Vijay Thalapathy ಅಂಗವಿಕಲ ಅಭಿಮಾನಿಯನ್ನು ಎತ್ತಿಕೊಂಡ ವಿಜಯ್; ಧರಿಸಿದ್ದ ಚಪ್ಪಲಿ ರೇಟ್ ಕೇಳಿ ಶಾಕ್
ವೈರಲ್ ಆಯ್ತು ವಿಜಯ್ ದಳಪತಿ ಫೋಟೋ. ಅಭಿಮಾನಿಯನ್ನು ಎತ್ತಿಕೊಂಡು ಸರಳತೆ ಮೆರೆದ ನಟನನ್ನು ಮೆಚ್ಚಿಕೊಂಡ ನೆಟ್ಟಿಗರು..ಆದರೆ ಚಪ್ಪಲಿ ರೇಟ್?
ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ದಳಪತಿ ಸೌತ್ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಪಾದನೆ ಮಾಡಿರುವ ನಟರಲ್ಲಿ ಒಬ್ಬರು. ಎಷ್ಟು ಸಿಂಪಲ್ ವ್ಯಕ್ತಿ ಅಂದ್ರೆ ಅಭಿಮಾನಿಗಳನ್ನು ಎತ್ತಿಕೊಂಡು ಮುದ್ದಾಡುವಷ್ಟು ಸಿಂಪಲ್. ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ಅಭಿಮಾನಿಯೊಬ್ಬರ ಜೊತೆಗಿರುವ ಫೋಟೋ ವೈರಲ್ ಅಗುತ್ತಿದೆ. ವಿಜಯ್ ಸರಳತೆಯನ್ನು ಕೆಲವರು ಮೆಚ್ಚಿಕೊಂಡರು ಇನ್ನೂ ಕೆಲವರು ವಿಜಯ್ ಧರಿಸಿರುವ ಉಡುಪು ಮತ್ತು ಚಪ್ಪಲಿ ಬೆಲೆ ಹುಡುಕಿದ್ದಾರೆ. ವಿಜಯ್ ಧರಿಸಿರುವ ಚಪ್ಪಲಿ ಬೆಲೆ ಕೇಳಿ ಶಾಕ್ ಆಗಬೇಡಿ...
ಹೌದು! ವಿಜಯ್‌ನ ಭೇಟಿ ಮಾಡಲು ಅಂಗವಿಕಲ ಅಭಿಮಾನಿಯೊಬ್ಬರು ಮನೆ ಬಳಿ ಬಂದಿದ್ದಾರೆ. ಪ್ರೀತಿಯಿಂದ ಮಾತನಾಡಿಸಿ ವಿಜಯ್ ಫೋಟೋ ಕೂಡ ಕ್ಲಿಕ್ ಮಾಡಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ವಿಜಯ್ ಕುಳಿತುಕೊಂಡಿದ್ದಾರೆ ಮತ್ತೊಂದು ಫೋಟೋದಲ್ಲಿ ಅಂಗವಿಕಲ ಅಭಿಮಾನಿಯನ್ನು ಎತ್ತಿಕೊಂಡಿದ್ದಾರೆ. ಅಭಿಮಾನಿ ಮುಖದಲ್ಲಿ ನಗು ನೋಡಿದರೆ ಆ ಕ್ಷಣ ಹೇಗಿತ್ತು ಎಂದು ಎಲ್ಲರಿಗೂ ಅರ್ಥವಾಗುತ್ತದೆ. ಆದರೆ ನೆಟ್ಟಿಗರು ಗಮನಿಸಿರುವುದು ಬೇರೆಯೇ. ವೈಟ್ ಶರ್ಟ್ ಬ್ಲ್ಯಾಕ್ ಪ್ಯಾಂಟಲ್ಲಿ ವಿಜಯ್ ಕಾಣಿಸಿಕೊಂಡಿದ್ದಾರೆ. ಈ ಉಡುಪಿಗೆ ಬ್ರೌನ್ - ಬ್ಲಾಕ್ ಕಾಂಬಿನೇಷನ್ ಚಪ್ಪಲಿ ಧರಿಸಿದ್ದಾರೆ. ಈ ಚಪ್ಪಲಿ ಬೆಲೆಯನ್ನು ನೆಟ್ಟಿಗರು ಹುಡುಕಿದ್ದಾರೆ.
ಸಾಮಾನ್ಯವಾಗಿ ಮನೆಯಲ್ಲಿ ಧರಿಸುವ ಚಪ್ಪಲಿಗೆ 500 ಅಥವಾ 1000 ರೂಪಾಯಿ ನೀಡಬಹುದು. ಸೆಲೆಬ್ರಿಟಿಗಳು ಅಂದ್ಮೇಲೆ ಒಂದು ಅಥವಾ ಎರಡು ಸಾವಿರ ಕೊಡಬಹುದು ಆದರೆ ವಿಜಯ್ ದಳಪತಿ ಇದಕ್ಕೆ 6 ಸಾವಿರ ಕೊಟ್ಟಿದ್ದಾರಂತೆ. ಈ ಚಪ್ಪಲಿ ಬಿರ್ಕೆನ್ ಸ್ಟಾಕ್ ಹೆಸರಿನ ಬ್ರ್ಯಾಂಡ್‌ಗೆ ಸೇರಿರುತ್ತದೆ. ಭಾರತದ ಎಲ್ಲಾ ಉಡುಪುಗಳಿಗೂ ಮ್ಯಾಚ್ ಆಗುವಂತೆ ಗುಣಮಟ್ಟದ ಚಪ್ಪಲಿಗಳನ್ನು ಈ ಬ್ರ್ಯಾಂಡ್ ತಯಾರಿಸುತ್ತದೆ. ವಿಜಯ್ ಧರಿಸಿರುವುದು 'ಮಯಾರಿ ಬಿರ್ಕೊ' ಮಾಡೆಲ್ ಚಪ್ಪಲಿ. ಚಪ್ಪಲಿ ಮಾತ್ರ ತಿಳಿದುಕೊಂಡರೆ ಮನಸ್ಸು ಸುಮ್ಮನಿರುತ್ತಾ? ಇಲ್ಲ. ವಿಜಯ್ ಧರಿಸಿರುವ ಶರ್ಟ್ ಬೆಲೆ 10 ಸಾವಿರ ಎನ್ನಲಾಗಿದೆ ಹಾಗೂ ಪ್ಯಾಂಟ್‌ನ ಬೆಲೆ 15 ಸಾವಿರ ಎನ್ನಲಾಗಿದೆ. ಅಸಲಿಗೆ ಇದು ತುಸು ಕಡಿಮೆ ಬೆಲೆ ಎನ್ನಬಹುದು ಏಕೆಂದರೆ ಬಾಲಿವುಡ್ ಸೆಲೆಬ್ರಿಟಿಗಳು ಮನೆಯಲ್ಲಿ ಧರಿಸುವ ಬಟ್ಟೆಗಳಿಗೆ 1 ಲಕ್ಷ ಖರ್ಚು ಮಾಡುತ್ತಾರೆ.
ವಿಜಯ್ ಸಿನಿಮಾ:
ವಿಜಯ್ ದಳಪತಿ ಅಭಿನಯಿಸಿರುವ ವಾರಿಸು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಂಕ್ರಾಂತಿ ಹಬ್ಬದಂದು ರಿಲೀಸ್ ಮಾಡುವ ಪ್ಲ್ಯಾನ್‌ನಲ್ಲಿದೆ ಚಿತ್ರತಂಡ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸಿರುವ ಈ ಸಿನಿಮಾ ತೆಲುಗು ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಈ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಕನಕರಾಜ್ ಆಕ್ಷನ್ ಕಟ್ ಹೇಳುತ್ತಿರುವ ಹೊಸ ಚಿತ್ರಕ್ಕೆ ಸಹಿ ಹಾಕಲಿದ್ದಾರೆ. ಇಂಗ್ಲಿಷ್ ಸಿನಿಮಾದಿಂದ ಈ ಕಥೆಗೆ ಸ್ಪೂರ್ತಿ ಪಡೆದಿದ್ದಾರೆ ಎನ್ನಲಾಗಿದೆ.
Puneeth Rajkumar ಸಮಾಧಿಗೆ ತಮಿಳು ನಟ ವಿಜಯ್ ದಳಪತಿ ಭೇಟಿ, ವಿಡಿಯೋ ವೈರಲ್!
ಅಭಿಮಾನಿ ಆತ್ಮಹತ್ಯೆ:
ಸೌತ್ ಸೂಪರ್ ಸ್ಟಾರ್ ದಳಪತಿ ವಿಜಯ್ ಅಭಿಮಾನಿ ಬಾಲ ಎಂಬಾತ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ RIPಬಾಲಾ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ವಿಜಯ್ ಫ್ಯಾನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಅಭಿಮಾನಿಗಳು ಶೋಕದಲ್ಲಿದ್ದಾರೆ. ಅಭಿಮಾನಿ ಆತ್ಮಹತ್ಯೆ ನಂತರ ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ RIPಬಾಲಾ ಹ್ಯಾಶ್‌ಟಾಗ್ ಟ್ರೆಂಡ್ ಆಗಿದೆ. ತಮಿಳು ಸಿನಿಮಾದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟ ವಿಜಯ್ ಕಳೆದ ವರ್ಷದ ಬಿಗಿಲ್ ಸಿನಿಮಾ ಕಳೆದ ವರ್ಷದ ಹೈಯೆಸ್ಟ್ ಗ್ರಾಸಿಂಗ್ ಸಿನಿಮಾ ಆಗಿತ್ತು.