ನಟಿ ದೀಪಿಕಾ ಕಕ್ಕರ್‌ಗೆ ಎರಡನೇ ಹಂತದ ಲಿವರ್ ಕ್ಯಾನ್ಸರ್ ಇರುವುದಾಗಿ ದೃಢಪಟ್ಟಿದೆ. ಅವರ ಪತಿ ಶೋಯೆಬ್ ಇಬ್ರಾಹಿಂ ಈ ವಿಷಯವನ್ನು ತಮ್ಮ ವ್ಲಾಗ್‌ನಲ್ಲಿ ಬಹಿರಂಗಪಡಿಸಿದ್ದಾರೆ ಮತ್ತು ಮಗ ರುಹಾನ್ ಈ ಸಮಯದಲ್ಲಿ ಹೇಗೆ ಪ್ರತಿಕ್ರಿಯಿಸುತ್ತಿದ್ದಾನೆ ಎಂಬುದನ್ನು ಹಂಚಿಕೊಂಡಿದ್ದಾರೆ.
ನಟಿ ದೀಪಿಕಾ ಕಕ್ಕರ್ ಅವರು ಒಂದು ವಾರದ ಹಿಂದೆ ಲಿವರ್‌ನಲ್ಲಿ ಒಂದು ಗಡ್ಡೆ ಬೆಳೆದಿರೋದು ಪತ್ತೆ ಆಗಿದೆ. ಇದು ಕ್ಯಾನ್ಸರ್ ಹೌದೋ ಇಲ್ಲವೋ ರೆಂದು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದರು. ಈಗಾಗಲೇ ವರದಿ ಬಂದಿದ್ದು, ದೀಪಿಕಾಗೆ ಕ್ಯಾನ್ಸರ್ ಇರೋದು ಪಕ್ಕಾ ಆಗಿದೆ. ನಿಜಕ್ಕೂ ನಟಿ ದೀಪಿಕಾ ಕಕ್ಕರ್ ಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ. ಶೋಯೆಬ್ ಇಬ್ರಾಹಿಂ ಮತ್ತು ದೀಪಿಕಾ ಕಕ್ಕರ್ ತಮ್ಮ ಯುಟ್ಯೂಬ್ ವ್ಲಾಗ್ ಮೂಲಕ ದೀಪಿಕಾಗೆ ಎರಡನೇ ಹಂತದ ಲಿವರ್ ಕ್ಯಾನ್ಸರ್ ಇರುವುದಾಗಿ ಹೇಳಿದ್ದಾರೆ.. ಇದರೊಂದಿಗೆ, ಅವರ ಮಗ ರುಹಾನ್ ಹೇಗೆ ಪ್ರತಿಕ್ರಿಯಿಸಿದನೆಂದು ಬಹಿರಂಗಪಡಿಸಿದರು. ಈ ಸುದ್ದಿ ಕೇಳಿ ದೀಪಿಕಾ ಅಭಿಮಾನಿಗಳು ಚಿಂತಿತರಾಗಿದ್ದು, ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಮಗ ರುಹಾನ್ ಏನಂದ್ರು?
ಶೋಯೆಬ್ ಮತ್ತು ದೀಪಿಕಾ ತಮ್ಮ ವ್ಲಾಗ್‌ನಲ್ಲಿ 2 ವರ್ಷದ ರುಹಾನ್‌ಗಾಗಿ ಪ್ರಾರ್ಥಿಸುವಂತೆ ಅಭಿಮಾನಿಗಳ ಬಳಿ ಕೇಳಿಕೊಂಡರು. ಇದಕ್ಕೆ ಶೋಯೆಬ್, 'ರುಹಾನ್ ಕೂಡ ತುಂಬಾ ಪ್ರಬುದ್ಧತೆಯಿಂದ ವರ್ತಿಸಿದ್ದಾನೆ. ಅವನ ಹಾಲುಣಿಸುವಿಕೆ ಈಗ ಸಂಪೂರ್ಣವಾಗಿ ನಿಂತಿದೆ' ಎಂದು ಹೇಳಿದರು.
ದೀಪಿಕಾ ಮುಂದುವರಿದು, 'ಅವನಿಗೆ ಅಮ್ಮ ಚೆನ್ನಾಗಿಲ್ಲ ಎಂದು ತಿಳಿದಿದೆ, ಅವನು ಅರ್ಥಮಾಡಿಕೊಂಡಿದ್ದಾನೆ. ಅವನು ದಿನಕ್ಕೆ ಒಂದು ಅಥವಾ ಎರಡು ಬಾರಿ ಬಂದು ನನ್ನ ಬಳಿ ಬರುತ್ತಾನೆ, ಆಮೇಲೆ ಅವನು ಅಮ್ಮನಿಗೆ ಹುಷಾರಿಲ್ಲ ಅಂತ ಅರ್ಥ ಆಗುತ್ತದೆ ಎಂದು ಅರ್ಥಮಾಡಿಕೊಳ್ಳುತ್ತಾನೆ, ಆದರೆ ಹೌದು, ಎಲ್ಲರೂ ಇದ್ದಾರೆ, ಆದ್ದರಿಂದ ನಾವು ಬಲಶಾಲಿಗಳಾಗಿದ್ದೇವೆ' ಎಂದು ಹೇಳಿದರು.
ದೀಪಿಕಾಗೆ ಕ್ಯಾನ್ಸರ್ ಆಗಿದ್ದು ಹೇಗೆ ಗೊತ್ತಾಯ್ತು?
ದೀಪಿಕಾ ಕಕ್ಕರ್‌ಗೆ ಕೆಲವು ದಿನಗಳ ಹಿಂದೆ ಹೊಟ್ಟೆ ನೋವು ಕಾಣಿಸಿಕೊಂಡಿತು. ಅವರು ಪರೀಕ್ಷೆ ಮಾಡಿಸಿದಾಗ, ಅವರ ಹೊಟ್ಟೆಯಲ್ಲಿ ಗಡ್ಡೆ ಇರುವುದು ಪತ್ತೆಯಾಯಿತು. ನಂತರ ಅವರು ಆ ಗಡ್ಡೆಯನ್ನು ಪರೀಕ್ಷಿಸಿದಾಗ, ಅವರಿಗೆ ಎರಡನೇ ಹಂತದ ಲಿವರ್ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಅವರ ಶಸ್ತ್ರಚಿಕಿತ್ಸೆ ನಡೆಯಬೇಕಿತ್ತು, ಆದರೆ ದೀಪಿಕಾಗೆ ಜ್ವರ ಬಂದಿದ್ದಕ್ಕೆ ವೈದ್ಯರು ಸರ್ಜರಿ ಆಗೋದನ್ನು ಮುಂದೂಡಿದ್ದಾರೆ. ಆದಾಗ್ಯೂ, ಈಗ ಅವರ ಶಸ್ತ್ರಚಿಕಿತ್ಸೆ ಮುಂದಿನ ಕೆಲವು ದಿನಗಳಲ್ಲಿ ನಡೆಯಲಿದೆ.
ಧಾರಾವಾಹಿಗಳಲ್ಲಿ ನಟನೆ!
ದೀಪಿಕಾ ಅವರು ಬಾಲಿವುಡ್‌ನ ಖ್ಯಾತ ನಟಿ. ಅವರು 'ಸಸುರಾಲ್ ಸಿಮರ್ ಕಾ', 'ಅಗ್ಲೆ ಜನಮ್ ಮೊಹೆ ಬಿಟಿಯಾ ಹಿ ಕೀಜೋ', 'ಕಹಾಂ ಹಮ್ ಕಹಾಂ ತುಮ್' ಮುಂತಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ, ಅವರು 'ನಚ್ ಬಲಿಯೇ', 'ಝಲಕ್ ದಿಖ್ಲಾ ಜಾ' ಮತ್ತು 'ಬಿಗ್ ಬಾಸ್ 12' ನಂತಹ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಮದುವೆ ಬಳಿಕ ಇಸ್ಲಾಂಗೆ ಮತಾಂತರ!
ಆರಂಭದಲ್ಲಿ ಒಂದು ಮದುವೆಯಾಗಿ ಡಿವೋರ್ಸ್ ಪಡೆದಿದ್ದ ದೀಪಿಕಾಗೆ ಶೋಯೆಬ್ ಪರಿಚಯ ಆಗಿತ್ತು. ಇವರಿಬ್ಬರು ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಆ ವೇಳೆ ಶೋಯೆಬ್ ಪ್ರೇಮ ನಿವೇದನೆ ಮಾಡಿದ್ದರು. ಆಮೇಲೆ ದೀಪಿಕಾ ಅವರು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ್ದರು. ಶೋಯೆಬ್ ಮದುವೆ ಆದಬಳಿಕ ಜೀವನ ತುಂಬ ಚೆನ್ನಾಗಿದೆ ಎಂದು ಅವರು ಹೇಳಿದ್ದಾರೆ, ಇನ್ನು ರುಹಾನ್ ಎನ್ನುವ ಮಗನಿಗೂ ಅವರು ಜನ್ಮ ನೀಡಿದ್ದರು.
ಗರ್ಭಪಾತದ ಸಮಸ್ಯೆ ಎದುರಿಸಿದ್ದ ದೀಪಿಕಾ!
ಮಗುವಿನ ವಿಚಾರದಲ್ಲಿಯೂ ದೀಪಿಕಾಗೆ ಸಮಸ್ಯೆ ಆಗಿತ್ತು. ಸಾಕಷ್ಟು ಬಾರಿ ಅವರು ಗರ್ಭಪಾತದ ಸಮಸ್ಯೆ ಎದುರಿಸಿದ್ದರು. ಯುಟ್ಯೂಬ್ ಚಾನೆಲ್ ಹೊಂದಿರುವ ದೀಪಿಕಾ ತಮ್ಮ ದಿನಚರಿಯ ಬಗ್ಗೆ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತಿರುತ್ತಾರೆ.
