Asianet Suvarna News Asianet Suvarna News

ಹಿರಿಯ ನಿರ್ದೇಶಕ ದೊರೈ ಭಗವಾನ್ ಖ್ಯಾತಿಯ ಭಗವಾನ್ ಆಸ್ಪತ್ರೆಗೆ ದಾಖಲು: ಆರೋಗ್ಯ ಸ್ಥಿತಿ ಗಂಭೀರ

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದಾರೆ.

Veteran Kannada film director Bhagavan hospitalised gvd
Author
First Published Dec 5, 2022, 7:22 PM IST

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದಾರೆ. ನಟ, ನಿರ್ದೇಶಕ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗದಲ್ಲಿ ಭಗವಾನ್ ಗುರುತಿಸಿಕೊಂಡಿದ್ದರು. ಇದೀಗ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 89 ವರ್ಷದ ಭಗವಾನ್ ಅವರು ಇತ್ತೀಚೆಗೆ ಶೀತದಿಂದ ಬಳಲುತ್ತಿದ್ದು, ಉಸಿರಾಟದ ಸಮಸ್ಯೆಯಿಂದ 2 ದಿನದ ಹಿಂದೆಯೇ ಆಸ್ಪತ್ರೆಗೆ ರವಾನಿಸಲಾಗಿದೆ. 

ಇನ್ನೂ ಡಾ.ಮಂಜುನಾಥ್‌ ಅವರು ಭಗವಾನ್‌ಗೆ ಚಿಕಿತ್ಸೆ ನೀಡುತ್ತಿದ್ದಾರೆ. ಶ್ರೀನಿವಾಸ ಕೃಷ್ಣ ಅಯ್ಯಂಗಾರ್‌ ಭಗವಾನ್‌ ಎಂಬ ಹೆಸರಿದ್ದರೂ ಇವರು ಭಗವಾನ್‌ ಹೆಸರಿನಿಂದಲೇ ಪ್ರಸಿದ್ಧರು. ಡಾ. ರಾಜ್‌ ನಟನೆಯ ಬ್ಲಾಕ್‌ ಬಸ್ಟರ್‌ ಹಿಟ್‌ ‘ಕಸ್ತೂರಿ ನಿವಾಸ’, ‘ಎರಡು ಕನಸು’, ‘ಬಯಲು ದಾರಿ’, ‘ಗಿರಿ ಕನ್ಯೆ’, ‘ಚಂದನದ ಗೊಂಬೆ’, ‘ಆಪರೇಶನ್‌ ಡೈಮಂಡ್‌ ರಾಕೆಟ್‌’, ‘ಹೊಸ ಬೆಳಕು’ ಸೇರಿದಂತೆ 55 ಚಿತ್ರಗಳನ್ನು ಸ್ನೇಹಿತ ದೊರೈ ರಾಜ್‌ ಜೊತೆ ಸೇರಿ ನಿರ್ದೇಶಿಸಿದವರು. ಅದರಲ್ಲಿ 30 ಚಿತ್ರಗಳಿಗೆ ಡಾ. ರಾಜ್‌ ನಾಯಕರಾಗಿದ್ದರು. 

ಆನೆಗುಡ್ಡೆ ದೇವಸ್ಥಾನದಲ್ಲಿ 'ಕಾಂತಾರ' ಶಿವ; ಕುಟುಂಬ ಸಮೇತ ಭೇಟಿ ನೀಡಿದ ರಿಷಬ್ ಶೆಟ್ಟಿ

ಸಿನಿಮಾರಂಗದಲ್ಲಿ 65 ವರ್ಷಗಳ ಸುದೀರ್ಘ ಅನುಭವ ಇವರದು. ಗೆಳೆಯ ದೊರೈ ನಿಧನದ ಬಳಿಕ ನಿರ್ದೇಶನದಿಂದ ಹಿಂದೆ ಸರಿದಿದ್ದರು. 1956ರಲ್ಲಿ ಹಿರಿಯ ನಿರ್ದೇಶಕ ಕಣಗಾಲ್‌ ಪ್ರಭಾಕರ ಶಾಸ್ತ್ರಿ ಅವರಿಗೆ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದ ಭಗವಾನ್‌, ‘ಸಂಧ್ಯಾರಾಗ’ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾದರು. ವಿನಯ್‌ ರಾಘವೇಂದ್ರ ರಾಜ್‌ಕುಮಾರ್‌ ನಾಯಕರಾಗಿದ್ದ ‘ಅನಂತು ವರ್ಸಸ್‌ ನುಸ್ರತ್‌’ ಸಿನಿಮಾದಲ್ಲಿ ನಟಿಸಿದ್ದರು.

Follow Us:
Download App:
  • android
  • ios