ಕಾಲಿವುಡ್‌ ಚಿತ್ರರಂಗದ ಹಿರಿಯ ನಟ ರಾಧಾ ರವಿ ಹಿಂದೊಮ್ಮೆ ತಮಿಳು ಲೇಡಿ ಸೂಪರ್ ಸ್ಟಾರ್ ನಯನತಾರಾ ಬಗ್ಗೆ ಅಸಭ್ಯವಾಗಿ ಮಾತನಾಡಿದ ಕಾರಣ ಡಿಎಂಕೆ ಪಕ್ಷದಿಂದ ಹೊರ ಕಳುಹಿಸಲಾಗಿತ್ತು. ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ರಾಧಾ ರವಿ ಇದೀಗ ಮತ್ತೊಮ್ಮೆ ನಯನಾತಾರಾ ಬಗ್ಗೆ ಮಾತನಾಡಿ, ಡಿಎಂಕೆ ಪಕ್ಷದೊಂದಿಗೆ ನಟಿಗಿರುವ ಲಿಂಕ್ ಬಗ್ಗೆ ನೀಡಿರುವ ಹೇಳಿಕೆ ಎಲ್ಲೆಡೆ ವೈರಲ್ ಆಗುತ್ತಿದೆ. 

ನೆಟ್ರಿಕಣ್‌ನಲ್ಲಿ ನಯನತಾರಾ ನೋ ಮೇಕಪ್ ಲುಕ್‌ಗೆ ಫ್ಯಾನ್ಸ್ ಫಿದಾ 

'ನಾನು ನಯನತಾರಾ ಬಗ್ಗೆ ಮಾತನಾಡಿದೆ ಎಂದು ಪಕ್ಷದಿಂದ ಅಮಾನತು ಮಾಡಲು ಹೊರಟಿದ್ದರು. ನೀವೇನು ಕಳಿಸುವುದು ಎಂದು ನಾನೇ ಪಕ್ಷ ಬಿಟ್ಟು ಬಂದೆ. ಆದರೆ ಡಿಎಂಕೆಗೆ ನಾನು ಕೇಳುವುದೇನೆಂದರೆ ನಯನತಾರಾ ಯಾರು? ನಿಮಗೂ ಆಕೆಗೂ ಏನು ಸಂಬಂಧ? ಅವಳ ಬಗ್ಗೆ ಮಾತನಾಡಿದರೆ ನಿಮಗೇನು ಸಮಸ್ಯೆ?  ಉದಯನಿಧಿಗೂ, ನಯನತಾರಾಗೂ ಸಂಬಂಧವಿದ್ದರೆ ನಾನೇನು ಮಾಡಲು ಆಗುತ್ತದೆ?' ಎಂದಿದ್ದಾರೆ ರಾಧಾ ರವಿ.

ರಾಧಾ ರವಿ ಚಿತ್ರರಂಗದವರ ಬಗ್ಗೆ ಮಾತನಾಡಿರುವುದು ಇದೇನು ಮೊದಲಲ್ಲ. ಈ ಹಿಂದೆ ಕಮಲ್ ಹಾಸನ್‌ ಖಾಸಗಿ ಜೀವನದ ಬಗ್ಗೆಯೂ ಮಾತನಾಡಿದ್ದರು. 'ಮೂರು ಹೆಂಗಸರನ್ನು ಕಾಪಾಡಿಕೊಳ್ಳಲಾಗದ ಅವನು ಜನರನ್ನು ಹೇಗೆ ಕಾಪಾಡಿಯಾನು?' ಎಂದು ಕಮಲ್ ಬಗ್ಗೆ ಹೇಳಿದ್ದರು. 

ಪ್ರಚಾರಕ್ಕೆ ಬರಲ್ಲವಂತೆ, ಆದ್ರೆ ಅವಾರ್ಡ್‌ ಬೇಕು; ನಯನಾತಾರಾ ವಿರುದ್ಧ ಆಕ್ರೋಶ! 

ಇದೀಗ ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ರಾಧಾ ರವಿ ಚಿತ್ರದ ನಟ, ನಟಿಯರ ಬಗ್ಗೆ ಮಾತನಾಡಿ, ತಮ್ಮ ಜನರ ಗಮನ ಸೆಳೆದುಕೊಳ್ಳುತ್ತಿದ್ದಾರೆ. ಇದೇ ಏಪ್ರಿಲ್ 6ರಂದು ತಮಿಳುನಾಡಿನಲ್ಲಿ ಮತದಾನ ನಡೆಯಲಿದ್ದು, ಮೇ 2ಕ್ಕೆ ಮತ ಎಣಿಕೆ ನಡೆಯಲಿದೆ.