ಸಿಂಪಲ್ ಆಗಿ ಕಾಣಿಸಿಕೊಂಡ ರಾಮ್ ಚರಣ್ ಧರಿಸಿದ ಜಾಕೆಟ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!
ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡ ನಟ ರಾಮ್ ಚರಣ್ ಧರಿಸಿದ್ದ ಜಾಕೆಟ್ ನೆಟ್ಟಿಗರ ಗಮನ ಸೆಳೆದಿದೆ. ಇದರ ಬೆಲೆ ಎಷ್ಟು ಗೊತ್ತಾ?
ಹುಟ್ಟುತ್ತಲೇ ಸಿಲ್ವರ್ ಸ್ಪೂನ್ ಇಟ್ಕೊಂಡು ನಟ ರಾಮ್ ಚರಣ್‌ಗೆ ಮಾಡ್ರನ್ ಫ್ಯಾಷನ್ ಬಗ್ಗೆ ಸಖತ್ ಕ್ರೇಜಿದೆ. ಸೀಸನ್‌ಗೆ ತಕ್ಕಂತೆ ತಮ್ಮ ಸ್ಟೈಲಿಂಗ್ ಬದಲಾಯಿಸುತ್ತಾರೆ, ದುಬಾರಿ ಆದರೂ ಚಿಂತೆ ಇಲ್ಲ, ಆದರೆ ಡಿಸೈನರ್ ಉಡುಪುಗಳನ್ನ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅಪ್ಪ-ಚಿಕ್ಕಪ್ಪ ಸೇರಿದಂತೆ ಇಡೀ ಕುಟುಂಬಸ್ಥರು ಸದಾ ಲೈಮ್ ಲೈಟ್‌ನಲ್ಲಿರುತ್ತಾರೆ ಅಂದ್ಮೇಲೆ ಇವೆಲ್ಲಾ ಯಾವ ಮಹಾ ಎಂದು ನೆಟ್ಟಿಗರು ಆಗಾಗ ಗೇಲಿ ಮಾಡುತ್ತಾರೆ.
ಹೌದು! ಬಿಗ್ ಬಾಸ್ ಸೀಸನ್ 5 ವೀಕೆಂಡ್ ಕಾರ್ಯಕ್ರಮದಲ್ಲಿ ನಟ ರಾಜ್ ಚರಣ್ ಕಾಣಿಸಿಕೊಂಡಿದ್ದಾರೆ. ಡಿಸ್ನಿ-ಹಾಟ್‌ಸ್ಟಾರ್ ತೆಲುಗು ಬ್ರ್ಯಾಂಡ್ ಅಂಬಾಸಿಡರ್ ಆಗಿ ರಾಮ್ ಚರಣ್ ಆಯ್ಕೆ ಆಗಿದ್ದು, ಅಫೀಶಿಯಲ್ ಆಗಿ ಬಿಗ್ ಬಾಸ್ ವೇದಿಕೆ ಮೇಲೆ ಅನೌನ್ಸ್ ಮಾಡಿದ್ದಾರೆ. ಕೆಲವು ಕ್ಷಣಗಳ ಕಾಲ ವೇದಿಕೆ ಮೇಲೆ ನಿರೂಪಕ ನಾಗಾರ್ಜುನ್ ಜೊತೆ ಸಮಯ ಕಳೆದಿದ್ದಾರೆ. ನಾಗಾರ್ಜುನ್‌ಗಿಂತ ರಾಮ್ ಚರಣ್ ಧರಿಸಿದ ಜಾಕೆಟ್ ಎಲ್ಲರ ಗಮನ ಸೆಳೆದಿದೆ.
ರಾಮ್ ಚರಣ್ ಡೆನಿಮ್ ಜೀನ್ಸ್, ಬ್ಲಾಕ್ ಟೀ-ಶರ್ಟ್ ಅದರ ಮೇಲೆ ಡೆನಿಮ್ ಚಾಜೆಟ್ ಧರಿಸಿದ್ದರು. ಈ ಜಾಕೆಟ್ ಬೆಲೆ ಬರೋಬ್ಬರಿ 1.30 ಲಕ್ಷ ರೂ. ಜೋಕರ್ ಡೆನಿಮ್ ಜಾಕೆಟ್ ಅನ್ನು ಫ್ಯಾಶನ್ ಬ್ರಾಂಡ್ ಡಸ್ಟ್ ಆಫ್ ಗಾರ್ಡ್ಸ್ ತಯಾರಿಸಿದೆ. ಕೇವಲ ಜಾಕೆಟ್‌ಗೆ ಇಷ್ಟೊಂದಾ ಎಂದು ಕೆಲವು ಶಾಕ್ ಆದರೆ, ಇನ್ನೂ ಕೆಲವರು ಇಲ್ಲ ಕಾರ್ಯಕ್ರಮ ಆದ ಮೇಲೆ ಇದನ್ನು ಬ್ರ್ಯಾಂಡ್ ಅವರಿಗೆ ನೀಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.
4 ಕೋಟಿಯ ಮರ್ಸಿಡಿಸ್ ಮೇಬ್ಯಾಚ್ ಕಾರು ಖರೀದಿಸಿದ ರಾಮ್ ಚರಣ್!ಇನ್ನೂ ಕೆಲವು ದಿನಗಳ ಹಿಂದೆ ರಾಮ್ ಚರಣ್ 4 ಕೋಟಿ ರೂಪಾಯಿ ಬೆಲೆಯ ಮರ್ಸಿಡಿಸ್ ಮೇಬ್ಯಾಚ್ ಜಿಎಲ್‌ಎಸ್ 600 ಕಾರನ್ನು ಖರೀದಿಸಿದ್ದಾರೆ. ಭಾರತದಲ್ಲಿ ಇದೇ ಮೊದಲ ಕಸ್ಟಮೈಸ್ಟ್ ವರ್ಷನ್ ಜಿಎಲ್‌ಎಸ್ ಕಾರು ಎನ್ನಲಾಗಿದೆ.