Vijay Devarakonda, Rashmika Mandanna News: ನಟಿ ರಶ್ಮಿಕಾ ಮಂದಣ್ಣ, ವಿಜಯ್‌ ದೇವರಕೊಂಡ ಮದುವೆ ಬಗ್ಗೆ ಊಹಾಪೋಹಗಳು ಹರಡುತ್ತಿವೆ. ಹೀಗಿರುವಾಗ ಇಬ್ಬರು ಹುಡುಗಿಯರು ಮಾಡಿದ ವಿಡಿಯೋವೊಂದು ಈಗ ಇನ್ನೊಂದಿಷ್ಟು ಅನುಮಾನವನ್ನು ಸೃಷ್ಟಿಸಿದೆ. ಏನದು? 

ಫೆಬ್ರವರಿಯಲ್ಲಿ ನಟಿ ರಶ್ಮಿಕಾ ಮಂದಣ್ಣ, ವಿಜಯ್‌ ದೇವರಕೊಂಡ ಅವರು ( Vijay Devarakonda, Rashmika Mandanna ) ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಇಷ್ಟು ವರ್ಷಗಳಾದರೂ ಕೂಡ ಇವರಿಬ್ಬರು ಪ್ರೀತಿ ಮಾಡ್ತಿರುವ ವಿಷಯವನ್ನು ಒಪ್ಪಿಕೊಂಡಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಶ್ಮಿಕಾ-ವಿಜಯ್‌ ಮದುವೆ ಜಾಗವೇ?

ಉದಯಪುರದ ಸಿಟಿ ಪ್ಯಾಲೇಸ್‌ನ ಹೊರಗಡೆಯ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಜಾಗ ಎನ್ನಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ವೈರಲ್‌ ವಿಡಿಯೋದಲ್ಲಿ ಏನಿದೆ?

ವೈರಲ್ ಆಗಿರುವ ಈ ವಿಡಿಯೋದಲ್ಲಿ, ಇಬ್ಬರು ಯುವತಿಯರು ಸಿಟಿ ಪ್ಯಾಲೇಸ್ ಆವರಣದಲ್ಲಿ ಓಡಾಡುತ್ತಾ ಕ್ಯಾಶುವಲ್ ಆಗಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾರೆ. ಅಲ್ಲಿ ಮದುವೆಗೋಸ್ಕರ ಮಾಡಿರುವ ಅಲಂಕಾರಗಳನ್ನು ತೋರಿಸುತ್ತಾ, ಇಲ್ಲಿ ಮದುವೆಯೊಂದು ನಡೆಯುತ್ತಿದೆ ಎನ್ನುತ್ತಾರೆ. ಇದ್ದಕ್ಕಿದ್ದಂತೆ ಅವರು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಆಗುತ್ತಿದ್ದಾರೆ. ಫೆಬ್ರವರಿ 2 ಕ್ಕೆ ಮದುವೆ ಎನ್ನುತ್ತಾರೆ.

ಮದುವೆ ಬಗ್ಗೆ ಸ್ಪಷ್ಟತೆ ಇಲ್ಲ

ಈ ವಿಡಿಯೋ ಮಾಡುವ ಹುಡುಗಿಯರಿಗೆ ವಿಜಯ್‌, ರಶ್ಮಿಕಾ ಮಂದಣ್ಣ ಮದುವೆ ಬಗ್ಗೆ ಸ್ಪಷ್ಟತೆ ಇಲ್ಲ, ಏನೋ ಹೇಳಲು ಹೋಗಿ ಇನ್ನೇನೋ ಹೇಳುವಂತೆ ಕಾಣುವುದು. ಇದನ್ನು ನೋಡಿದವರಿಗೆ ಮನರಂಜನೆ ಎನಿಸುವುದು, ಅಷ್ಟೇ ಅಲ್ಲದೆ ಇದನ್ನು ನಂಬಬೇಕೋ, ಬೇಡವೋ ಎಂಬ ಡೌಟ್‌ ಕೂಡ ಬರುವುದು.

ಇದು ಊಹೆ ಅಷ್ಟೇ

ಅರಮನೆಯಲ್ಲಿ ನಡೆಯುವ ಅಲಂಕಾರಿಕ ಕೆಲಸಗಳನ್ನು ಬಿಟ್ಟರೆ, ವಿಜಯ್‌ ದೇವರಕೊಂಡ ಮದುವೆ ಎನ್ನೋದಿಕ್ಕೆ ಯಾವುದೇ ಪುರಾವೆಗಳಿಲ್ಲ. ಹೀಗಾಗಿ ಈ ವಿಡಿಯೋ ಕೇವಲ ಊಹೆ, ಅಂದಾಜಿನ ಮೇಲೆ ಹೇಳಲಾಗಿದೆ ಎನ್ನಲಾಗಿದೆ.

ಸೆಲೆಬ್ರಿಟಿ ಮದುವೆ ಜಾಗ

ಉದಯಪುರ ಸಿಟಿ ಪ್ಯಾಲೇಸ್ ಅತ್ಯಂತ ಜನಪ್ರಿಯ ವಿವಾಹ ತಾಣವಾಗಿದೆ. ಅನೇಕ ಸೆಲೆಬ್ರಿಟಿಗಳು, ಉದ್ಯಮಿಗಳು ಇಲ್ಲೇ ಮದುವೆ ಆಗುತ್ತಾರೆ. ಬಾಲಿವುಡ್‌ನಿಂದ ದಕ್ಷಿಣ ಭಾರತದವರೆಗೆ ಅನೇಕರು ಇಲ್ಲೇ ಮದುವೆ ಆಗಿದ್ದರು. ಇವತ್ತು ಮದುವೆ ಆಗಿದ್ದು ನಿಜವಾದರೆ ಫೋಟೋ ಸಿಗುತ್ತದೆ ಎಂದು ಎದುರು ನೋಡುತ್ತಿದ್ದಾರೆ.

ಅಂದಹಾಗೆ ‘ಗೀತಾ ಗೋವಿಂದʼ ಸಿನಿಮಾದಲ್ಲಿ ವಿಜಯ್‌, ರಶ್ಮಿಕಾ ನಟಿಸಿದ್ದರು. ಈ ಸಿನಿಮಾದಲ್ಲಿನ ಜೋಡಿ ಸಖತ್‌ ಜನಪ್ರಿಯತೆ ಗಳಿಸಿತು, ಆ ಬಳಿಕ ರಶ್ಮಿಕಾ ಅವರು ರಕ್ಷಿತ್‌ ಶೆಟ್ಟಿ ಜೊತೆ ಬ್ರೇಕಪ್‌ ಮಾಡಿಕೊಂಡರು. ಆಮೇಲೆ ರಶ್ಮಿಕಾ, ವಿಜಯ್‌ ಅವರು ‘ಡಿಯರ್‌ ಕಾಮ್ರೇಡ್’‌ ಸಿನಿಮಾದಲ್ಲಿ ನಟಿಸಿದ್ದರು. ಇವರಿಬ್ಬರು ಒಟ್ಟಿಗೆ ವಿದೇಶಗಳಲ್ಲಿ ಹಾಲಿಡೇ ಎಂಜಾಯ್‌ ಮಾಡುವುದು, ವಿಜಯ್‌ ಮನೆಯಲ್ಲಿ ರಶ್ಮಿಕಾ ಇರುವ ಫೋಟೋಗಳು ವೈರಲ್‌ ಆಗಿತ್ತು.