Asianet Suvarna News Asianet Suvarna News

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ, ನಿರೂಪಕಿ ಶ್ವೇತಾ ಚಂಗಪ್ಪ: ವಿಶೇಷ ವಿಡಿಯೋ ರಿಲೀಸ್​...

 ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ದಿನದಂದು ಜೀ ಕನ್ನಡ ವಾಹಿನಿ ವಿಶೇಷ ವಿಡಿಯೋ ರಿಲೀಸ್​ ಮಾಡಿದೆ.
 

actress and Anchor Shweta Chengappa birthday celebration video release suc
Author
First Published Feb 9, 2024, 2:25 PM IST

ಇಂದು ಅಂದರೆ ಫೆಬ್ರುವರಿ 9 ಕಿರುತೆರೆ ನಟಿ, ಖ್ಯಾತ ನಿರೂಪಕಿ ಶ್ವೇಗಾ ಚಂಗಪ್ಪ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಕೊಡಗಿನ ಸೋಮವಾರಪೇಟೆಯಲ್ಲಿ 1987 ಫೆಬ್ರವರಿ 9 ರಂದು   ಜನಿಸಿದ ಶ್ವೇತಾ ಅವರ ಹುಟ್ಟುಹಬ್ಬದಂದು  ಜೀ ಕನ್ನಡ ವಾಹಿನಿ ವಿಶೇಷ ವಿಡಿಯೋ ಒಂದನ್ನು ರಿಲೀಸ್​ ಮಾಡಿದೆ. ಇದರಲ್ಲಿ ಶ್ವೇತಾ ಅವರ ಹಲವು ಕಾರ್ಯಕ್ರಮಗಳ ಝಲಕ್​ ತೋರಿಸಲಾಗಿದೆ. ಅಂದಹಾಗೆ ಶ್ವೇತಾ  20 ವರ್ಷಗಳಿಂದ ಇಂಡಸ್ಟ್ರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಎಸ್. ನಾರಾಯಣ ನಿರ್ದೇಶನದ ಸುಮತಿ  ಧಾರಾವಾಹಿಯ ಮೂಲಕ ಕಿರುತೆರೆ ಎಂಟ್ರಿ ಕೊಟ್ಟಿರೋ  ಶ್ವೇತಾ, 2006 ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ ಕಾದಂಬರಿ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದವರು. ಅಲ್ಲಿಂದ ಅನೇಕ ಸೀರಿಯಲ್​ಗಳಲ್ಲಿ ನಟಿಸಿ ಫೇಮಸ್​ ಆಗಿದ್ದಾರೆ. ‘ಸುಮತಿ’, ‘ಕಾದಂಬರಿ’, ‘ಸುಕನ್ಯಾ’, ‘ಅರುಂಧತಿ’, ‘ಸಂಗೀತಾ’ ಮುಂತಾದ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಶ್ವೇತಾ ಚಂಗಪ್ಪ ಅವರು ವೀಕ್ಷಕರನ್ನು ರಂಜಿಸಿದ್ದಾರೆ.  

2023ರ ಜನವರಿ ತಿಂಗಳಿನಲ್ಲಿ ಶ್ವೇತಾ, ತಾವು  ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟು  20 ವರ್ಷಗಳಾಗಿದ್ದ ಬಗ್ಗೆ ತಿಳಿಸಿದ್ದರು.  ಈ 20 ವರ್ಷಗಳ ಜರ್ನಿಯಲ್ಲಿ ಅವರು ಕೇವಲ ನಟಿಯಾಗಿ ಮಾತ್ರವಲ್ಲದೇ, ಖ್ಯಾತ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಧಾರಾವಾಹಿ ಮಾತ್ರವಲ್ಲದೇ ಅನೇಕ ರಿಯಾಲಿಟಿ ಶೋಗಳಲ್ಲೂ ಅವರು ಭಾಗವಹಿಸಿದ್ದಾರೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 2’, ‘ಹಾಕು ಹೆಜ್ಜೆ ಹಾಕು’, ‘ಕುಣಿಯೋಣು ಬಾರ’, ‘ಡಾನ್ಸಿಂಗ್ ಸ್ಟಾರ್​’, ‘ಮಜಾ ಟಾಕೀಸ್​’ ಮುಂತಾದ ಕಾರ್ಯಕ್ರಮಗಳಿಂದ ಅವರು ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.   ಕನ್ನಡ ಬಿಗ್ ಬಾಸ್ 2 ನೇ ಸೀಸನ್ ನಲ್ಲಿ ಸ್ಪರ್ಧಿಯಾಗಿ ಶ್ವೇತಾ ಚಂಗಪ್ಪ ಭಾಗವಹಿಸಿದ್ದರು. ಇವರು ನಾಲ್ಕನೇ ಸ್ಥಾನಗಳಿಸಿದರು. ನಂತರ ಮಜಾ ಟಾಕೀಸ್ ರಾಣಿಯಾಗಿ ಎಲ್ಲರಿಗೂ ಇಷ್ಟವಾಗಿದ್ದರು. ಮೂರು ಬಾರಿ ಜೀ ಕನ್ನಡದ ಬೆಸ್ಟ್ ಆ್ಯಂಕರ್ ಪ್ರಶಸ್ತಿ ಪಡೆದಿದ್ದಾರೆ. 

ಅಮೃತಧಾರೆಗೆ ನಟಿ ಸಪ್ತಮಿ ಗೌಡ ಎಂಟ್ರಿ! ಭೂಮಿಕಾ ತಂಗಿ ಜೊತೆ ಜೈದೇವನ ಮದ್ವೆ- ಇದೇನಿದು?

ಇನ್ನು ಚಿತ್ರರಂಗದಲ್ಲಿಯೂ ಶ್ವೇತಾ ಸಾಕಷ್ಟು ಹೆಸರು ಮಾಡಿದ್ದಾರೆ. ತಂಗಿಗಾಗಿ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ನಟಿ,   ವಿಷ್ಣುವರ್ಧನ ಅವರ ಅಭಿನಯದ ವರ್ಷ ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದಾರೆ.  ಕೃಷ್ಣನ್ ಮ್ಯಾರೇಜ್ ಸ್ಟೋರಿ, ಗನ್ ಮುಂತಾದ ಚಿತ್ರಗಳಲ್ಲಿ ಕಂಠದಾನ ಕಲಾವಿದೆಯಾಗಿಯೂ ವಿಶೇಷ ಮನ್ನಣೆ ಗಿಟ್ಟಿಸಿಕೊಂಡಿದ್ದಾರೆ.  ಇಷ್ಟೇ ಅಲ್ಲದೇ ಶಿವರಾಜ್​ ಕುಮಾರ್​  ಅವರ 125ನೇ ಸಿನಿಮಾ ವೇದಾದಲ್ಲಿಯೂ ನಟಿಸಿರೋ ಶ್ವೇತಾ ಅವರು ಅಲ್ಲಿ ಪಾರಿ ಆಗಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.   ಅರುಂಧತಿ ಧಾರಾವಾಹಿಯ ನಟನೆಗೆ ಶ್ವೇತಾ ಅವರಿ,  ಕರ್ನಾಟಕ ಸರಕಾರದ ಮಧ್ಯಂಸನ್ಮಾನ ಪ್ರಶಸ್ತಿ ಲಭಿಸಿದೆ.
 
ಶ್ವೇತಾ ಅವರು ಈ ಎಲ್ಲಾ ಕಾರ್ಯಕ್ರಮಗಳ ನಡುವೆಯೂ ತಮ್ಮ ಮಗ ಜಿಯಾನ್​ ಜೊತೆ ಕಾಲ ಕಳೆಯುತ್ತಿದ್ದಾರೆ. ನನ್ನ ಜೀವನದಲ್ಲಿ ಮೊದಲ ಪ್ರಾಮುಖ್ಯತೆ ಪಡೆಯುವುದು ನನ್ನ ಮಗ ಜಿಯಾನ್. ನನ್ನ ಜೀವನದಲ್ಲಿ ಯಾವುದೇ ಕೆಲಸ ಮುಂದೆ ಬಂದರೂ ನನ್ನ ಮಗನ ಮುಂದೆ ಯಾವುದೂ ಇಲ್ಲ. ಅವನಿಗಾಗಿ ಯಾವ ರೀತಿ ತ್ಯಾಗ ಬೇಕಿದ್ದರೂ ಮಾಡುತ್ತೀನಿ. ದೇವರ ಆಶೀರ್ವಾದದಿಂದ ನನಗೆ ದೊಡ್ಡ ಸಪೋರ್ಟ್ ಅಂದ್ರೆ ಅಮ್ಮ ಮತ್ತು ಗಂಡ. ಕೆಲಸ ಅಂತ ನಾನು ಬ್ಯುಸಿಯಾಗಿರುವಾಗ ನನ್ನ ಮಗನನ್ನು ಇಬ್ಬರೂ ನೋಡಿಕೊಳ್ಳುತ್ತಾರೆ. ನನ್ನ ವೃತ್ತಿ ಬದುಕಿನಲ್ಲಿರುವ ಹಲವು ಕಮಿಟ್ಮೆಂಟ್ ಬ್ಯುಸಿಯಲ್ಲಿ ನಾನಿರುತ್ತೀನಿ ಅದನ್ನು ಅರ್ಥ ಮಾಡಿಕೊಂಡು ನನಗೆ ಸಪೋರ್ಟ್ ಮಾಡುತ್ತಾರೆ ಎಂದು ಶ್ವೇತಾ ಚಂಗಪ್ಪ ಟೈಮ್ಸ್ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದರು.  

ಆಗ ನನಗಿನ್ನೂ 19 ವರ್ಷ... ಸೌತ್​ ನಿರ್ಮಾಪಕ ಮಂಚಕ್ಕೆ ಕರೆದ್ರು... ಅನುಭವ ಹೇಳಿದ ಬಿಗ್​ಬಾಸ್​ ಅಂಕಿತಾ
 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios