರುವಂತೆ ಮಾತ್ರವಲ್ಲ, ಘಟನೆ ಕುರಿತು ತಕ್ಷಣ ಹೇಗೆ ಪ್ರತಿಕ್ರಿಯಿಸಬೇಕು ಅನ್ನೋದು ಅರಿವಾಗಿತ್ತು. ದುರಂತ ಎಂದರೆ ಒರ್ವ ಹೆಣ್ಣು ತನ್ನ ಮೇಲಾಗತ್ತಿರುವ ದೌರ್ಜನ್ಯವನ್ನು ವಿರೋಧಿಸುವುದು ಹೇಗೆ ಎಂದು ಫಾತಿಮಾ ಸನಾ ಹೇಳಿದ್ದಾರೆ.

ನನ್ನ ಹಿಂಬಾಲಿಸಿದ ಟೆಂಪೋ ಚಾಲಕ

ಅದು ಕೋವಿಡ್ ಸಂದರ್ಭ. ಎಲ್ಲೆಡೆ ಲಾಕ್‌ಡೌನ್. ಕಟ್ಟು ನಿಟ್ಟಿನ ಲಾಕ್‌ಡೌನ್ ಅಂತ್ಯಗೊಂಡು ನಿಯಮಗಳು ಸಡಿಲಗೊಂಡಿತ್ತು. ಈ ವೇಳೆ ನಾನು ಮಾಸ್ಕ್ ಧರಿಸಿ ಕ್ಯಾಪ್ ಧರಿಸಿ ಬೈಸಿಕಲ್‌ನಲ್ಲಿ ಮುಂಬೈ ರಸ್ತೆಯಲ್ಲಿ ಸಾಗುತ್ತಿದ್ದೆ. ಜಿಮ್ ಸೇರಿದಂತೆ ಇತರ ವರ್ಕೌಟ್ ಸೆಂಟರ್ ಮುಚ್ಚಿತ್ತು. ಫಿಟ್ನೆಸ್ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಲಾಕ್‌ಡೌನ್ ಸಂದರ್ಭದಲ್ಲಿ ಜನ ಸಂದಣಿ ಇರಲಿಲ್ಲ. ಹೀಗಾಗಿ ಬೈಸಿಕಲ್ ಮೂಲಕ ತೆರಳುತ್ತಿದ್ದೆ. ಹೀಗೆ ಒಂದು ದಿನ ಬೈಸಿಕಲ್ ಮೂಲಕ ತೆರಳಿದಾಗ ನನ್ನ ಗುರುತು ಪತ್ತೆಯಾಗುತ್ತಿರಲಿಲ್ಲ. ಕಾರಣ ಕ್ಯಾಪ್ ಹಾಗೂ ಮಾಸ್ಕ್ ಧರಿಸಿದ್ದೆ. ಒಬ್ಬ ಟೆಂಪೋ ಡ್ರೈವರ್ ಪದೇ ಪದೇ ನನ್ನ ಹಿಂದಿನಿಂದ ಬಂದು ಹಾರ್ನ್ ಹೊಡೆಯುತ್ತಿದ್ದ. ಬಳಿಕ ಏನೋ ಹೇಳುತ್ತಿದ್ದ. ನಾನು ತಿರುಗಿ ನೋಡಲು ಹೋಗಲಿಲ್ಲ. ನಾನು ಬೈಸಿಕಲ್ ಮೂಲಕ ನಿಧಾನವಾಗಿ ತೆರಳುತ್ತಿದ್ದರೆ, ಆತ ನನ್ನ ಹಿಂದೆ ನಿಧಾನವಾಗಿ ಹಾರ್ನ್ ಹೊಡೆಯುತ್ತಾ ಕಮೆಂಟ್ ಪಾಸ್ ಮಾಡುತ್ತಾ ಬರುತ್ತಿದ್ದ. ಕೆಲ ದೂರದ ವರೆಗೆ ಆತ ಹಿಂಬಾಲಿಸಿದ್ದ ಎಂದು ಫಾತಿಮಾ ಸನಾ ಹೇಳಿದ್ದಾರೆ.