ಕೈಯಲ್ಲಿ ಡ್ರಿಂಕ್ಸ್‌, ಕಾಲಿಗೆ ಶಾರ್ಟ್ಸ್ ಹಾಕೊಂಡು ಕುಣಿದ ವಿಜಯ್‌ ದೇವರಕೊಂಡ ಅವರಿಗೆ ನೀವು ರಶ್ಮಿಕಾ ಮಂದಣ್ಣ ಅವರನ್ನು ಅಡಗಿಸಿಟ್ಟಿದ್ಯಾಕೆ ಎಂದು ಫ್ಯಾನ್ಸ್ ಕೆಂಡಕಾರಿದ್ದಾರೆ.

ಬೆಂಗಳೂರು (ಡಿ.31): ಹೊಸ ವರ್ಷ 2024 ಅನ್ನು ಸ್ವಾಗತ ಮಾಡಿಕೊಳ್ಳಲು ಬೀಚ್‌ಗೆ ತೆರಳಿರುವ ವಿಜಯ್ ದೇವರಕೊಂಡ ಅವರು ಚೆಡ್ಡಿಯ ಮೇಲೆ ಕಾಣಿಸಿಕೊಂಡಿದ್ದಾರೆ. ಆದರೆ, ಈ ವೀಡಿಯೋದಲ್ಲಿ ದೇವರಕೊಂಡ ತನ್ನ ಸ್ನೇಹಿತನೊಂದಿಗೆ ಇರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಹಂಚಿಕೊಂಡಿದ್ದು, ಅದರಲ್ಲಿ ರಶ್ಮಿಕಾಳನ್ನು ಅಡಗಿಸಿ ವೀಡಿಯೋ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ವಿಡಿಯೋದಲ್ಲಿ ಒಂದು ಕೈ ಕಾಣಿಸುತ್ತಿದ್ದು, ಅದು ರಶ್ಮಿಕಾ ಮಂದಣ್ಣ ಅಲ್ಲವೇ ಬ್ರೋ ಅವರನ್ನು ಯಾಕೆ ವಿಡಿಯೋದಲ್ಲಿ ಮರೆ ಮಾಚಿದ್ದೀರಿ ಬ್ರೋ ಎಂದು ಫ್ಯಾನ್ಸ್‌ ಕೇಳಿದ್ದಾರೆ.

ಹೌದು, ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಪ್ರೀತಿಯಲ್ಲಿದ್ದಾರೆ ಎಂದು ಎಲ್ಲರಿಗೂ ಗೊತ್ತಿರುವ ಮುಚ್ಚಿಟ್ಟ ಸತ್ಯವಾಗಿದೆ. ಇವರಿಬ್ಬರು ವಿವಿಧೆಡೆ ಒಟ್ಟಿಗೆ ಕಾಣಿಸಿಕೊಂಡರೂ ತಾವಿಬ್ಬರೂ ಉತ್ತಮ ಸ್ನೇಹಿತರು ಎಂದಷ್ಟೇ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಈವರೆಗೆ ಯಾರೊಬ್ಬರೂ ತಮ್ಮದು ಪ್ರೀತಿ ಎಂಬುದನ್ನು ಹೇಳಿಕೊಂಡಿಲ್ಲ. ಆದ್ದರಿಂದ ದೇಶದ ಬಹುತೇಕ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಅಭಿಮಾನಿಗಳು ಇವರ ಪ್ರೀತಿ ಕುರತ ಹೇಳಿಕೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

ರಶ್ಮಿಕಾ-ವಿಜಯ್ ದೇವರಕೊಂಡ ಮದ್ವೆಯಾದ್ರೆ ಡಿವೋರ್ಸ್ ಗ್ಯಾರಂಟಿ; ಶಾಕಿಂಗ್​ ಹೇಳಿಕೆ ಕೊಟ್ಟ ಸೆಲೆಬ್ರಿಟಿ ಜ್ಯೋತಿಷಿ!

ಹೊಸ ವರ್ಷದ ಸಂಭ್ರಮದಲ್ಲಿ ಎಲ್ಲರೂ ತೇಲಾಡುತ್ತಿದ್ದಾರೆ. ಅದರಲ್ಲಿಯೂ ಸೆಲೆಬ್ರಿಟಿಗಳಂತೂ ಮೂರ್ನಾಲ್ಕು ತಿಂಗಳ ಮೊದಲೇ ತಾವು ಎಲ್ಲಿ ಹೊಸ ವರ್ಷವನ್ನು ವೆಲ್‌ಕಮ್‌ ಮಾಡಬೇಕು ಎಂಬುದನ್ನು ಪೂರ್ವಯೋಜನೆ ಸಿದ್ಧಪಡಿಸಿ ಅಲ್ಲಿ ಅಡ್ವಾನ್ಸ್ ಬುಕಿಂಗ್ ಮಾಡಿರುತ್ತಾರೆ. ಅದರಂತೆ ಅಲ್ಲಿಗೆ ಹೋಗಿರುವ ಸೆಲೆಬ್ರಿಟಿಗಳು ತಮ್ಮ ಪಾರ್ಟ್ನರ್‌ಗಳೊಂದಿಗೆ ಹೊಸ ವರ್ಷ 2024 ಅನ್ನು ಸ್ವಾಗತ ಮಾಡುತ್ತಾರೆ. ಇನ್ನು ನ್ಯಾಷನಲ್‌ ಕ್ರಶ್‌ ಎಂದೇ ಖ್ಯಾತಿಯಾಗಿರುವ ಕನ್ನಡದ ಕುವರಿ ರಶ್ಮಿಕಾ ಮಂದಣ್ಣ ಅವರು ಎಲ್ಲಿ ಹೊಸ ವರ್ಷದ ಪಾರ್ಟಿ ಮಾಡುತ್ತಿದ್ದಾರೆಂಬುದೇ ಹಲವರಿಗೆ ಕುತೂಹಲ ಕೆರಳಿಸಿದೆ. ರಶ್ಮಿಕಾ ಮಂದಣ್ಣ ಅವರ ಹೊಸ ವರ್ಷದ ಸಂಭ್ರಮಾಚರಣೆ ಮೇಲೆ ಫ್ಯಾನ್ಸ್‌ ಕಣ್ಣಿಡಲು ಕಾರಣವೂ ಇದೆ. 

ಇನ್ನು ವಿಜಯ್ ದೇವರಕೊಂಡ ಅವರು ಹೊಸ ವರ್ಷ 2024 ಆಚರಣೆಗೆ ಬೀಚ್‌ಗೆ ಹೋಗಿದ್ದಾರೆ. ಅಲ್ಲಿ ಶರ್ಟ್‌ನ ಎದೆಯ ಮೇಲಿನ ಮೂರು ಬಟನ್‌ಗಳನ್ನು ಬಿಚ್ಚಿಕೊಂಡು, ಚೆಡ್ಡಿಯ ಮೇಲೆ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ತಮ್ಮ ಸ್ನೇಹಿತರೊಬ್ಬರು ಇದೇನಿದು ಚೆಡ್ಡಿಯ ಮೇಲೆ ಕಾಣಿಸಿಕೊಂಡಿರುವುದು ಏಕೆ ಎಂದು ಕೇಳಿದ್ದಾರೆ. ಇದಕ್ಕೆ ನಗಾಡುತ್ತಾ ಡ್ರಿಂಕ್ಸ್‌ ಮಾಡುತ್ತಿರುವ ವಿಜಯ್‌ ದೇವರಕೊಂಡ ಅವರು ಸುಮ್ಮನಿರುವಂತೆ ಸೂಚನೆ ನೀಡಿದ್ದಾರೆ. ಆದರೆ, ಈ ವಿಡಿಯೋದಲ್ಲಿ ಮಹಿಳೆಯೊಬ್ಬರ ಕೈ ಹಾಗೂ ತೋಳು ಕಂಡುಬಂದಿದ್ದು, ಇದು ರಶ್ಮಿಕಾ ಮಂದಣ್ಣ ಅಲ್ಲವೇ ಎಂದು ಕಮೆಂಟ್ಸ್‌ ಮಾಡಿದ್ದಾರೆ. ಇನ್ನು ಕೆಲವರು ಹೌದು ಇರು ರಶ್ಮಿಕಾ ಮಂದಣ್ಣ ಎಂದು ಹೇಳಿದ್ದಾರೆ. ಆದ್ರೂ ಅಸಲಿ ಸತ್ಯವನ್ನು ಅವರಷ್ಟೇ ಹೇಳಬೇಕು.

View post on Instagram

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ್​ ದೇವರಕೊಂಡ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಸೂಪರ್‌ ಹಿಟ್ ಸಿನಿಮಾ 'ಅನಿಮಲ್‌'ನ ಹೈದ್ರಾಬಾದ್‌ ಪ್ರಮೋಶನ್ ಕಾರ್ಯಕ್ರಮದಲ್ಲಿಯೂ ರಶ್ಮಿಕಾ ಲೈವ್ ಆಗಿ ವಿಜಯ್‌ ಆಗಿ ಕಾಲ್ ಮಾಡಿ ಬ್ಲಶ್ ಆಗಿ ಈ ಹಿಂಟ್ ಕೊಟ್ಟಿದ್ದರು. ಇಬ್ಬರು ಲಿವ್​ ಇನ್​ ರಿಲೇಷನ್​ಶಿಪ್​ನಲ್ಲಿದ್ದಾರೆ ಎಂಬ ಮಾತು ಸಹ ಇದೆ. ಆದರೆ, ಈ ಇಬ್ಬರು ನಾವಿಬ್ಬರು ಬರಿ ಫ್ರೆಂಡ್ಸ್​ ಅಷ್ಟೇ ಎಂದು ಹೇಳುವ ಮೂಲಕ ತಮ್ಮ ಬಗೆಗಿನ ಸುದ್ದಿಗಳನ್ನು ಅಲ್ಲಗಳೆಯುತ್ತಿರುತ್ತಾರೆ. ಗೀತ ಗೋವಿಂದಂ, ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ರಶ್ಮಿಕಾ-ವಿಜಯ್‌ ಜೊತೆಯಾಗಿ ನಟಿಸಿದ್ದಾರೆ. ಅದರಲ್ಲೂ ಗೀತಗೋವಿಂದಂ ಚಿತ್ರದಲ್ಲಿ ಇಬ್ಬರ ಲಿಪ್‌ಲಾಕ್‌ ಸೀನ್ ಹೆಚ್ಚು ವೈರಲ್ ಆಗಿತ್ತು.

ಪುಷ್ಪಾ ಸಿನಿಮಾದ ಸಾಮಿ ಸಾಮಿ ಸಿಗ್ನೇಚರ್ ಸ್ಟೆಪ್‌ ರೀತಿ ಮತ್ತೊಂದು ಡ್ಯಾನ್ಸ್ ತೋರಿಸಿದ ರಶ್ಮಿಕಾ ಮಂದಣ್ಣ!