Asianet Suvarna News Asianet Suvarna News

ರಾಜಕೀಯಕ್ಕೆ ನಟ ವಿಶಾಲ್?, ಕುತೂಹಲ ಮೂಡಿಸಿದ ಜಗನ್ ಮೋಹನ್ ರೆಡ್ಡಿ ಭೇಟಿ

ತಮಿಳು ಸ್ಟಾರ್ ನಟ ವಿಶಾಲ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಬಗ್ಗೆ ವಿಶಾಲ್ ಪ್ರತಿಕ್ರಿಯೆ ನೀಡಿದ್ದಾರೆ. 

Actor Vishal reacts after meets Andhra pradesh CM Jagan Mohan Reddy sgk
Author
First Published Dec 20, 2022, 10:49 AM IST

ತಮಿಳಿನ ಖ್ಯಾತ ನಟ ವಿಶಾಲ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಅಂದಹಾಗೆ ವಿಶಾಲ್ ರಾಜಕೀಯ ಎಂಟ್ರಿ ಸುದ್ದಿ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಅನೇಕ ಬಾರಿ ವಿಶಾಲ್ ರಾಜಕೀಯ ಎಂಟ್ರಿ ಬಗ್ಗೆ ಕೇಳಿ ಬರುತ್ತಲೇ ಇದೆ. ಆದರೀಗ ವಿಶಾಲ್ ರಾಜಕೀಯ ಸುದ್ದಿ ವೈರಲ್ ಆಗಲು ಕಾರಣ, ಆಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಭೇಟಿ. ಹೌದು ತಮಿಳು ಸ್ಟಾರ್ ವಿಶಾಲ್ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿಯನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಇಬ್ಬರ ದಿಢೀರ್ ಭೇಟಿ ಆಂಧ್ರ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. 

ಜಗನ್ ಭೇಟಿ ಬೆನ್ನಲ್ಲೇ ವಿಶಾಲ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ. ಕುಪ್ಪಂ ವಿಧಾನಸಭಾ ಕ್ಷೇತ್ರದಿಂದ ವಿಶಾಲ್ ಸ್ಪರ್ಧೆ ಮಾಡ್ತಾರೆ, ನಾರಾ ಚಂದ್ರಬಾಬು ವಿರುದ್ಧ ಸ್ಪರ್ಧಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಈ ಬಗ್ಗೆ ನಟ ವಿಶಾಲ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯ ಎಂಟ್ರಿ ಸುದ್ದಿಯನ್ನು ತಳ್ಳಿ ಹಾಕಿರುವ ವಿಶಾಲ್ ಸಿನಿಮಾರಂಗದಲ್ಲೇ ಮುಂದುವರೆಯುವುದಾಗಿ ಹೇಳಿದ್ದಾರೆ. 

Kantara Effect: ಭೂತಕೋಲ ಕಣ್ಣಾರೆ ನೋಡಲು ಧರ್ಮಸ್ಥಳಕ್ಕೆ ಬರ್ತಾರಂತೆ ನಟ ವಿಶಾಲ್‌!

ಜಗನ್ ಮೋಹನ್ ರೆಡ್ಡಿ ಭೇಟಿಯ ಬಗ್ಗೆ ಸ್ಪಷ್ಟನೆ ನೀಡಿರುವ ನಟ ವಿಶಾಲ್, 'ಜಗನ್ ಎಂದರೆ ತುಂಬಾ ಇಷ್ಟ ಹಾಗಾಗಿ ಭೇಟಿ ಮಾಡಿರುವುದಾಗಿ ಹೇಳಿದರು. ಜಗನ್ ಸಿಎಂ ಆಗ್ತಾರೆ ಅಂತ ಈ ಮೊದಲೇ ಹೇಳಿದ್ದೆ' ಎಂದು ಹೇಳಿದರು. 'ಜಗನ್ ಭೇಟಿಯಾಗಿದ್ದು ಯಾವುದೇ ರಾಜಕೀಯ ಉದ್ದೇಶ ಇಲ್ಲ, ನನಗೆ ಯಾವುದೇ ಸ್ಥಾನದ ನಿರೀಕ್ಷೆ ಇಲ್ಲ' ಎಂದು ವಿಶಾಲ್ ಸ್ಪಷ್ಟಪಡಿಸಿದರು. ಕುಪ್ಪಂನಲ್ಲಿ ಚಂದ್ರಬಾಬು ವಿರುದ್ಧ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರಲ್ಲ ಎಂದು ಹೇಳಿದರು. 

ಕನ್ನಡಕ್ಕೆ ಬರ್ತಾರಾ ವಿಶಾಲ್?: ಶಕ್ತಿಧಾಮಕ್ಕೆ ಭೇಟಿ ನೀಡಿ ಹೇಳಿದ್ದೇನು?

ಅಂದಹಾಗೆ ವಿಶಾಲ್ ಸದ್ಯ ಲಾಠಿ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಪ್ರಚಾರಕ್ಕಾಗಿ ಇತ್ತೀಚಿಗಷ್ಟೆ ತಿರುಪತಿಗೆ ತೆರಳಿದ್ದರು. ಆಗ ವಿಶಾಲ್ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಭೇಟಿಯಾಗಿ ಕೆಲ ಸಮಯ ಮಾತುಕತೆ ನಡೆಸಿದ್ದರು. ಈ ಭೇಟಿ ಆಂಧ್ರ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಇದೀಗ ಸ್ವತಃ ವಿಶಾಲ್ ಅವರೇ ಸ್ಪಷ್ಟನೆ ನೀಡುವ ಮೂಲಕ ರಾಜಕೀಯ ಎಂಟ್ರಿ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. 

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾರೆ ವಿಶಾಲ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೋಲು, ಗೆಲುವಿನ ಬಗ್ಗೆ ತಲೆಕೆಡಿಸಿಕೊಳ್ಳದ ವಿಶಾಲ್ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ವರ್ಷ ವಿಶಾಲ್ ನಟನೆಯ ವೀರಮೇ ವಾಗೈ ಸೂಡಮ್​ ಸಿನಿಮಾ ರಿಲೀಸ್ ಆಗಿತ್ತು. ಆದರೆ ನಿರೀಕ್ಷೆಯ ಗೆಲುವು ದಾಖಲಿಸಲು ಆ ಸಿನಿಮಾ ವಿಫಲವಾಗಿದೆ. ಸದ್ಯ ವಿಶಾಲ್ ಲಾಠಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಅಂದಹಾಗೆ ಈ ಸಿನಿಮಾ ಪ್ರಚಾರಕ್ಕಾಗಿ ಇತ್ತೀಚಿಗಷ್ಟೆ ಕರ್ನಾಟಕಕ್ಕೂ ಬಂದಿದ್ದರು. ಕನ್ನಡದಲ್ಲೂ ಅನೇಕ ಅಭಿಮಾನಿಗಳನ್ನು ಹೊಂದಿರುವ ನಟ ವಿಶಾಲ್ ಆಗಾಗ ಕರ್ನಾಟಕಕ್ಕೆ ಬರ್ತಾರೆ. ಸದ್ಯ ಧರ್ಮಸ್ಥಳಕ್ಕೆ ಭೇಟಿ ನೀಡುವುದಾಗಿಯೂ ಹೇಳಿದ್ದಾರೆ ವಿಶಾಲ್.    

 

Follow Us:
Download App:
  • android
  • ios