ಕುಡಿದು ನಟರ ಜೀವನ ಹಾಳು ಮಾಡ್ತಿದ್ದಾರೆ ಸಲ್ಮಾನ್ ಖಾನ್? ಮನಬಿಚ್ಚಿ ಮಾತನಾಡಿದ ನಟ
ನಟ ಸಲ್ಮಾನ್ ಖಾನ್ ಕುಡಿದ ಬಳಿಕ ಹಲವು ನಟರ ಜೀವನ ಹಾಳು ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪವಿದೆ. ಈ ಕುರಿತು ಅವರು ಹೇಳಿದ್ದೇನು?
ಕಿಸೀ ಕಾ ಭಾಯಿ, ಕಿಸೀ ಕಾ ಜಾನ್ (Kisi ka Bhai Kisi Ka Jaan) ಚಿತ್ರ ಅಂದುಕೊಂಡಷ್ಟು ಯಶಸ್ಸು ಕಾಣದ ನೋವಿನಲ್ಲಿದ್ದಾರೆ ನಟ ಸಲ್ಮಾನ್ ಖಾನ್. ಇವರು ಸದಾ ಒಂದಿಲ್ಲೊಂದು ಸುದ್ದಿಯಲ್ಲಿ ಇರುತ್ತಾರೆ. ನಟಿ ಐಶ್ವರ್ಯ ರೈ ಅವರೊಂದಿಗಿನ ಭಗ್ನ ಪ್ರೇಮದ ಬಳಿಕ ಅವಿವಾಹಿತರಾಗಿಯೇ ಉಳಿದಿರುವ ಸಲ್ಲು ಭಾಯಿಯ ಹೆಸರು ಅದೆಷ್ಟೋ ನಟಿಯರ ಜೊತೆ ಥಳಕು ಹಾಕಿಕೊಂಡದ್ದೂ ಇದೆ. ಕೆಲವು ನಟಿಯರು ಸಲ್ಮಾನ್ ಖಾನ್ ತಮಗೆ ಮೋಸ ಮಾಡಿದ್ದಾರೆ ಎಂದು ಹೇಳಿರುವುದೂ ಇದೆ. ಅದೇ ವೇಳೆ ಸಲ್ಮಾನ್, ಲವ್ ಮಾಡುವ ಹುಡುಗಿಯರೇ ಸರಿ ಇಲ್ಲ ಎನ್ನುವಂಥ ವಿವಾದಾತ್ಮಕ ಹೇಳಿಕೆ ನೀಡಿ ಮಹಿಳಾಮಣಿಗಳ ಕೋಪಕ್ಕೂ ಇತ್ತೀಚಿಗೆ ಗುರಿಯಾಗಿದ್ದರು. ಮೊದಲದು ಹುಡುಗಿಯರು 'ಜಾನ್' ಎಂದು ಕರೆಯಲು ಪ್ರಾರಂಭಿಸುತ್ತಾರೆ ಮತ್ತು ನಂತರ ನೀನೇ ನನ್ನ ಜೀವ ಎಂದೂ ಹೇಳುತ್ತಾರೆ. ನಾನು ನಿಮ್ಮೊಂದಿಗೆ ಇರುವುದು ತುಂಬಾ ಸಂತೋಷವಾಗಿದೆ, ನಾನು ತುಂಬಾ ಅದೃಷ್ಟಶಾಲಿ ಎಂದೆಲ್ಲಾ ಹೇಳುತ್ತಾರೆ. ಸ್ವಲ್ಪ ಸಮಯ ಕಳೆದ ಮೇಲೆ ಐ ಲವ್ ಯೂ (I Love You) ಎನ್ನುತ್ತಾರೆ. ಹುಡುಗಿ ಐ ಲವ್ ಯೂ ಅಂದಾಗ ನಿಮ್ಮ ಲೈಫ್ ನಾಶ ಆದಂತೆಯೇ ಎಂದಿದ್ದರು. ಹುಡುಗಿಯರು ಐ ಲವ್ ಯು ಅಂದ್ರೆ, ನಿನ್ನ ಜೀವನ ಮೊದಲು ನಾಶ ಮಾಡುತ್ತೇನೆ. ನಂತರ ಬೇರೊಬ್ಬನನ್ನು ಕಟ್ಟಿಕೊಂಡು ಅವರ ಜೀವನ ನಾಶಮಾಡುತ್ತೇನೆ ಎಂದೇ ಅರ್ಥ ಎಂದಿದ್ದಾರೆ.
ಇವೆಲ್ಲವುಗಳ ಹೊರತಾಗಿ ಸಲ್ಮಾನ್ ಖಾನ್ಗೆ (Salman Khan) ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರು ಇದೆ. ಸಿನಿಮಾಗಳಲ್ಲಿ ಅವರು ತಮ್ಮ ಪಾತ್ರಕ್ಕೆ ಎಷ್ಟು ಜೀವ ತುಂಬುತ್ತಾರೋ, ನಿಜ ಜೀವನದಲ್ಲಿಯೂ ಅಷ್ಟೇ ಪ್ರಾಬಲ್ಯವನ್ನು ತೋರಿಸುತ್ತಿರುವವರು. ಇವರ ಬಗ್ಗೆ ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರಿದ್ದು, ಅನೇಕ ನಟಿಯರು ಮತ್ತು ನಟರ ವೃತ್ತಿಜೀವನವನ್ನು ಕಟ್ಟಿಕೊಟ್ಟಿದ್ದಾರೆ ಎನ್ನಲಾಗಿದೆ. ಅದೇ ರೀತಿ ಸ್ತ್ರೀಯರ ಬಗ್ಗೆಯೂ ಅಪಾರ ಕಾಳಜಿ ವಹಿಸುತ್ತಾರೆ ಎಂದೇ ಖ್ಯಾತಿ ಪಡೆದಿದ್ದಾರೆ. ಸಲ್ಮಾನ್ ಖಾನ್ ಪಾಲಕ್ ತಿವಾರಿ, ಶೆಹನಾಜ್ ಗಿಲ್ನಂತಹ ನಟಿಯರ ಕೆರಿಯರ್ನಲ್ಲಿ ಮೊದಲ ಫಿಲ್ಮ್ ಕೊಟ್ಟಿದ್ದಾರೆ. ತಮ್ಮ ಸಿನಿಮಾದಲ್ಲಿ ಸಾಕಷ್ಟು ಹೊಸ ಸ್ಟಾರ್ಟ್ಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರಿಂದ ಆಶೀರ್ವಾದ ಪಡೆದವರಲ್ಲಿ ಕೆಲವರು ಬಾಲಿವುಡ್ ಖ್ಯಾತ ನಟ -ನಟಿಯರು ಸೂಪರ್ಸ್ಟಾರ್ಗಳಾಗಿದ್ದಾರೆ. ಹೊಸ ಮತ್ತು ಹಳೇ ನಟರಿಗೆ ಗಾಡ್ ಫಾದರ್ನಂತೆ ಇದ್ದಾರೆ ಸಲ್ಮಾನ್ ಖಾನ್ ಎನ್ನಲಾಗುತ್ತದೆ.
ಮದುವೆ ಕುರಿತು ಕಂಗನಾ ಹೇಳಿದ್ದೇನು? ಸಲ್ಮಾನ್‌ನನ್ನೂ ಬಿಡದ ಬಾಲಿವುಡ್ ಕ್ವೀನ್!
ಇಷ್ಟರ ಹೊರತಾಗಿಯೂ ನಟ ಸಲ್ಮಾನ್ ಕೆಲವು ಸ್ಟಾರ್‌ಗಳ (Star) ವೃತ್ತಿಜೀವನವನ್ನು ನಾಶಪಡಿಸಿದ್ದಾರೆ ಎಂಬ ಆರೋಪವೂ ಇದೆ. ಅವರು ಕುಡಿದ ಮೇಲೆ ನಟರ ಜೀವನವನ್ನು ಹಾಳು ಮಾಡುತ್ತಾರೆ. ಇವರಿಂದಾಗಿ ಕೆಲವು ನಟರು ತಮ್ಮ ಭವಿಷ್ಯ ಹಾಳು ಮಾಡಿಕೊಂಡಿದ್ದಾರೆ ಎನ್ನುವ ಗಂಭೀರ ಅಪವಾದಗಳಿವೆ. ಈ ಆರೋಪಗಳ ಬಗ್ಗೆ ಇದೇ ಮೊದಲ ಬಾರಿಗೆ ನಟ ಸಲ್ಮಾನ್ ಖಾನ್ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಲ್ಲು ಭಾಯಿ, ಚಿತ್ರರಂಗದ ಬಹುತೇಕ ಜನರೊಂದಿಗೆ ನನಗೆ ಒಡನಾಟವಿಲ್ಲ. ಪ್ರಾಜೆಕ್ಟ್‌ನಲ್ಲಿ ಅವರೊಂದಿಗೆ ಕೆಲಸ ಮಾಡುವಾಗ ಮಾತ್ರ ಅವರು ನನ್ನೊಂದಿಗೆ ಸಂಪರ್ಕಕ್ಕೆ ಬರುತ್ತಾರೆ. ಶೂಟಿಂಗ್ ಸಮಯದಲ್ಲಿ ಮಾತ್ರ ನಾನು ಮಾತನಾಡಲು ಸಾಧ್ಯವಾಗುತ್ತದೆ. ಚಿತ್ರರಂಗದಲ್ಲಿ ನನಗೆ ಇರುವ ಸ್ನೇಹಿತರೆಲ್ಲರೂ ಬಾಲ್ಯದ ಗೆಳೆಯರು ಅಥವಾ ಹಿರಿಯರು. ನಾನು ಎಲ್ಲಾ ಸಮಯದಲ್ಲೂ ಅವರೊಂದಿಗೆ ಪಾರ್ಟಿ ಮಾಡಲು ಇಷ್ಟಪಡುವುದಿಲ್ಲ. ಸದಾ ಜನರೊಂದಿಗೆ ವೈಮನಸ್ಯ ಕಾಯ್ದುಕೊಳ್ಳುವಂಥ ಗುಣವೂ ನನ್ನಲ್ಲಿಲ್ಲ. ಆದಾಗ್ಯೂ ಹೀಗೇಕೆ ಆರೋಪ ಬಂದಿದೆ ಎನ್ನುವುದು ತಿಳಿಯುತ್ತಿಲ್ಲ' ಎಂದಿದ್ದಾರೆ.
'ನಾನು ಎಲ್ಲಾ ಸಮಯದಲ್ಲೂ ನನ್ನ ಪರಿಚಯಸ್ಥರ ಜೊತೆ ಅವರು ಕೇಳಿಕೊಂಡಾಗಲೆಲ್ಲಾ ಪಾರ್ಟಿ (Party) ಮಾಡಲು ಇಷ್ಟಪಡುವುದಿಲ್ಲ. ಕುಡಿದ ನಂತರ, ಇತರರಿಗೆ ಪಾಠ ಕಲಿಸುವ ಮತ್ತು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮಾತನಾಡುವ ಅನೇಕ ಜನರಿದ್ದಾರೆ. ಆದರೆ ಕುಡಿದ ನಂತರ ನಾನು 'ಅರೆ ಇರ್ಲಿ ಬಿಡಪ್ಪಾ' ಎಂದು ಮಾತನಾಡುತ್ತೇನೆ. ನಾನು ತಪ್ಪು ಮಾಡಿದ್ದರೆ ಅದನ್ನು ಒಪ್ಪಿಕೊಳ್ಳುವ ಗುಣದವ ಎಂದಿದ್ದಾರೆ. ಸದ್ಯ, 57ರ ಹರೆಯದ ಸಲ್ಮಾನ್ ಖಾನ್ ಮುಂದಿನ 'ಟೈಗರ್ 3' ಚಿತ್ರದಲ್ಲಿ ಕತ್ರಿನಾ ಕೈಫ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ.
ಇನ್ನೂ ಮದ್ವೆಯಾಗದ ಸಲ್ಮಾನ್ ಸಹೋದರರಿಗೆ ಹಿಂಗ್ ಅಡ್ವೈಸ್ ಮಾಡಿದ್ರಂತೆ !