ತೆಲುಗು ಕಿರುತೆರೆ ನಿರೂಪಕಿ ಸುರೇಖಾ ವಾಣಿ ಪತಿ ನಿಧನದ ನಂತರ ಸಿಂಗಲ್ ಪೇರೆಂಟ್ ಆಗಿ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ಮದುವೆ ಪ್ರಸ್ತಾಪಗಳು ಬರುತ್ತಿದ್ದು, ಇದು ಅಚ್ಚರಿ ಮೂಡಿಸಿದೆ. ಮಗಳು ಸುಪ್ರೀತಾ ತಾಯಿಗೆ ಸೂಕ್ತ ಸಂಗಾತಿ ಸಿಕ್ಕರೆ ಮದುವೆಗೆ ಸಮ್ಮತಿಸಿದ್ದಾಳೆ. ಆರ್ಥಿಕವಾಗಿ ಸಬಲರಾಗಿ, ವಿಷಕಾರಿ ಗುಣವಿಲ್ಲದ ವ್ಯಕ್ತಿ ಸಿಕ್ಕರೆ ಸಂತೋಷ ಎಂದು ಸುಪ್ರೀತಾ ಹೇಳಿದ್ದಾಳೆ. ಸುರೇಖಾ ಮಾತ್ರ ಸಿಂಗಲ್ ಆಗಿಯೇ ಸಂತೋಷವಾಗಿರುವುದಾಗಿ ಹೇಳಿದ್ದಾರೆ.
ತೆಲುಗು ಕಿರುತೆರೆ ನಿರೂಪಕಿ ಹಾಗೂ ಬೆಳ್ಳಿತೆರೆ ಪೋಷಕ ನಟಿ ಸುರೇಖಾ ವಾಣಿ ಸಿಂಗಲ್ ಪೇರೆಂಟ್ ಆಗಿ ಇಡೀ ಮನೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಕಳೆದ ಒಂದೆರಡು ವರ್ಷಗಳಿಂದ ಲೈಮ್‌ಲೈಟ್‌ನಿಂದ ದೂರ ಉಳಿದರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿರುವ ಪೋಸ್ಟ್‌ಗಳಿಂದ ಸುದ್ದಿಯಲ್ಲಿ ಇದ್ದಾರೆ. ಆದರೆ ಸುರೇಖಾ ಅವರಿಗೆ ಮತ್ತೆ ಮದುವೆ ಪ್ರಪೋಸಲ್ ಬರುತ್ತಿರುವುದು ಶಾಕಿಂಗ್. ಸುರೇಖಾ ಆಲೋಚನೆ ಮಾಡಿದರೆ ಒಂದು ರೀತಿ ಇಲ್ಲಿ ಮಗಳು ಕೂಡ ಬಿಗ್ ಸಪೋರ್ಟ್ ಆಗಿ ನಿಂತಿದ್ದಾಳೆ.
ಹೌದು! 2019ರಲ್ಲಿ ಸುರೇಖಾ ವಾಣಿ ಅವರ ಪತಿ ಸೂರ್ಯ ತೇಜ ಹೃದಯಾಘಾತದಿಂದ ಕೊನೆಯುಸಿರೆಳೆದರು. ಸುರೇಖಾ ವಾಣಿ ಕೆಲಸ ಮಾಡುತ್ತಿದ್ದ ಟಿವಿ ಕಾರ್ಯಕ್ರಮವನ್ನು ಪತಿ ಸುರೇಶ್ ನಿರ್ದೇಶಕ ಮಾಡುತ್ತಿದ್ದರು. ಅಲ್ಲಿ ಪರಿಚಯ ಆದ ಮೇಲೆ ಪ್ರೀತಿ ಇತ್ಯಾದಿ ಇತ್ಯಾದಿ ಶುರುವಾಯ್ತು. ಅಗಲುವ ಮುನ್ನವೇ ಪ್ರಿಷ್ಠಿತ ಚಾನೆಲ್‌ನಲ್ಲಿ ಪ್ರೋಗ್ರಾಂ ಹೆಡ್ ಆಗಿದ್ದರು. ಈ ನೋವಿನಿಂದ ಸುರೇಖಾ ಹೊರ ಬರಲು ಸಾಕಷ್ಟು ಸಮಯ ತೆಗೆದುಕೊಂಡರು. ಆದರೆ ಜೀವನ ಮುಂದೆ ಸಾಗಲೇ ಬೇಕು ಎಂದು ಪುತ್ರಿ ಸಾಥ್ ಕೊಡುತ್ತಿದ್ದಾರೆ. ಪತಿ ಅಗಲಿ 5 ವರ್ಷ ಆಗುವಷ್ಟರಲ್ಲಿ ಮತ್ತೆ ಮದುವೆ ಪ್ರಪೋಸ್‌ಗಳು ಹರಿದು ಬರುತ್ತಿದೆ. ವಯಸ್ಸಿನ ಮಿತಿ ಇಲ್ಲದೆ ಹುಡುಗರು ಮತ್ತು ಅಂಕಲ್‌ಗಳ ಪ್ರಪೋಸಲ್ ಬರುತ್ತಿದೆ. ಇದು ಸುರೇಖಾ ಅವರಿಗೆ ಶಾಕ್ ಆಗುತ್ತಿದೆ ಏಕೆಂದರೆ ಬಂದಿರುವ ಪ್ರತಿಯೊಂದು ಪ್ರಪೋಸಲ್ ಕೂಡ ಸಿರಿವಂತ ಕುಟುಂಬದಿಂದ. ಇದ್ಯಾವುದಕ್ಕೂ ರಿಯಾಕ್ಟ್ ಮಾಡದ ಸುರೇಖಾ ನಾನು ಸಿಂಗಲ್ ಆಗಿ ಸಂತೋಷವಾಗಿರುತ್ತೀನಿ ಎಂದಿದ್ದಾರೆ.
ಸ್ಟಾರ್ ನಟಿಯ ತಿಂಗಳು ಮನೆ ಬಾಡಿಗೆ 16 ಲಕ್ಷ ರೂ. ; 25 ಸಿನ್ಮಾದಲ್ಲಿ ಇಷ್ಟೊಂದ್ ದುಡಿದ್ರಾ?
ಸುರೇಖಾ ನಿರ್ಧಾರವನ್ನು ಪುತ್ರಿ ಸುಪ್ರೀತಾ ಒಪ್ಪಿಕೊಳ್ಳುತ್ತಿಲ್ಲ. 'ನನ್ನ ತಾಯಿಯನ್ನು ಮದುವೆ ಮಾಡಿಕೊಳ್ಳಲು ಈ ವಯಸ್ಸಿನಲ್ಲಿ ಹುಡುಗರು ಖಂಡಿತ ಬರುವುದಿಲ್ಲ ಹಾಗೂ ಒಪ್ಪಲ್ಲ ಹೀಗಾಗಿ ಅಂಕಲ್ ಆಗಿದ್ದರು ಸರಿ. ಅವರನ್ನು ಚೆನ್ನಾಗಿ ನೋಡಿಕೊಳ್ಳುವವರು ಸಿಕ್ಕರೆ ಮದುವೆ ಮಾಡಿಕೊಳ್ಳಲು ಅಭ್ಯಂತರವಿಲ್ಲ. ನನ್ನ ತಾಯಿ ಓಕೆ ಅಂದರೆ ಆಗ ಮದುವೆ ಮಾಡಿಸುವೆ. ಹುಡುಗರು ಸಿದ್ಧರಿಲ್ಲದಿದ್ದರೆ ಅಂಕಲ್‌ಗಳು ನಡೆಯುತ್ತಿದೆ. ಆರ್ಥಿಕವಾಗಿ ಸಬಲರಾಗಿರಬೇಕು ಹಾಗೂ ಟಾಕ್ಸಿಕ್ ಇರಬಾರದು. ಇಷ್ಟು ಕ್ವಾಲಿಟಿ ಸಿಕ್ಕರೆ ನನಗೆ ಸಂತೋಷವಾಗುತ್ತದೆ' ಎಂದು ಈ ಹಿಂದೆ ಸುಪ್ರೀತಾ ಹೇಳಿದ್ದರು.
ಧರ್ಮಸ್ಥಳ ಮಂಜುನಾಥ ದರ್ಶನ ಪಡೆದ ತರುಣ್- ಸೋನಲ್; ದೇವಸ್ಥಾನಕ್ಕೂ ಮ್ಯಾಚಿಂಗ್ ಯಾಕೆ ಎಂದ ನೆಟ್ಟಿಗರು
