Asianet Suvarna News Asianet Suvarna News

ಆಯುರ್ವೇದದ ಈ ಚಿಕಿತ್ಸೆ ಮೂಲಕ 14 ದಿನದಲ್ಲೇ 6 ಕೆ.ಜಿ ತೂಕ ಇಳಿಸಿಕೊಂಡ ನಟ

ಆಯುರ್ವೇದ ಪದ್ಧತಿಯಾದ ಪಂಚಕರ್ಮದ ಮೂಲಕ ಕೇವಲ 14 ದಿನಗಳಲ್ಲಿ 6 ಕೆಜಿ ತೂಕ ಇಳಿಸಬಹುದು. ರೋಹಿತ್ ರಾಯ್ ಅವರ ಈ ಅನುಭವ ಈ ವಿಧಾನದ ಪರಿಣಾಮಕಾರಿತ್ವಕ್ಕೆ ಸಾಕ್ಷಿ. ಪಂಚಕರ್ಮವು ದೇಹವನ್ನು ಡಿಟಾಕ್ಸ್ ಮಾಡಿ, ಜೀರ್ಣಕ್ರಿಯೆಯನ್ನು ಸುಧಾರಿಸಿ ತೂಕ ಇಳಿಕೆಗೆ ನೆರವಾಗುತ್ತದೆ.

actor rohit roy lost six kg weight in fourteen days through panchakarma roo
Author
First Published Aug 16, 2024, 12:24 PM IST | Last Updated Aug 16, 2024, 12:54 PM IST

ತೂಕ ಇಳಿಕೆ (weight loss)… ಸದ್ಯ ಎಲ್ಲರ ದೊಡ್ಡ ಸವಾಲು. ವಾಕಿಂಗ್, ಯೋಗ, ಜಿಮ್, ಡಯಟ್ ಅಂತ ಒಂದಾದ್ಮೇಲೆ ಒಂದು ಮಾಡಿದ್ರೂ ತಿಂಗಳಿಗೆ ಒಂದು ಕೆ.ಜಿ ಇಳಿಯೋದು ಕಷ್ಟ. ನೂರು, ಇನ್ನೂರು ಗ್ರಾಂ ತೂಕ ಇಳಿಸೋದು ಕೂಡ ಎಷ್ಟು ಕಷ್ಟ ಎಂಬುದು ಇತ್ತೀಚಿಗೆ ಒಲಂಪಿಕ್ಸ್ (Olympics) ನಲ್ಲಿ ನಡೆದ ವಿನೇಶ್ ಫೋಗಟ್ (Vinesh Phogat)  ಘಟನೆ ತೋರಿಸಿಕೊಟ್ಟಿದೆ. ಆದ್ರೆ ನಮ್ಮ ಆಯುರ್ವೇದ (Ayurveda)ದಲ್ಲಿ ಎಲ್ಲವೂ ಸಾಧ್ಯ. ನಿಮ್ಮ ತೂಕವನ್ನು ಕೂಡ ಆಯುರ್ವೇದದ ಮೂಲಕ ಸುಲಭವಾಗಿ ಇಳಿಸ್ಬಹುದು. ಇದಕ್ಕೆ ನಟ ರೋಹಿತ್ ರಾಯ್ ಉತ್ತಮ ನಿದರ್ಶನವಾಗಿದ್ದಾರೆ. ಕೇವಲ 14 ದಿನಗಳಲ್ಲಿ 6 ಕೆ.ಜಿ ಇಳಿಸಿರುವ ರೋಹಿತ್, ತಮ್ಮ ಚಿಕಿತ್ಸಾ ವಿಧಾನದ ಬಗ್ಗೆ ಮಾಹಿತಿ ನೀಡಿದ್ದಾರೆ. 

ಭಾರತದಲ್ಲಿ ಪುರಾತನ ಕಾಲದಿಂದಲೂ ಆಯುರ್ವೇದ ಬಳಕೆ ಮಾಡಲಾಗ್ತಿದೆ. ರೋಹಿತ್ ರಾಯ್ ತಮ್ಮ ತೂಕ ಇಳಿಸಿಕೊಳ್ಳಲು ಆಯುರ್ವೇದದ ಪಂಚಕರ್ಮದ ಸಹಾಯ ಪಡೆದಿದ್ದಾರೆ. 2021ರಿಂದಲೇ ಅವರು ಆಯುರ್ವೇದದ ಪಂಚಕರ್ಮ ಚಿಕಿತ್ಸೆ ಮೂಲಕ ತೂಕ ಇಳಿಕೆ ಮಾಡಿಕೊಳ್ತಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ರೋಹಿತ್ ರಾಯ್, 14 ದಿನಗಳಲ್ಲಿ 6 ಕೆ.ಜಿ ತೂಕ ಇಳಿಸಿರೋದಾಗಿ ಹೇಳಿದ್ದಾರೆ. ಕೇರಳಕ್ಕೆ ಅವರು ಚಿಕಿತ್ಸೆಗೆ ತೆರಳುವ ಮುನ್ನ ಅವರಿಗೆ ಜೀರ್ಣಕಾರಿ ಸಮಸ್ಯೆ ಕಾಡುತ್ತಿತ್ತು. ಪಂಚಕರ್ಮದಿಂದ ಎಲ್ಲ ಸಮಸ್ಯೆ ಕಡಿಮೆಯಾಗಿದ್ದಲ್ಲದೆ ಅವರಿಗೆ ಈ ಚಿಕಿತ್ಸೆ ಅಭ್ಯಾಸವಾಗಿದೆ. ವರ್ಷಕ್ಕೊಮ್ಮೆ ಈ ಚಿಕಿತ್ಸೆಯ ಮೊರೆ ಹೋಗ್ತಿದ್ದಾರೆ. 

ಮದುವೆಯಾದ ನಂತರ ಮಹಿಳೆಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡೋದು ಏನು?

ರೋಹಿತ್ ರಾಯ್, ಕೆಲವೊಮ್ಮೆ ಹತ್ತು ದಿನ ಚಿಕಿತ್ಸೆ ಪಡೆಯುತ್ತಾರೆ. ತೂಕ ಇಳಿಸುವುದು ಅವರ ಉದ್ದೇಶವಲ್ಲ. ದೇಹವನ್ನು ಡಿಟಾಕ್ಸ್ ಮಾಡಲು ಅಲ್ಲಿಗೆ ಹೋಗ್ತೇನೆ ಎನ್ನುತ್ತಾರೆ ಅವರು. 

ಪಂಚಕರ್ಮ ಚಿಕಿತ್ಸೆ ಎಂದರೇನು? : ಪಂಚಕರ್ಮವು ಆರೋಗ್ಯಕ್ಕಾಗಿ ಬಳಸಲಾಗುವ ಆಯುರ್ವೇದ ಚಿಕಿತ್ಸಾ ವಿಧಾನವಾಗಿದೆ. ಬಾಳೆಹಣ್ಣುಗಳು ಚಿಕಿತ್ಸೆಯ ಭಾಗವಾಗಿ ದೇಹವನ್ನು ಮೊದಲು ಸ್ವಚ್ಛಗೊಳಿಸುತ್ತವೆ. ಇದರಿಂದ ದೇಹ  ಔಷಧಿಯನ್ನು ಉತ್ತಮವಾಗಿ ಸ್ವೀಕರಿಸಲು ನೆರವಾಗುತ್ತದೆ. ಪಂಚಕರ್ಮ ದೇಹವನ್ನು ಡಿಟಾಕ್ಸ್ ಮಾಡುವುದು ಮಾತ್ರವಲ್ಲದೆ ತೂಕ ಇಳಿಕೆ ಮಾಡಲು ಅದು ನೆರವಾಗುತ್ತದೆ. 

ವ್ಯಕ್ತಿಯ ದೇಹ ಪ್ರಕೃತಿಗೆ ತಕ್ಕಂತೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ವ್ಯಕ್ತಿ ದೇಹ ಕಫ, ಪಿತ್ತ ಹಾಗೂ ವಾತದಲ್ಲಿ ಯಾವ ಅಂಶವನ್ನು ಹೆಚ್ಚು ಹೊಂದಿದೆ ಎಂಬುದನ್ನು ಪತ್ತೆ ಮಾಡಿ ನಂತ್ರ ಚಿಕಿತ್ಸೆ ನೀಡಲಾಗುತ್ತದೆ. ಪಂಚಕರ್ಮ ಐದು ಚಿಕಿತ್ಸಕ ಪ್ರಕ್ರಿಯೆಯನ್ನು ಹೊಂದಿರುತ್ತದೆ. ಇವು ದೇಹದಲ್ಲಿರುವ ವಿಷವನ್ನು ಹೊರಗೆ ಹಾಕುವ ಮೂಲಕ, ಕಪ, ಪಿತ್ತ ಮತ್ತು ವಾತವನ್ನು ಸಮತೋಲನಗೊಳಿಸುತ್ತದೆ. 

ವಮನ : ಚಿಕಿತ್ಸೆಗೆ ಮೊದಲು ವಮನ ಅಂದ್ರೆ ವಾಂತಿಯನ್ನು ಮಾಡಿಸಲಾಗುತ್ತದೆ. ಇದ್ರಿಂದ ಕಫ ದೇಹದಿಂದ ಹೊರಗೆ ಹೋಗುತ್ತದೆ. ಇದು ಶ್ವಾಸಕೋಶದ ಆರೋಗ್ಯ ಹಾಗೂ ಚಯಾಪಚಯವನ್ನು ಸುಧಾರಿಸುತ್ತದೆ.

ವಿರೇಚನ : ಇದ್ರಲ್ಲೂ ವಿಷಕಾರಿ ಅಂಶ ಹೊರಗೆ ಹೋಗುತ್ತದೆ. ಕರುಳನ್ನು ಸ್ವಚ್ಛಗೊಳಿಸಲು ಶುದ್ಧೀಕರಿಸುವ ವಸ್ತುಗಳನ್ನು ಬಳಸಿ ಯಕೃತ್ತು ಮತ್ತು ಗಾಲ್ ಮೂತ್ರಕೋಶದಲ್ಲಿ ಸಂಗ್ರಹವಾದ ಪಿತ್ತರಸವನ್ನು ತೆಗೆದುಹಾಕಲಾಗುತ್ತದೆ. ಇದು ಯಕೃತ್ತನ್ನು ನಿರ್ವಿಷಗೊಳಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುವ ಜೊತೆಗೆ ತೂಕ ಇಳಿಕೆಗೆ ಸಹಕಾರಿ. 

ಬಸ್ತಿ : ಇದು ಅನಿಮಾ ಚಿಕಿತ್ಸೆಯಾಗಿದೆ. ದೇಹದ ಕೆಳ ಭಾಗವನ್ನು ಸ್ವಚ್ಛಗೊಳಿಸಲಾಗುತ್ತದೆ.

ನಾಸ್ಯ:  ಮೂಗು ಮತ್ತು ಗಂಟಲನ್ನು ಸ್ವಚ್ಛಗೊಳಿಸುವ ವಿಧಾನವಾಗಿದೆ. ಮೂಗಿನ ಹೊಳ್ಳೆಗಳಿಗೆ ಔಷಧೀಯ ಎಣ್ಣೆ ಅಥವಾ ಪುಡಿಯನ್ನು ಹಾಕಲಾಗುತ್ತದೆ. ಆತಂಕವನ್ನು ಕಡಿಮೆ ಮಾಡುವುದಲ್ಲದೆ ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ. 

ರಕ್ತ ಮೋಕ್ಷಣ : ವಿಷಯುಕ್ತ ರಕ್ತವನ್ನು ತೆಗೆಯುವ ವಿಧಾನವಾಗಿದೆ. ಇದ್ರಲ್ಲಿ ದೇಹದಲ್ಲಿರುವ ಕೆಟ್ಟ ರಕ್ತವನ್ನು ಹೊರತೆಗೆಯಲಾಗುತ್ತದೆ. ರಕ್ತವನ್ನು ಶುದ್ಧೀಕರಿ,ಊತವನ್ನು ಕಡಿಮೆ ಮಾಡಿ, ಪಿತ್ತರಸವನ್ನು ಸಮತೋಲನಗೊಳಿಸುತ್ತದೆ.

Sexual Education: ಇದು ನಿಮಗೆ ಗೊತ್ತಿತ್ತಾ? ಸಿಗರೇಟ್ ಸೇದಿದರೆ ಕಾಮೋದ್ರೇಕ ಹೆಚ್ಚಾಗುತ್ತೆ!

14 ದಿನಗಳಲ್ಲಿ ಎಷ್ಟು ತೂಕ ಇಳಿಸಬಹುದು : ಪಂಚಕರ್ಮ ಚಿಕಿತ್ಸೆಯನ್ನು 14 ದಿನ ಪಡೆದಲ್ಲಿ ನಾಲ್ಕರಿಂದ ಐದು ಕೆ.ಜಿ ತೂಕವನ್ನು ಇಳಿಸಬಹುದು. ಆದ್ರೆ ಇದು ನಿಮ್ಮ ದೇಹ ಸ್ವಭಾವನ್ನು ಅವಲಂಬಿಸಿದೆ. 

Latest Videos
Follow Us:
Download App:
  • android
  • ios