Asianet Suvarna News Asianet Suvarna News

ತುಂಬಿದ ಅಸೆಂಬ್ಲಿಯಲ್ಲಿ ಸೀರೆ-ಬ್ಲೌಸ್‌ ಕಿತ್ತ ದೊರೆ ಮುರುಗನ್; ಜಯಲಲಿತಾ ಅಂದು ಹೇಳಿದ್ದೇನು?

ನಟಿ ಹಾಗೂ ರಾಜಕಾರಣಿ ಜಯಲಲಿತಾ ಅವರು ತಾವೇನು ತಮ್ಮ ಪ್ರತಿಭೆ ಹಾಗೂ ತಾಕತ್ತೇನು ಎಂಬುದನ್ನು ಇಡೀ ಜಗತ್ತಿಗೇ ತೋರಿಸಿಕೊಟ್ಟವರು. ಅಂದು ನಟಿ, ರಾಜಕಾರಣಿ ಜಯಲಲಿತಾ ಹಾಗು ಕರುಣಾನಿಧಿ ಇಬ್ಬರ ನಡುವೆ ರಾಜಕಾರಣ ಅಂದರೆ, ಅಧಿಕಾರಕ್ಕಾಗಿ ಘನಘೋರ ಮುಸುಕಿನ ಗುದ್ದಾಟವೇ ನಡೆಯುತ್ತಿತ್ತು.

Actress and Tamil Nadu former Chief Minister Jayalalithaa and M Karunanidhi political fight incident srb
Author
First Published May 31, 2024, 6:09 PM IST | Last Updated May 31, 2024, 6:12 PM IST

ನಟಿ ಹಾಗೂ ರಾಜಕಾರಣಿ ಜಯಲಲಿತಾ ಅವರು ತಾವೇನು ತಮ್ಮ ಪ್ರತಿಭೆ ಹಾಗೂ ತಾಕತ್ತೇನು ಎಂಬುದನ್ನು ಇಡೀ ಜಗತ್ತಿಗೇ ತೋರಿಸಿಕೊಟ್ಟವರು. ತಮಿಳು ನಾಡಿನಲ್ಲಿ ಇಂದಿಗೂ ಕೂಡ ಯಾವುದೇ ರಾಷ್ಟ್ರೀಯ ಪಕ್ಷದ ಬದಲು ಲೋಕಲ್ ಅಂದರೆ ಸ್ಥಳಿಯ ಪಕ್ಷವೇ ಆಡಳಿತ ನಡೆಸುತ್ತಿದೆ. ಅಂದು ನಟಿ, ರಾಜಕಾರಣಿ ಜಯಲಲಿತಾ ಹಾಗು ಕರುಣಾನಿಧಿ ಇಬ್ಬರ ನಡುವೆ ರಾಜಕಾರಣ ಅಂದರೆ, ಅಧಿಕಾರಕ್ಕಾಗಿ ಘನಘೋರ ಮುಸುಕಿನ ಗುದ್ದಾಟವೇ ನಡೆಯುತ್ತಿತ್ತು.

ಒಮ್ಮೆ, ಅಂದು ಅಧಿಕಾರದಲ್ಲಿದ್ದ ಕರುಣಾನಿಧಿ ಬಜೆಟ್ ಮಂಡನೆ ಮಾಡುತ್ತಿದ್ದರು. ಆದರೆ ಅವರು ಹೇಳುತ್ತಿದ್ದ ಅಂಕಿ-ಸಂಖ್ಯೆಯಲ್ಲಿ ವ್ಯತ್ಯಾಸ ಆಯ್ತು. ಆ ವೇಳೆ ಅಲ್ಲೆ ಇದ್ದ ಜಯಲಲಿತಾ ಅವರು ತುಂಬಿದ ಸಭೆಯಲ್ಲಿಯೇ 'ಕ್ರಿಮಿನಲ್ ಕರುಣಾನಿಧಿ' ಎಂದು ಜೋರಾಗಿ ಕೂಗಿಕೊಂಡರು. ಜಯಲಲಿತಾ ಬೆಂಬಲಿಗರೆಲ್ಲರೂ ಹೀಗೇ ಕೂಗಿಕೊಳ್ಳಲು ಕರುಣಾನಿಧಿ ಬೆಂಬಲಿಗರೆಲ್ಲಾ ಸಿಕ್ಕಾಪಟ್ಟೆ ಗಾಬರಿಯಾಗಿಬಿಟ್ರು. ಕರುಣಾನಿಧಿ ಆಪ್ತ ದೊರೆ ಮುರುಗನ್ ಜಯಲಲಿತಾ ಬಳಿ ಬಂದು ತಲೆಗೆ ಬಲವಾಗಿ ಹೊಡೆದುಬಿಟ್ಟ.

ಬ್ರೇಕಪ್ ಬಳಿಕ ಖಿನ್ನತೆಗೆ ಜಾರಿದ್ದ ಅನುಪಮಾ ಗೌಡಗೆ ಹೆಲ್ಪ್ ಮಾಡಿದ ಹ್ಯಾಂಡ್ ಯಾರದು?

ಅಷ್ಟೇ ಅಲ್ಲ, ಆ ತುಂಬಿದ ಸಭೆಯಲ್ಲಿ 'ದುಶ್ಯಾಸನ ದ್ರೌಪದಿ ಸೀರೆ ಎಳೆದಂತೆ' ಜಯಲಲಿತಾ ಸೀರೆಯ ಸೆರಗಿನ ಪಿನ್ ಕಿತ್ತುಹಾಕಿ ಅಟ್ಟಹಾಸ ಮೆರೆದಿದ್ದ. ಸೆರಗಿನ ಪಿನ್ ಜೊತೆ ಬ್ಲೌಸ್ ಕೂಡ ಹರಿದು ಕಿತ್ತು ಬಂದಿತ್ತು. ಅದು ಆ ಸಮಯದಲ್ಲಿ ತಮಿಳುನಾಡಿನಲ್ಲಿ ಹೆಣ್ಣೊಬ್ಬಳ ಮೇಲೆ ನಡೆದ ದೊಡ್ಡ ದೌರ್ಜನ್ಯ. ಆ ಘಟನೆ ಈ ಭಾರತದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿ ಜಯಲಲಿತಾ ಅವರ ಮೇಲೆ ಭಾರಿ ಅನುಕಂಪದ ಅಲೆಯನ್ನು ಸೃಷ್ಟಿ ಮಾಡಿತ್ತು.

ಭಾಷೆ ಬಗ್ಗೆ ಮತ್ತೆ 'ಕಿರಿಕ್' ಮಾಡಿಕೊಂಡ್ರಾ ರಶ್ಮಿಕಾ ಮಂದಣ್ಣ; ಎಲ್ಲೇ ಹೋದ್ರೂ ಬೆಂಬಿಡದ ವಿವಾದ!

ಕೂದಲು ಹರಡಿದ ಸ್ಥಿತಿಯಲ್ಲಿ ಅಂದು ಅಸೆಂಬ್ಲಿಯಿಂದ ಹೊರಗೆ ಬಂದಿದ್ದರು ಜಯಲಲಿತಾ. ಸಿಕ್ಕಾಪಟ್ಟೆ ಅವಮಾನ, ಮುಖಭಂಗಕ್ಕೆ ಒಳಗಾದ ಜಯಲಲಿತಾ, ಅಲ್ಲೆ ಪಣ ತೊಟ್ಟು ಪ್ರತಿಜ್ಞೆ ಮಾಡ್ತಾರೆ. 'ನಾನು ಮುಂದಿನ ಎಲೆಕ್ಷನ್‌ನಲ್ಲಿ ಈ ಅಸೆಂಬ್ಲಿ ಒಳಕ್ಕೆ ಮುಖ್ಯಮಂತ್ರಿ ಆಗಿಯೇ ಕಾಲಿಡುತ್ತೇನೆ' ಎಂದು. ಜಯಲಲಿತಾ ಹಠ ಮತ್ತು ಸಾಧಿಸುವ ಛಲದ ಬಗ್ಗೆ ಅರಿವಿದ್ದವರಿಗೆ ಅಂದೇ 'ಜಯಲಲಿತಾ ಮುಂದಿನ ಮುಖ್ಯಮಂತ್ರಿ' ಎಂದು ಅರ್ಥವಾಗಿತ್ತು. 

ಅಷ್ಟೊಂದು ಸತ್ಯವಂತರಾಗ್ಬೇಡಿ ಆ್ಯಂಕರ್ ಅನುಶ್ರೀ; ಈ ಕಾಮೆಂಟ್‌ಗೆ ಅವ್ರನ್ನ ಸುಮ್ನೆ ಬಿಡಲ್ಲ ಬಿಡಿ!

ಅದರಂತೆ ಅದಕ್ಕೂ ಮುಂದಿನ ಎಲೆಕ್ಷನ್‌ನಲ್ಲಿ ಕರುಣಾನಿಧಿ ಗೆದ್ದಿದ್ದು ಎರಡೇ ಕ್ಷೇತ್ರಗಳಲ್ಲಿ. ಆದರೆ ಜಯಲಲಿತಾ ಅಮೋಘ ಗೆಲುವು ಸಾಧಿಸಿ ಕರುಣಾನಿಧಿ ಮಾಜಿ ಮುಖ್ಯಮಂತ್ರಿ ಆಗುವಂತೆ ಮಾಡಿಬಿಟ್ಟಿದ್ದರು. ತಮಿಳುನಾಡಿನ ರಾಜಕಾರಣ ಎಂದರೆ ಅದು ಜಯಲಲಿತಾ ಹಾಗೂ ಕರುಣಾನಿಧಿ ನಡುವಿನ ಹೋರಾಟ, ಹಾವು-ಮುಂಗುಸಿಯಾಟ ಎಂಬಂತಿದ್ದ ಕಾಲವದು. ಈಗಲೂ ಅಷ್ಟೇ, ಅವರಿಬ್ಬರ ಬೆಂಬಲಿಗರ ಹೋರಾಟವೇ ಆಗಿದೆ. ಒಟ್ಟಿನಲ್ಲಿ, ಪ್ರತೀಕಾರದ ಕಿಡಿ ಯಾವತ್ತೂ ಅವರಿಬ್ಬರ ಮಧ್ಯೆ ಹೊತ್ತಿಕೊಂಡು ಉರಿಯುತ್ತಲೇ ಇತ್ತು. 

ನೈಟ್ ಮೆಸೇಜ್ ಮಾಡಿ ಅಂದಿದ್ರಿ ನಂಬರ್ ಕೊಟ್ಟು; ಅನುಶ್ರೀಗೆ ತಗ್ಲಾಕೊಂಡ್ರಾ ಅಚ್ಯುತ್?

Latest Videos
Follow Us:
Download App:
  • android
  • ios