56 ವರ್ಷದ ಮಲಯಾಳಂ ಹಿರಿಯ ನಟಿ ಚಿತ್ರಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 

ದಕ್ಷಿಣ ಭಾರತ ಚಿತ್ರರಂಗದ ಹೆಸರಾಂತ ನಟಿ ಚಿತ್ರಾ ಇಂದು ಬೆಳಗೆ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದಿರುವ ಚಿತ್ರಾ ತಮಿಳು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಾ ಇನ್ನಿಲ್ಲ ಎಂಬ ವಿಚಾರ ತಿಳಿದು ಅಭಿಮಾನಿಗಳು ಹಾಗೂ ಸಿನಿ ಸ್ನೇಹಿತರು ಸಂತಾಪ ಸೂಚಿಸಿದ್ದಾರೆ. 

1991ರಲ್ಲಿ ತೆರೆ ಕಂಡ 'ಅದ್ವೈತಮ್' ಸಿನಿಮಾ ಚಿತ್ರಾ ಸಿನಿ ಜರ್ನಿಗೆ ದೊಡ್ಡ ಟರ್ನಿಂಗ್ ಪಾಯಿಂಟ್ ನೀಡಿತ್ತು. ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಚಿತ್ರಾ ತಮ್ಮ ಮೊದಲ ಚಿತ್ರದಲ್ಲೇ ಪ್ರೇಮ್ ನಜೀರ್ ಮತ್ತು ಮೋಹನ್ ಲಾಲ್ ಜೊತೆ ಅಭಿನಯಿಸಿದ್ದಾರೆ. 

ಹಿರಿಯ ನಿರ್ಮಾಪಕ ವಿಜಯ್‌ ಕುಮಾರ್‌ ನಿಧನ!

ಖಾಸಗಿ ಕೂದಲ ಎಣ್ಣೆ ಜಾಹೀರಾತಿನಲ್ಲಿ ಕಾಣಿಸಿಕೊಂಡ ನಂತರ ಚಿತ್ರಾ ಅವರಿಗೆ ಚಿತ್ರರಂಗದಲ್ಲಿ 'ನಲ್ಲೆಣ್ಣೈ ಚಿತ್ರಾ' ಎಂಬ ಅಡ್ಡ ಹೆಸರು ಬಂದಿತ್ತು. ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಚಿತ್ರಾ 10ನೇ ತರಗತಿವರೆಗೂ ವ್ಯಾಸಂಗ ಮಾಡಿದ್ದಾರೆ. 1990ರಲ್ಲಿ ವಿಜಯರಾಘವನ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮದುವೆ ನಂತರ ಚಿತ್ರಾ ಬಣ್ಣದ ಲೋಕದಿಂದ ರಿಟೈರ್‌ಮೆಂಟ್‌ ಪಡೆದು ಫ್ಯಾಮಿಲಿ ಜೊತೆ ಚೆನ್ನೈನ ನೆಲೆಸಿದ್ದರು.