ದಿವ್ಯಾ ವೈವಾಹಿಕ ಜೀವನಕ್ಕೆ ಮತ್ತೊಂದು ಟ್ವಿಸ್ಟ್. ಮಂಗಳಮುಖಿ ಜೊತೆ ಅಫೇರ್ ಇರುವುದು ನಿಜವೇ?
ಕನ್ನಡ ಮತ್ತು ತೆಲುಗು ಕಿರುತೆರೆ ನಟಿ ದಿವ್ಯಾ ಶ್ರೀಧರ್ ಮತ್ತು ನಟ ಅಮ್ಜಾದ್ ಖಾನ್ ಮದುವೆ ವಿಚಾರ ಬೀದಿಗೆ ಬಂದು ನಿಂತಿದೆ. ಒಬ್ಬರ ಮೇಲೆ ಮತ್ತೊಬ್ಬರು ದೂರು ಕೊಟ್ಟೂ ಕೊಟ್ಟು ಪ್ರಕರಣಕ ಎಲ್ಲಿಂದ ಎಲ್ಲಿಗೋ ಹೋಗುತ್ತಿದೆ. ಈ ನಡುವೆ ಅಮ್ಜಾದ್ ಖಾನ್ ಮದುವೆ, ಮಾಜಿ ಪ್ರೇಯಸಿ ಮತ್ತು ಅಫೇರ್‌ಗಳು ಬೆಳಕಿಗೆ ಬರುತ್ತಿದೆ. ಗರ್ಭಿಣಿ ದಿವ್ಯಾ ಶ್ರೀಧರ್ ಸದ್ಯಕ್ಕೆ ವಿಶ್ರಾಂತಿಯಲ್ಲಿದ್ದುಕೊಂಡೇ ಕೇಸ್ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಅಮ್ಜಾದ್ ಖಾನ್ ಸದ್ಯಕ್ಕೆ ಜೈಲಿನಲ್ಲಿದ್ದು, ಇದೇ ಸಮಯಕ್ಕೆ ಮಂಗಳಮುಖಿಯೊಬ್ಬರು ಮತ್ತೊಂದು ದೂರು ನೀಡಿದ್ದಾರೆ. ಅಮ್ಜಾದ್ ಖಾನ್ ಜೊತೆಗಿರುವ ಅಫೇರ್ ಬಗ್ಗೆ ಮಾತನಾಡಿರುವ ಆಡಿಯೋ ಮತ್ತು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಖಾಸಗಿ ಮಲಯಾಳಂ ವೆಬ್‌ಸೈಟ್ ಈ ವಿಚಾರದ ಬಗ್ಗೆ ವರದಿ ಮಾಡಿದೆ, ಮಂಗಳಮುಖಿ ಹೆಸರು ಪ್ರಿಯಾದರ್ಶಿನಿ ಎಂದು ತಿಳಿದು ಬಂದಿದ್ದು ಮೂಲತಃ ಮಲೇಶಿಯಾದಲ್ಲಿದ್ದಾರಂತೆ.

'ಅವನು ನನ್ನನ್ನು ಪ್ರೀತಿಸಿದ್ದ. ಆ ನಂತರ ಗೊತ್ತಾಯಿತ್ತು ಅವನೊಬ್ಬ ಹೆಣ್ಣುಬಾಕಾ ಅಂತ. ಚೆನ್ನೈನಲ್ಲಿ ಅವನು ನನ್ನ ಜೊತೆ ಸಹ ಜೀವನ ನಡೆಸಿದ್ದಾನೆ. ಅಲ್ಲದೆ ವಿವಾಹ ಕೂಡ ಆಗಿದೆ. ಎರಡು ವರ್ಷ ಒಟ್ಟಿಗೆ ಇದ್ದೆವು. ಆಮೇಲೆ ಆವನು ನನ್ನನ್ನು ದೂರು ಮಾಡಿದ. ನಾವು ನೋವು ತಾಳಲಾರದೆ ಮಲೇಶಿಯಾಗೆ ಹೊರಟೆ' ಎಂದು ಆಡಿಯೋದಲ್ಲಿ ಪ್ರಿಯಾದರ್ಶಿನಿ ಮಾತನಾಡಿದ್ದಾರೆ. ಈ ವಿಚಾರ ದಿವ್ಯಾ ಶ್ರೀಧರ್‌ಗೆ ಗೊತ್ತಾಗಿ ಪ್ರಿಯಾದರ್ಶಿನಿ ಯಾರೆಂದು ತಿಳಿದುಕೊಳ್ಳುವ ಪ್ರಯತ್ನ ಕೂಡ ಮಾಡುತ್ತಿದ್ದಾರಂತೆ.
ಮಹಿಳಾ ಆಯೋಗ ಪ್ರವೇಶ:
ಕರ್ನಾಟಕ ಮೂಲದ ನಟಿ ದಿವ್ಯಾ ಶ್ರೀಧರ್‌ಗೆ ಸೂಕ್ತ ನ್ಯಾಯ ಒದಗಿಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಆಗ್ರಹಿಸಿದ್ದು, ಈ ಕುರಿತಂತೆ ತಮಿಳು ನಾಡು ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಅಲ್ಲದೇ ಅವರ ಜೊತೆ ದೂರವಾಣಿ ಮೂಲಕವೂ ಮಾತನಾಡಿದ್ದಾರೆ.
Divya Sridhar: ಕನ್ನಡದ ನಟಿಗೆ ಕೈಕೊಟ್ಟ ತಮಿಳಿನ ಮುಸ್ಲಿಂ ನಟ: ಇದು ಸೀರಿಯಲ್ ಲವ್ ಜಿಹಾದ್?
ಮಹಿಳಾ ಆಯೋಗದ ಪತ್ರದಲ್ಲಿ ದಿವ್ಯಾಗೆ ಸೂಕ್ತ ರಕ್ಷಣೆ ಮತ್ತು ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ದಿವ್ಯಾ ಶ್ರೀಧರ್ ತನ್ನ ಗಂಡನಿಂದ ದೈಹಿಕ ಹಲ್ಲೆ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದರಿಂದ ಅವರಿಗೆ ರಕ್ಷಣೆ ನೀಡಬೇಕು. ಗರ್ಭಿಣಿ ಅನ್ನುವುದನ್ನೂ ನೋಡದೇ ಆಕೆಯ ಪತಿ ಹೊಟ್ಟೆಗೆ ಒದ್ದಿರುವುದು ಗಂಭೀರ ಪ್ರಕರಣ ಎಂದು ಪರಿಗಣಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮಿಳು ಸೀರಿಯಲ್‌ನಲ್ಲಿ ನಟಿಸುವಾಗ ದಿವ್ಯಾ ಶ್ರೀಧರ್‌ಗೆ ಆರ್ನವ್ ಪರಿಚಯ ಆಗಿದೆ. ದಿವ್ಯಾಳನ್ನು ಪ್ರೀತಿಸಬೇಕು ಎಂದು ಅಮ್ಜದ್ ಖಾನ್ ಎಂದು ನಿಜವಾದ ಹೆಸರುನ್ನು ಹೇಳದೇ ಆರ್ನವ್ ಎಂದು ಸುಳ್ಳು ಹೇಳಿ ಪರಿಚಯ ಮಾಡಿಕೊಂಡಿದ್ದಾರೆ. ಈಗ ಇದೇ ಆರ್ನವ್ ಜೀವನದ ಅಸಲಿ ಕಥೆ ಬೆಳಕಿಗೆ ಬಂದ ಮೇಲೆ ದೂರು ನೀಡಿದ್ದಾರೆ. ದಿವ್ಯಾ ಮೂರು ತಿಂಗಳ ಗರ್ಭಿಣಿ ಆಗಿದ್ದು ನನಗೆ ಜೀವ ಬೆದರಿಕೆ ಇದೆ ಹೀಗಾಗಿ ನನಗೆ ನನ್ನ ಮಗುವಿಗೆ ಏನೇ ಆದರೂ ಅದಕ್ಕೆ ಅರ್ನವ್ ಕಾರಣ ಎಂದಿದ್ದಾರೆ.
ಮತ್ತೊಬ್ಬಳ ಜತೆ ಅಫೇರ್; ಪತಿಯ ವಿರುದ್ಧ ದೂರು ನೀಡಿದ ಗರ್ಭಿಣಿ ನಟಿ ದಿವ್ಯಾ ಶ್ರೀಧರ್
2014ರಲ್ಲಿ ಶಕ್ತಿ ಧಾರಾವಾಹಿ ಮೂಲಕ ಬಣ್ಣದ ಲೋಕದ ಜರ್ನಿ ಆರಂಭಿಸಿದ ಅಮ್ಜದ್ ಖಾನ್ ಮೊಹಮ್ಮದ್ ಅತೀ ಕಡಿಮೆ ಅವಧಿಯಲ್ಲೇ ಜನಪ್ರಿಯತೆ ಪಡೆದುಕೊಂಡರು. ಈ ಸಮಯದಲ್ಲಿ ದಿವ್ಯಾಳ ಜೊತೆ ಪ್ರೀತಿಯಲ್ಲಿ ಬಿದ್ದು ಆಕೆಗೆ ಜಾತಿ ಮತಾಂತರ ಆಗುವಂತೆ ಒತ್ತಾಯ ಮಾಡಿದ್ದಾರೆ. ಪೋಷಕರಿಗೆ ಪ್ರೀತಿ ವಿಚಾರ ತಿಳಿಸಬೇಕು ಅವರಿಂದ ಮದುವೆಗೆ ಅನುಮತಿ ಪಡೆಯಬೇಕು ಎಂದು 2022ರ ಫೆಬ್ರವರಿಯಲ್ಲಿ ದಿವ್ಯಾ ಮುಸ್ಲಿಂಗೆ ಮತಾಂತರ ಆಗಿದ್ದಾರೆ. ಮದುವೆಯಿಂದ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಮದುವೆ ವಿಚಾರವನ್ನು ಸೀಕ್ರೆಟ್ ಆಗಿಟ್ಟಿದ್ದರು. ಈ ನಡುವೆ ಅರ್ನವ್ ಕಿರುತೆರೆಯ ಮತ್ತೊಬ್ಬಳ ಜತೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ದಿವ್ಯಾ ಸತ್ಯ ಬಿಚ್ಚಿಟ್ಟಿದ್ದಾರೆ.
