Asianet Suvarna News Asianet Suvarna News

Sarathkumar Hospitalised; ಆರೋಗ್ಯದಲ್ಲಿ ಏರುಪೇರು; ಖ್ಯಾತ ನಟ ಶರತ್ ಕುಮಾರ್ ಆಸ್ಪತ್ರೆಗೆ ದಾಖಲು

ಹಿರಿಯ ನಟ ಶರತ್ ಕುಮಾರ್ ಆರೋಗ್ಯದಲ್ಲಿ ಏರಾಪೇರಾಗಿದ್ದು ಆಸ್ಪತ್ರೆಗೆ ದಾಖಲಾಸಲಾಗಿದ್ದಾರೆ.

Actor Sarathkumar Hospitalised In Chennai sgk
Author
First Published Dec 11, 2022, 3:18 PM IST

ಹಿರಿಯ ನಟ ಶರತ್ ಕುಮಾರ್ ಆರೋಗ್ಯದಲ್ಲಿ ಏರಾಪೇರಾಗಿದ್ದು ಆಸ್ಪತ್ರೆಗೆ ದಾಖಲಾಸಲಾಗಿದ್ದಾರೆ. ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಶರತ್ ಕುಮಾರ್ ಅವರನ್ನು ತೀವ್ರ ನಿಗಾಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.  ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಕೆಲವು ದಿನಗಳಿಂದ ಡಿ ಹೈಡ್ರೇಷನ್‌ ಹಾಗು ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿದ್ದ ಶರತ್‌ ಅವರು ಇಂದು ಬೆಳಗ್ಗೆ ಬಹಳ ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಶರತ್ ಕುಮಾರ್ ಜೊತೆ ಆಸ್ಪತ್ರೆಯಲ್ಲಿ ಪತ್ನಿ ರಾಧಿಕಾ ಮತ್ತು ಮಗಳು ವರಲಕ್ಷ್ಮಿ ಇಬ್ಬರೂ ಆಸ್ಪತ್ರೆಯಲ್ಲಿದ್ದಾರೆ. ಈ ಬಗ್ಗೆ ಕುಟುಂಬದ ಕಡೆಯಿಂದ ಅಥವಾ ಆಸ್ಪತ್ರೆಯವರು ಇನ್ನೂ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ. 

ಮೂಲಗಳ ಪ್ರಕಾರ ಹೆಚ್ಚು ಆತಂಕ ಪಡಬೇಕಾಗಿಲ್ಲ ಎಂದು ತಿಳಿದುಬಂದಿದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶರತ್ ಕುಮಾರ್ ತೀವ್ರ ಅಸ್ವಸ್ಥರಾಗಿದ್ದಾರೆ ಎಂದು ತಿಳಿದ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮ ನೆಚ್ಚಿನ ನಟನನ್ನು ನೋಡಲು ಆಸ್ಪತ್ರೆ ಬಳಿ ತೆರಳುತ್ತಿದ್ದಾರೆ. ತಮಿಳು ಚಿತ್ರರಂಗ ಕೂಡಾ ಶಾಕ್‌ನಲ್ಲಿದ್ದು ಕುಟುಂಬ ಸದಸ್ಯರ ಬಳಿ ಶರತ್‌ ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ. ಆದಷ್ಟು ಬೇಗ ಶರತ್‌ ಕುಮಾರ್‌ ಗುಣಮುಖರಾಗಿ ಮನೆಗೆ ವಾಪಸಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಹಿರಿಯ ನಿರ್ದೇಶಕ ದೊರೈ ಭಗವಾನ್ ಖ್ಯಾತಿಯ ಭಗವಾನ್ ಆಸ್ಪತ್ರೆಗೆ ದಾಖಲು: ಆರೋಗ್ಯ ಸ್ಥಿತಿ ಗಂಭೀರ

2020ರಲ್ಲಿ ಶರತ್‌ ಕುಮಾರ್‌ ಕೊರೋನಾ ಸೋಂಕಿಗೆ ಒಳಗಾಗಿದ್ದರು. ಆಗ ಮನೆಯಲ್ಲೇ ಚಿಕಿತ್ಸೆ ಪಡೆದಿದ್ದ ಶರತ್ ಕುಮಾರ್ ಕೊರೊನಾದಿಂದ ಚೇತರಿಸಿಕೊಂಡು ಸಹಜ  ಜೀವನಕ್ಕೆ ಮರಳಿದ್ದರು. ಆದರೆ ಇದೀಗ ಮತ್ತೆ ಅವರ ಆರೋಗ್ಯ ಹದಗೆಟ್ಟಿದ್ದು ಎಲ್ಲರೂ ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ಶರತ್ ಕುಮಾರ್ ಅವರಿಗೆ ಚಿಕಿತ್ಸೆ ಮುಂದುವರೆದಿದ್ದು ಅವರ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿಗಾಗಿ ಲಭ್ಯವಾಗಬೇಕಿದೆ.

ಶರತ್‌ ಅಭಿಮಾನಿಗಳು ಅವರನ್ನು ತಮಿಳು ಚಿತ್ರರಂಗದ 'ಸುಪ್ರೀಮ್ ಸ್ಟಾರ್' ಎಂದೇ ಕರೆಯುತ್ತಾರೆ. ಅನೇಕ ಸಿನಿಮಾಗಳಲ್ಲಿ ನಟಿಸಿರುವ ಶರತ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ತಮಿಳು ಮಾತ್ರವಲ್ಲದೇ ಸೌತ್ ಸಿನಿಮಾರಂಗದ ಎಲ್ಲಾ ಭಾಷೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ ಶರತ್‌ ಕುಮಾರ್‌ ಸಾರಥಿ, ಮೈನಾ, ಸಂತೆಯಲ್ಲಿ ನಿಂತ ಕಬೀರ, ರಾಜಕುಮಾರ, ಸೀತಾರಾಮ ಕಲ್ಯಾಣ, ಜೇಮ್ಸ್‌, ಇತ್ತೀಚೆಗೆ ತೆರೆ ಕಂಡ ರೇಮೋ ಚಿತ್ರಗಳಲ್ಲಿ ನಟಿಸಿದ್ದರು. 

ಸ್ಯಾಂಡಲ್‌ವುಡ್ ಹಿರಿಯ ನಟ ಮನ್‌ದೀಪ್ ರಾಯ್‌ಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಇನ್ನೂ ಶರತ್‌ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಅವರು 1984 ರಲ್ಲಿ ಛಾಯಾ ಅವರನ್ನು ವಿವಾಹವಾದರು. ಆದರೆ 2000 ರಲ್ಲಿ ಛಾಯಾ ಅವರಿಂದ ವಿಚ್ಛೇದನ ಪಡೆದು, 2001 ರಲ್ಲಿ ನಟಿ ರಾಧಿಕಾ ಅವರನ್ನು ವಿವಾಹವಾದರು. ಶರತ್ ಕುಮಾರ್ ಅವರಿಗೆ ನಾಲ್ವರು ಮಕ್ಕಳಿದ್ದಾರೆ. ಮೊದಲ ಪತ್ನಿಗೆ ವರಲಕ್ಷ್ಮಿ ಎನ್ನುವ ಮಗಳಿದ್ದಾರೆ. ವರಲಕ್ಷ್ಮಿ ಕೂಡಾ ಚಿತ್ರರಂಗದಲ್ಲಿ ನಟಿಯಾಗಿ ಹೆಸರು ಮಾಡಿದ್ದಾರೆ. ಇನ್ನೂ ಶರತ್ ಕುಮಾರ್ ನಿರ್ಮಾಪಕರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಸದ್ಯಕ್ಕೆ ತಮಿಳಿನ ದಿ ಸ್ಮೈಲ್‌ ಮ್ಯಾನ್‌, ವಾರಿಸು ಸೇರಿದಂತೆ 4 ಸಿನಿಮಾಗಳಲ್ಲಿ ಶರತ್‌ ಕುಮಾರ್‌ ಬ್ಯುಸಿ ಇದ್ದಾರೆ.

Follow Us:
Download App:
  • android
  • ios