ಧೋನಿ ಅನ್‌ಟೋಲ್ಡ್ ಸ್ಟೋರಿ ಹೇಳಿ ತನ್ನ ಕತೆ ಯಾರಿಗೂ ಹೇಳದೆ ಹೋದ ಸುಶಾಂತ್ !

First Published Jun 14, 2020, 5:37 PM IST

 ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ದೇಶವನ್ನೇ ಬೆಚ್ಚಿ ಬೀಳಿಸಿದೆ. 34ರ ಹರೆಯದ ಪ್ರತಿಭಾವಂತ ನಟ ಈ ರೀತಿ ಬದುಕಿನ ಪಯಣ ಮುಗಿಸಿ, ಅಭಿಮಾನಿಗಳನ್ನು ಶೋಕಸಾಗರಲ್ಲಿ ಮುಳುಗಿಸಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ಕುರಿತ ಜೀವನಚರಿತ್ರೆಯಲ್ಲಿ ಸುಶಾಂತ್ ಅದ್ಭುತ ಅಭಿಯನಕ್ಕೆ ಸ್ವತಃ ಧೋನಿಯೇ ದಂಗಾದಿದ್ದರು. ಧೋನಿಯ ಬ್ಯಾಟಿಂಗ್, ವಾಕಿಂಗ್ ಸೇರಿದಂತೆ ಎಲ್ಲಾ ಶೈಲಿಯನ್ನು ನಕಲು ಮಾಡಿದ್ದ ಸುಶಾಂತ್, ಬಾಲಿವುಡ್‌ನಲ್ಲೂ ಯಶಸ್ವಿಯಾಗಿದ್ದರು. ಧೋನಿ ಚಿತ್ರಕ್ಕಾಗಿ ಸುಶಾಂತ್ ಬರೋಬ್ಬರಿ 1 ವರ್ಷ ಕ್ರಿಕೆಟ್ ಅಭ್ಯಾಸ ಮಾಡಿದ್ದರು. ಸ್ವತಃ ಧೋನಿ ಬಳಿಯಿಂದಲೂ ಮಾರ್ಗದರ್ಶನ ಪಡೆದಿದ್ದರು.