ತಮಿಳು ಸ್ಟಾರ್ ನಟ ವಿಶಾಲ್ ಟ್ವೀಟ್ ಮಾಡಿ ಕೆಜಿಎಪ್-2 ಬಗ್ಗೆ ಹಾಡಿಹೊಗಳಿದ್ದಾರೆ. ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಶಾಲ್, ನನ್ನ ಆತ್ಮೀಯ ಗೆಳೆಯ ಯಶ್ ಅವರಿಗೆ ಅಭಿನಂದನೆಗಳು. ಇಂಥ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ ಕೆಜಿಎಫ್-2 ಇಡೀ ತಂಡ ಮತ್ತ ಪಾತ್ರವರ್ಗ ಮತ್ತು ವಿಶೇಷವಾಗಿ ಪ್ರಶಾಂತ್ ನೀಲ್ ಅವರಿಗೆ ಅಭಿನಂದನೆ ಎಂದು ಹೇಳಿದ್ದಾರೆ.

ರಾಕಿಂಗ್ ಸ್ಟಾರ್ ನಟನೆಯ KGF 2 ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪ್ರೇಕ್ಷಕರು ಮಾತ್ರ ವಲ್ಲದೇ ಅನೇಕ ಸಿನಿ ಗಣ್ಯರು ಸಹ ಸಿನಿಮಾ ನೋಡಿ ಹಾಡಿಹೊಗಳಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಸಹ ಕೆಜಿಎಫ್-2 ಸಿನಿಮಾವನ್ನು ಕನ್ನಡದಲ್ಲೇ ನೋಡಿ ಮೆಚ್ಚಿಕೊಂಡಿದ್ದಾರೆ. ಚಿತ್ರತಂಡಕ್ಕೆ ಅಭನಂದನೆ ಸಲ್ಲಿಸಿದ್ದಾರೆ. ಎಲ್ಲಾ ಕಡೆಯಿಂದ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಜಿಎಫ್ 2 ಮೂಲಕ ಕನ್ನಡ ಸಿನಿಮಾರಂಗವನ್ನು ವಿಶ್ವ ಮಟ್ಟದಲ್ಲಿ ಕೊಂಡೊಯ್ದ ಯಶ್, ಪ್ರಶಾಂತ್ ನೀಲ್ ಮತ್ತು ವಿಜಯ್ ಕಿರಗಂದೂರ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಬರುತ್ತಿದೆ. ಇದೀಗ ಕೆಜಿಎಫ್-2 ಬಗ್ಗೆ ತಮಿಳು ಸ್ಟಾರ್ ನಟ ವಿಶಾಲ್ ಹಾಡಿ ಹೊಗಳಿದ್ದಾರೆ. ಅಲ್ಲದೆ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹೆಮ್ಮೆಯಾಗುತ್ತದೆ ಎಂದು ಹೇಳಿದ್ದಾರೆ.

ತಮಿಳು ಸ್ಟಾರ್ ನಟ ವಿಶಾಲ್ ಟ್ವೀಟ್ ಮಾಡಿ ಹಾಡಿಹೊಗಳಿದ್ದಾರೆ. ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಶಾಲ್, ನನ್ನ ಆತ್ಮೀಯ ಗೆಳೆಯ ಯಶ್ ಅವರಿಗೆ ಅಭಿನಂದನೆಗಳು. ಇಂಥ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ ಕೆಜಿಎಫ್-2 ಇಡೀ ತಂಡ ಮತ್ತ ಪಾತ್ರವರ್ಗ ಮತ್ತು ವಿಶೇಷವಾಗಿ ಪ್ರಶಾಂತ್ ನೀಲ್ ಅವರಿಗೆ. ನನ್ನ ಸ್ನೇಹಿತ ಯಶ್ ಅವರು ಕನ್ನಡ ಸಿನಿಮಾವನ್ನು ವಿಶ್ವವ್ಯಾಪಿಯಾಗಿ ಕೊಂಡೊಯ್ದಿದ್ದಾರೆ ಎಂದು ನನಗೆ ತುಂಬಾ ಹೆಮ್ಮೆ ಇದೆ. ಕೀಪ್ ರಾಕಿಂಗ್ ರಾಕಿ ಭಾಯ್ ಎಂದು ಹೇಳಿದ್ದಾರೆ.

ವಿಶಾಲ್ ಟ್ವೀಟ್ ಗೆ ರಾಕಿಂಗ್ ಸ್ಟಾರ್ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಇಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್, 'ಧನ್ಯವಾದಗಳು ಸಹೋದರ. ನಿಮ್ಮನ್ನು ಶೀಘ್ರದಲ್ಲೇ ಭೇಟಿಯಾಗುತ್ತೀನಿ' ಎಂದು ಹೇಳಿದ್ದಾರೆ. ಇನ್ನು ಪ್ರಶಾಂತ್ ನೀಲ್ ಸಹ ಧನ್ಯವಾದ ತಿಳಿಸಿದ್ದಾರೆ. 

KGF 2; 3ನೇ ದಿನವೂ ಹಿಂದಿಯಲ್ಲಿ ದಾಖಲೆ ಬರೆದ ರಾಕಿ ಭಾಯ್

Scroll to load tweet…

ದಾಖಲೆಯ ಕಲೆಕ್ಷನ್

ಕೆಜಿಎಫ್-2 ಭರ್ಜರಿ ಕಲೆಕ್ಷನ್ ಮಾಡಿದೆ. ಸಿನಿಮಾ ಬಿಡುಗಡೆಯಾಗಿ 2ದಿನಕ್ಕೆ ವಿಶ್ವದಾದ್ಯಂತ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇನ್ನೂ ಹಿಂದಿಯಲ್ಲಿ ಎಲ್ಲಾ ಸಿನಿಮಾಗಳ ಕಲೆಕ್ಷನ್ ದೂಳಿಪಟ ಮಾಡಿರುವ ಕೆಜಿಎಫ್-2 ನಂಬರ್ ಒನ್ ಸ್ಥಾನದಲ್ಲಿದೆ. ಕೆಜಿಎಫ್2 3ದಿನಗಳಲ್ಲಿ ಹಿಂದಿಯಲ್ಲಿ 143.64 ಕೋಟಿ ರೂ. ಬಾಚಿಕೊಂಡಿದೆ. ಇನ್ನೂ ಮೂರನೇ ದಿನದ ಒಟ್ಟು ಕಲೆಕ್ಷನ್ ವರದಿ ಬಹಿರಂಗವಾಗಬೇಕಿದೆ.

ಕ್ಯಾನ್ಸರ್ ಎಂದು ಗೊತ್ತಾದ ಬಳಿಕ 2-3 ಗಂಟೆ ಅತ್ತಿದ್ದ KGF 2 ಅಧೀರ; ಭಾವುಕ ಕ್ಷಣ ಬಿಚ್ಚಿಟ್ಟ ದತ್

ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಮತ್ತು ಸಂಜಯ್ ದತ್ ನಟನೆ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಆಕ್ಷನ್ ದೃಶ್ಯ, ಸಂಗೀತ ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಹೃದಯ ಗೆದ್ದಿದೆ. 3ನೇ ದಿನವು ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.