ಸಿದ್ಧಾರ್ಥ್ ತಮ್ಮ ಸಿನಿಮಾ ಆಯ್ಕೆ ಮಾನದಂಡ ಬದಲಾಗಿದೆ ಎಂದು ಹೈದರಾಬಾದ್ ಸಾಹಿತ್ಯೋತ್ಸವದಲ್ಲಿ ಹೇಳಿದರು. ಮಹಿಳೆಯರನ್ನು ಅವಮಾನಿಸುವ, ಚುಡಾಯಿಸುವ ದೃಶ್ಯಗಳಿರುವ ಚಿತ್ರಗಳನ್ನು ತಿರಸ್ಕರಿಸುವುದರಿಂದ ಅವಕಾಶ ಕಡಿಮೆಯಾಗಿದೆ ಎಂದರು. ಇದರಿಂದ ಸ್ಟಾರ್ ಆಗುವ ಅವಕಾಶ ಕಳೆದುಕೊಂಡರೂ ಪಶ್ಚಾತಾಪವಿಲ್ಲ, ಜನರ ಗೌರವ ಮುಖ್ಯ ಎಂದರು. ಪತ್ನಿ ಅದಿತಿ, ಅತ್ತೆ ವಿದ್ಯಾರಾವ್ ಕೂಡ ಉಪಸ್ಥಿತರಿದ್ದರು.
ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳ ಚಾಕೋಲೇಟ್ ಬಾಯ್ ನಟ ಸಿದ್ಧಾರ್ಥ್ ತಮ್ಮ ಪ್ರಾಜೆಕ್ಟ್‌ಗಳನ್ನು ಆಯ್ಕೆ ಮಾಡುವ ರೀತಿ ಬದಲಾಗಿದೆ ಎಂದು ಹೈದ್ರಾಬಾದ್‌ನಲ್ಲಿ ನಡೆದ ಸಾಹಿತ್ಯೋತ್ಸವದಲ್ಲಿ ಮಾತನಾಡಿದ್ದಾರೆ. ಸಿನಿಮಾ ನೋಡುವುದು ಮಾತ್ರವಲ್ಲ ನನಗೆ ಪುಸ್ತಕಗಳನ್ನು ಓದಲು ತುಂಬಾನೇ ಇಷ್ಟ ಎಂದು ನಟ ಸಿದ್ಧಾರ್ಥ್ ಹೇಳಿಕೊಂಡಿದ್ದಾರೆ. ಪತ್ನಿ ಅದಿತಿ ರಾವ್ ಹೈದರಿ ಅವರ ತಾಯಿ ವಿದ್ಯಾ ರಾವ್ ಕೂಡ ಈ ಸಂವಾದಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ಯಾಕೆ ಸಿನಿಮಾ ಆಯ್ಕೆಗಳು ಕಡಿಮೆ ಆಗಿದೆ? ಯಾವ ರೀತಿಯ ಕಥೆಗಳನ್ನು ಹುಡುಕುತ್ತಿದ್ದಾರೆ ಎಂದು ಹಂಚಿಕೊಂಡಿದ್ದಾರೆ.
'ನನಗೆ ಅವಕಾಶಗಳು ಬಂದಿಲ್ಲ ಅಂತೇನು ಇಲ್ಲ. ಬಂದಿದ್ದವು ಈಗಲೂ ಬರುತ್ತವೆ ಆದರೆ ಆ ಚಿತ್ರಗಳಲ್ಲಿ ಹುಡುಗಿಯರಿಗೆ ಹೊಡೆಯುವ, ಚುಡಾಯಿಸುವ, ಸೊಂಟದ ಮೇಲೆ ಕೈಯಾಡಿಸುವ ಸನ್ನಿವೇಶಗಳಿರುತ್ತದೆ. ಅಲ್ಲದೆ ಹುಡುಗಿಯರು ತೆರೆ ಮೇಲೆ ಹೇಗಿರಬೇಕು ಅನ್ನೋ ಕೊಳಕು ಮನಸ್ಥಿತಿಯ ಕಥೆಗಳನ್ನು ನಾನು ಕೇಳಿದ್ದೇನೆ. ಇಂತಹ ಕಥೆಗಳನ್ನು ಆಯ್ಕೆ ಮಾಡುವುದು ನಾನು ಅದರಲ್ಲಿ ನಟಿಸುವುದು ಮೊದಲಿಂದ ಇಷ್ಟ ಇರಲಿಲ್ಲ ಹೀಗಾಗಿ ನಾನು ಸಿನಿಮಾ ಅಷ್ಟಾಗಿ ಮಾಡಲಿಲ್ಲ. ಒಂದು ವೇಳೆ ತೆರೆ ಮೇಲೆ ಈ ಕೆಲಸಗಳನ್ನು ನಾನು ಮಾಡಿದ್ದರೆ ಖಂಡಿತಾ ಇವತ್ತು ದೊಡ್ಡ ಸೂಪರ್ ಸ್ಟಾರ್ ಆಗಿರುತ್ತಿದ್ದೆ' ಎಂದು ಸಿದ್ಧಾರ್ಥ ಮಾತನಾಡಿದ್ದಾರೆ.
ಮತ್ತೆ ನಿಮ್ಮನ್ನು ನೋಡುತ್ತೀನಿ ಅಂದುಕೊಂಡಿರಲಿಲ್ಲ; ಪತ್ನಿ ಗೀತಾ ಜೊತೆ ಜೀ ವೇದಿಯಲ್ಲಿ ಕಾಣಿಸಿಕೊಂಡ ಶಿವಣ್ಣ ಭಾವುಕ
'ಈ ರೀತಿ ಸಿನಿಮಾಗಳಿಂದ ಅವಕಾಶಗಳನ್ನು ಕಳೆದುಕೊಂಡಿದ್ದಕ್ಕೆ ನನಗೆ ಯಾವುದೇ ಪಶ್ಚಾತಾಪವಿಲ್ಲ. ನನ್ನ ಬಗ್ಗೆ ತುಂಬಾ ಜನ ಒಳ್ಳೆಯ ಮಾತುಗಳನ್ನು ಅಡುತ್ತಾರೆ. ಹೆಣ್ಣು ಮಕ್ಕಳನ್ನು ಗೌರವಿಸುವ ಹುಡುಗ ಎನ್ನುತ್ತಾರೆ. ಪೋಷಕರಿಗೆ ಒಳ್ಳೆಯ ಮಗನಾಗಿದ್ದೀನಿ ಎನ್ನುತ್ತಿದ್ದಾರೆ. ಈಗಲೂ ನಾನು ಮುದ್ದಾಗಿ ಕಾಣಿಸುತ್ತೀನಿ ಎಂದು ಹಲವರು ಹೇಳುತ್ತಾರೆ. ಇಷ್ಟೇ ನನಗೆ ಸಾಕು ಏಕೆಂದರೆ ಚಿಕ್ಕ ಮಕ್ಕಳು ಕೂಡ ನನ್ನ ಚಿತ್ರವನ್ನು ಯಾವುದೇ ಮುಜುಗರವಿಲ್ಲದೆ ನೋಡುತ್ತಾರೆ. ಜನರು ಕೊಡುತ್ತಿರುವ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ನನಗೆ ತೆರೆ ಮೇಲೆ ಕಣ್ಣೀರಿಡುವುದು ತುಂಬಾ ಇಷ್ಟ ಅದನ್ನೇ ಮಾಡುತ್ತೀನಿ ಎಂದು ಸಿದ್ಧಾರ್ಥ್ ಹೇಳಿದ್ದಾರೆ.
ನಿರಪರಾಧಿ ಅಂತ ಲೆಟರ್ ಇದೆ ಜನರಿಗೆ ತಲೆ ಕೆಡಿಸಿಕೊಳ್ಳಲ್ಲ; ಕಿಡ್ನಾಪ್ ಕೇಸ್ ಬಗ್ಗೆ ಮೌನ ಮುರಿದ ಮೋಕ್ಷಿತಾ
