ವೇಶ್ಯಾವಾಟಿಕೆ ದಂಧೆ; ರೆಡ್‌ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಿರುತೆರೆ ನಟಿ ಆರತಿ
ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಹಿಂದಿ ಕಿರುತೆರೆಯ ಖ್ಯಾತ ನಟಿ ಆರತಿ ಮಿತ್ತಲ್ ಅವರನ್ನು ರೆಡ್‌ಹ್ಯಾಂಡ್ ಆಗಿ ಪೊಲೀಸರು ಹಿಡಿದು ಅರೆಸ್ಟ್ ಮಾಡಿದ್ದಾರೆ.
ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಕಾಸ್ಟಿಂಗ್ ನಿರ್ದೇಶಕಿ ಮತ್ತು ಕಿರುತೆರೆಯ ಖ್ಯಾತ ನಟಿ ಆರತಿ ಮಿತ್ತಲ್ ಅವರನ್ನು ಮುಂಬೈ ಪೊಲೀಸರು ಪೊಲೀಸರು ಬಂಧಿಸಿದ್ದಾರೆ. ವೇಶ್ಯಾವಾಟಿಕೆ ದಂಧೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಆಗ ಆರತಿ ಸೇರಿದಂತೆ 2 ಮಾಡೆಲ್ಸ್ ರೆಡ್ ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಮಾಡೆಲ್‌ಗಳನ್ನು ಬಳಕೆ ಮಾಡಿಕೊಂಡು ಈ ದಂಧೆಯನ್ನು ನಡೆಸುತ್ತಿದ್ದರು ಎಂಬುದನ್ನು ಪೊಲೀಸರು ಹೇಳಿದ್ದಾರೆ. ಆರತಿ ಬಂಧನ ಬಾಲಿವುಡ್ ಬಣ್ಣದ ಲೋಕದಲ್ಲಿ ಸಂಚಲನ ಮೂಡಿಸಿದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ 27 ವರ್ಷದ ನಟಿ ಆರತಿ ಪ್ರಸಿದ್ಧ ಮಾಡೆಲ್‌ಗಳನ್ನು ದೊಡ್ಡ ದೊಡ್ಡ ಹೋಟೆಲ್‌ಗಳಿಗೆ ಸಪ್ಲೆ ಮಾಡುತ್ತಿದ್ದರು ಎಂದಿದ್ದಾರೆ. ಆರತಿ ಅವರನ್ನು ರೆಡ್ ಹ್ಯಾಂಗ್ ಆಗಿ ಹಿಡಿಯುವ ಉದ್ದೇಶದಿಂದ ಸಿನಿಮೀಯ ರೀತಿಯಲ್ಲಿ ಪ್ಲಾನ್ ಮಾಡಿ ಬಂಧಿಸಿದ್ದಾರೆ. ಆರತಿ ಜೊತೆ ಡೀಲ್ ಕುದುರಿಸಿದ ಪೊಲೀಸರು ಇಬ್ಬರೂ ಡಮ್ಮಿ ಗ್ರಾಹಕರನ್ನು ಹೋಟೆಲ್‌ಗೆ ಕಳುಹಿಸಿದ್ದಾರೆ. ಇದನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದೆ. ತಕ್ಷಣ ಆರತಿಯನ್ನು ಬಂಧಿಸಿದ್ದಾರೆ. ಜೊತೆಗೆ ಎರಡು ಮಾಡೆಲ್‌ಗಳು ಸಹ ಸಿಕ್ಕಿ ಬಿದ್ದಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಮನೋಜ್ ಸುತಾರ್ ಆರತಿ ಜೊತೆ ಡೀಲ್ ಕುದುರಿಸಿದ್ದರು. ಆರತಿ ಮನೋಜ್ ಅವರಿಗೆ 60 ಸಾವಿರ ಬೇಡಿಕೆ ಇಟ್ಟಿದ್ದರು.
ವೇಶ್ಯಾವಾಟಿಕೆ ದಂಧೆ : ಖ್ಯಾತ ಹೊಟೇಲ್‌ನ ಮ್ಯಾನೇಜರ್ ಸೇರಿ 18 ಜನರ ಬಂಧನ
ಮಿತ್ತಲ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ತನಿಖೆಯ ವೇಳೆ, ತಲಾ 15,000 ರೂಪಾಯಿ ನೀಡುವುದಾಗಿ ಮಿತ್ತಲ್ ಭರವಸೆ ನೀಡಿದ್ದರು ಎಂದು ಮಾಡೆಲ್‌ಗಳು ಪೊಲೀಸರಿಗೆ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, 'ಚಿತ್ರರಂಗದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮತ್ತು ಹಣ ಗಳಿಸಲು ಮಾಡೆಲ್‌ಗಳನ್ನು ಸಪ್ಲೇ ಮಾಡುತ್ತಿದ್ದ ಆರೋಪದ ಮೇರಿಗೆ ಬಂಧಿಸಲಾಗಿದೆ. ಮಿತ್ತಲ್ ವಿರುದ್ಧ ಐಪಿಸಿಯ ಸೆಕ್ಷನ್ 370 ಮತ್ತು ಹುಡುಗಿಯರ ಕಳ್ಳಸಾಗಣೆಗಾಗಿ ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಯುನಿಟ್ 11 ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ' ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆ: ಬಾಂಬೆ ಮಾದರಿಯ ರೆಡ್ ಲೈಟ್ ಏರಿಯಾ ಸೃಷ್ಟಿ?
ಅಪ್ನಾಪನ್ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿ ಆರತಿ ನಟಿಸಿದ್ದಾರೆ. ನಟನೆ ಜೊತೆಗೆ ಕಾಸ್ಟಿಂಗ್ ಡೈರೆಕ್ಟರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಆರ್ ಮಾಧವನ್ ಜೊತೆ ಬಣ್ಣ ಹಚ್ಚುತ್ತಿರುವುದಾಗಿ ಅವರು ಹೇಳಿಕೊಂಡಿದ್ದರು. ಆದರೀಗ ವೇಶ್ಯವಾಟಿಕೆ ದಂಧೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದು ಬಾಲಿವುಡ್‌ಗೆ ಶಾಕ್ ನೀಡಿದೆ.