ಬಾಲಿವುಡ್ ಸೇರಿದಂತೆ ಸೌತ್ ಇಂಡಿಯನ್ ಇಂಡಸ್ಟ್ರಿಯಲ್ಲಿ ಅದಾ ಶರ್ಮಾ ಹೆಸರು ಚಿರಪರಿಚಿತ. ಬಹುಬೇಡಿಕೆ ನಟಿಯೂ ಹೌದು.  ಸದ್ಯ ಅದಾ ಶರ್ಮಾ 'ಕಮಾಂಡೋ-3', ಬೈಪಾಸ್ ರೋಡ್, 'ಮನ್ ಟು ಮನ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 

ಈ ನಡುವೆ ಅದಾ ಶರ್ಮಾ ಉದ್ಯಮಿಯೊಬ್ಬರ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಇದೆಲ್ಲಾ  ಸುಳ್ಳು ಎಂದು ಅದಾ ಶರ್ಮಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 

ಬಿಗ್ ಬಾಸ್ ಮನೆಯಲ್ಲಿ ಗಂಡ-ಹೆಂಡತಿ ಮೀರಿಸೋ ರೋಮ್ಯಾನ್ಸ್.. ವಿಡಿಯೋ ವೈರಲ್

ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಮದುವೆಯಾಗಬೇಕೆಂದಿರುವ ಹುಡುಗ ಹೇಗಿರಬೇಕು ಎಂದು ಹೇಳಿದ್ದಾರೆ.  ಹುಡುಗನ ಜಾತಿ, ಧರ್ಮ, ಬಣ್ಣ, ಶೂ ಸೈಜ್, ವೀಸಾ, ಇನ್ಸ್ಟಾಗ್ರಾಮ್ ಫಾಲೋವರ್ಸ್, ಜಾತಕ ಇದ್ಯಾವುದನ್ನೂ ನೋಡುವುದಿಲ್ಲ. ಅವೆಲ್ಲಾ ಬೇಕಾಗಿಯೂ ಇಲ್ಲ. ನಗುನಗುತ್ತಾ 3 ಹೊತ್ತು ಅಡುಗೆ ಮಾಡಿ ಹಾಕಬೇಕು. ಜೊತೆಗೆ ರೆಗ್ಯುಲರ್ ಆಗಿ ಶೇವ್ ಮಾಡಬೇಕು' ಎಂದಿದ್ದಾರೆ. 

ನವೆಂಬರ್ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

ಇಷ್ಟಕ್ಕೆ ಸುಮ್ಮನಾಗಿಲ್ಲ. ಪಟ್ಟಿ ಇನ್ನೂ ಉದ್ದದ್ದಿದೆ. ಅವನು ಭಾರತೀಯ ಶೈಲಿಯ ಉಡುಗೆಗಳನ್ನೇ ತೊಡಬೇಕು. ಮನೆಯ ಆವರಣದಲ್ಲಿ ಆಲ್ಕೋಹಾಲ್ ಹಾಗೂ ಮಾಂಸವನ್ನು ನಿಷೇಧಿಸಲಾಗಿದೆ. ಭಾರತೀಯ ಎಲ್ಲಾ ಭಾಷೆಯ ಚಿತ್ರಗಳನ್ನು ಆತ ಗೌರವಿಸಬೇಕು. ಚಿತ್ರವನ್ನು ನೋಡಿ ಎಂಜಾಯ್ ಮಾಡಬೇಕು' ಎಂದು ಹೇಳಿದ್ದಾರೆ. ಈ ಎಲ್ಲಾ ಕ್ವಾಲಿಟಿಗಳು ನಿಮ್ಮಲ್ಲಿದ್ದರೆ ನೀವೂ ಅಪ್ಲಿಕೇಶನ್ ಹಾಕಬಹುದು! 

ಯಮ್ಮೋ.. ಯಮ್ಮೋ. ಕಿಶನ್-ದೀಪಿಕಾ ಬಿಂದಾಸ್ ಡ್ಯಾನ್ಸ್, ಅಬ್ಬಬ್ಬಾ ಅದೇನ್ ಸ್ಟೆಪ್ಸ್!

ಅದಾ ಶರ್ಮಾ ಮಾರ್ಷಲ್ ಆರ್ಟ್ಸ್, ಜಿಮ್ನಾಸ್ಟಿಕ್ಸ್, ಕಥಕ್, ಸಾಲ್ಸಾ, ಜ್ಯಾಸ್, ಬ್ಯಾಲೆ ಹಾಗೂ ಬೆಲ್ಲಿ ಡ್ಯಾನ್ಸಲ್ಲಿ ನಿಪುಣೆಯಂತೆ.