ಬಾಲಿವುಡ್‌ನ ಖ್ಯಾತ ರ‍್ಯಾಪರ್ ಬಾದ್‌ ಶಾ ಜೊತೆ ಸ್ಯಾಂಡಲ್‌ವುಡ್ ಚೆಲುವೆ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. ದೇಶಾದ್ಯಂತ ಯೂತ್‌ ನೆಚ್ಚಿನ ರ‍್ಯಾಪರ್ ಹಾಡಿನಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಸೇರಿ ಪ್ರಮುಖ ಬಾಲಿವುಡ್ ನಟಿಯರೇ ಹೆಚ್ಚು ಕಾಣಿಸ್ಕೊಳ್ತಾರೆ. ಆದರೆ ಈ ಬಾರಿ ಬಾದ್‌ ಶಾಗೆ ಕಿರಿಕ್ ಚೆಲುವೆ ಜೋಡಿಯಾಗಲಿದ್ದಾರೆ.

ಸ್ಟಾರ್ ರ‍್ಯಾಪರ್ ಬಾದ್‌ ಶಾ ಅವರ ಮುಂದಿನ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಅವರು ಚಂಡೀಗಡದಲ್ಲಿ ಇದೀಗ ಹಾಡಿನ ಶೂಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಹಾಡಿನ ಬಗ್ಗೆ ಅಧಿಕೃತವಾಗಿ ಹೆಚ್ಚೇನೂ ಮಾಹಿತಿ ಸಿಗದಿದ್ದರೂ, ಶೀಘ್ರವೇ ಸಾಂಗ್ ರಿಲೀಸ್ ಆಗುವ ಸಾಧ್ಯತೆ ಇದೆ.

ರಶ್ಮಿಕಾಗೆ ಮಾತ್ರವಲ್ಲ, ನಟ ದೇವರಕೊಂಡಗೂ ಖುಷಿ ಕೊಡೋದು ಇದೇ ವಿಷ್ಯ

ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾ ಕಾರ್ತಿ ಜೊತೆ ಮಾಡಿ ತಮಿಳು ಸಿನಿಮಾ ಸುಲ್ತಾನ್ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಇದೀಗ ನಟಿ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಮೂಲಕ ಬಾಲಿವುಡ್‌ನಲ್ಲಿ ಮೊದಲ ಎಂಟ್ರಿ ಕೊಡುತ್ತಿದ್ದಾರೆ.

ರಶ್ಮಿಕಾಗೆ ದುಲ್ಖರ್ ಸಲ್ಮಾನ್ ಹಾಗೂ ಸೂರ್ಯನ ಜೊತೆಯೂ ನಟಿಸಲಿದ್ದಾರೆ. ಸಿನಿಮಾದಲ್ಲಿ ನಟಿ ಲೀಡಿಂಗ್ ಲೇಡಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ನಟಿ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಸೆಟ್‌ಗೂ ಜಾಯಿನ್ ಆಗಲಿದ್ದಾರೆ.  ಜನವರಿಯಲ್ಲಿ ಸಿನಿಮಾ ಶೂಟಿಂಗ್ ಶುರುವಾಗಲಿದೆ ಎನ್ನಲಾಗಿದೆ.