Asianet Suvarna News Asianet Suvarna News

ಖ್ಯಾತ ಹಾಸ್ಯ ನಟನ ಆಸ್ತಿ ಜಪ್ತಿ ಮಾಡಿಕೊಂಡ ಬ್ಯಾಂಕ್; 11 ಕೋಟಿ ಸಾಲದಲ್ಲಿ ಸಿಲುಕಿಕೊಂಡ ರಾಜ್‌!

ಸಂಕಷ್ಟದಲ್ಲಿ ಸಿಲುಕಿಕೊಂಡ ಹಾಸ್ಯ ನಟ. 3 ಕೋಟಿ ಸಾಲದಿಂದ 11 ಕೋಟಿ ಸಾಲ ಮಾಡಿಕೊಂಡ ರಾಜ್.....

Actor Rajpal Yadav property sealed by bank due to unpaid loan of 11 crore vcs
Author
First Published Aug 15, 2024, 12:52 PM IST | Last Updated Aug 15, 2024, 12:56 PM IST

ಸಿನಿಮಾದಲ್ಲಿ ಸ್ಟಾರ್ ನಟರು ಎಷ್ಟು ಜನಪ್ರಿಯತೆ ಪಡೆಯುತ್ತಾರೆ ಹಾಸ್ಯ ನಟರು ಕೂಡ ಅಷ್ಟೇ ನೇಮ್ ಆಂಡ್ ಫೇಮ್ ಪಡೆಯುತ್ತಾರೆ. ಸಂಭಾವನೆ ವಿಚಾರದಲ್ಲಿ ಸಣ್ಣ ಪುಟ್ಟ ಏರು ಪೇರು ಇರುತ್ತದೆ ಆದರೆ ಒಂದೇ ತಿಂಗಳಿನಲ್ಲಿ ಮೂರ್ನಾಲ್ಕು ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡ ಬ್ಯಾಂಕ್ ಅಕೌಂಟ್ ಫುಲ್ ಮಾಡಿಕೊಳ್ಳುವಷ್ಟು ಕೆಲಸ ಹಾಸ್ಯ ನಟರಿಗೆ ಇರುತ್ತದೆ. ಹಿಂದಿ ಚಿತ್ರರಂಗದ ಖ್ಯಾತ ಹಾಸ್ಯ ನಟ ರಾಜ್‌ಪಾಲ್‌ ಯಾದವ್ ಈಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. 3 ಕೋಟಿ ಸಾಲ ಇದು ದೊಡ್ಡದಾಗಿ 11 ಕೋಟಿ ಮುಟ್ಟಿದೆ ಎನ್ನಲಾಗಿದೆ.

ಹೌದು! ಸೆಂಟ್ರಲ್ ಬ್ಯಾಂಕ್ ಆಫ್‌ ಇಂಡಿಯಾದವರು ರಾಜ್‌ಪಾಲ್‌ ಶಾಜಹಾನ್‌ಪುರದಲ್ಲಿ ಹೊಂದಿರುವ ಅಷ್ಟೂ ಆಸ್ತಿಯನ್ನು ಸೀಲ್ ಮಾಡಿದ್ದಾರೆ. ಶಾಜಹಾನ್‌ಪುರದಲ್ಲಿ ಇರುವ ಸೇತ್ ಎನ್‌ಕ್ಲೇವ್‌ ಕಾಲೋನಿಯಲ್ಲಿ ಮಾಡಿರುವ ನಿರ್ಮಾಣ ಸಂಸ್ಥೆಗೆ ಎಂದು 3 ಕೋಟಿ ರೂಪಾಯಿ ಸಾಲ ಮಾಡಿದ್ದರು. ಸಾಲ ತೀರಿಸಲು ಆಗದೆ ಬಡ್ಡಿಗೆ ಬಡ್ಡಿ ಬೆಳೆದು 11 ಕೋಟಿ ರೂಪಾಯಿ ಆಗಿದ್ದರೂ ಒಂದು ರೂಪಾಯಿ ಹಣವನ್ನು ನೀಡಿಲ್ಲ ಎಂದು ಈ ಆಕ್ಷನ್ ತೆಗೆದುಕೊಂಡಿದ್ದಾರೆ.

ವರಮಹಾಲಕ್ಷ್ಮಿ ಹಬ್ಬದಂದು ಮನೆ ಮೆನೆಗೂ ಬರ್ತಿದ್ದಾರೆ ವಿಜಯ್ ಸೂರ್ಯ; ದೃಷ್ಟಿಬೊಟ್ಟು ಇಟ್ಕೊಳ್ಳಕ್ಕೆ ರೆಡಿನಾ?

ಶ್ರೀ ನೌರಂಗ್ ಗೋದಾವರಿ ಎನ್‌ಟರ್ಟೈನ್ಮೆಂಟ್‌ ಲಿಮಿಟೆಡ್‌ ಎನ್ನು ನಿರ್ಮಾಣ ಸಂಸ್ಥೆ ಹೊಂದಿದ್ದ ರಾಜ್‌ಪಾಲ್ ಪ್ರತಿಯೊಂದು ಆಸ್ತಿಯನ್ನು ಪೋಷಕರ ಹೆಸರಿನಲ್ಲಿ ಮಾಡಿದ್ದರು. ಈ ನಿರ್ಮಾಣ ಸಂಸ್ಥೆಯನ್ನು ಸದ್ಯ ರಾಜ್‌ಪಾಲ್‌ ಪತ್ನಿ ರಾಧಾ ಯಾದವ್ ನಡೆಸಿಕೊಂಡು ಹೋಗುತ್ತಿದ್ದರು. ದಿವಂಗತ ನಟಿ ಓಂ ಪೂರಿ ಮತ್ತು ರಾಜ್‌ಪಾಲ್ ಯಾದವ್‌ ನಟ್ಟಿಗೆ ನಟಿಸಿರವ ಸಿನಿಮಾವನ್ನು ರಾಧಾ ಯಾದವ್ ನಿರ್ಮಾಣ ಮಾಡಿದ್ದರು.

ಕಾರನಲ್ಲಿ ಮಲಗಿದ್ದ ಬಿಗ್ ಬಾಸ್ ಕೃಷಿ ತಾಪಂಡ ; ಉರುಳಾಡಬೇಡಿ ಮೇಡಂ ಹುಡುಗ್ರು ಇಣುಕಿ ನೋಡ್ತಾರೆ ಎಂದ ನೆಟ್ಟಿಗರು!

ಸುಮಾರು 25 ವರ್ಷಗಳಿಂದ ಹಿಂದಿ ಸಿನಿಮಾಗಳಲ್ಲಿ ರಾಜ್‌ಪಾಲ್‌ ನಟಿಸುತ್ತಿದ್ದಾರೆ. ಅನೇಕ ಸಿನಿಮಾಗಳಿಂದ ಅತ್ಯುತ್ತಮ ನಟ ಎಂಬ ಅವಾರ್ಡ್‌ ಕೂ ಪಡೆದುಕೊಂಡಿದ್ದಾರೆ.  ಬಾಲಿವುಡ್‌ನ ದೊಡ್ಡ ನಿರ್ಮಾಣ ಸಂಸ್ಥೆ, ಸ್ಟಾರ್ ನಟ-ನಟಿಯರ ಜೊತೆ ರಾಜ್‌ಪಾಲ್ ಕೆಲಸ ಮಾಡಿದ್ದಾರೆ. ಒಂದೆರಡು ತೆಲುಗಗು ಮತ್ತು ಮರಾಠಿ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಹಾಸ್ಯ ನಟ ಜಾಲಿ ಲಿವರ್‌ ನಂತರ ಯಶಸ್ಸು ಕಂಡ ಕಾಮಿಡಿಯನ್ ಅಂದ್ರೆ ರಾಜ್‌ಪಾಲ್ ಯಾದವ್. 

Latest Videos
Follow Us:
Download App:
  • android
  • ios