ಡಾರ್ಲಿಂಗ್‌ ಪ್ರಭಾಸ್‌, ಅನುಷ್ಕಾ ಶೆಟ್ಟಿಗಳ ಮಧ್ಯೆ ಲವ್‌ ಸ್ಟೋರಿ ನಡೆಯುತ್ತಿದೆ ಎಂಬುದು ಎಲ್ಲರೂ ಹೇಳುವ ಮಾತು. ಇದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಆದರೆ ನಟಿ ಅನುಷ್ಕಾ ಶೆಟ್ಟಿ ಚುಡಾಯಿಸಿದ್ದಕ್ಕೆ ನಟ ನಟ ಪ್ರಭಾಸ್‌ ಅವರಿಗೆ ಶೂಟಿಂಗ್ ಸೆಟ್‌ನಲ್ಲಿಯೇ ಕಣ್ಣೀರಿಡುವ ಪರಿಸ್ಥಿತಿ ಎದುರಾಗಿತ್ತಂತೆ.

ಭಾರತ ಚಿತ್ರರಂಗದ ಬಹು ಬೇಡಿಕೆ ನಟ ಪ್ರಭಾಸ್‌ ಹಾಗೂ ಅನುಷ್ಕಾ ಶೆಟ್ಟಿ ಒಟ್ಟಿಗೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. `ಬಿಲ್ಲಾ` ಸಿನಿಮಾದ ಮೂಲಕ ಇವರಿಬ್ಬರ ಜೋಡಿ ಸಿನಿ ಜರ್ನಿ ಆರಂಭವಾಯಿತು. ಈ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಒಂದೆಡೆ ಗೆಳತಿಯಾಗಿ, ಇನ್ನೊಂದೆಡೆ ನೆಗೆಟಿವ್‌ ಪಾತ್ರದಲ್ಲಿ ಅನುಷ್ಕಾ ಮಿಂಚಿದ್ದರು. ಈ ಸಿನಿಮಾ ತಕ್ಕಮಟ್ಟಿಗೆ ಪ್ರದರ್ಶನ ಕಂಡಿತು. ಆದರೆ ನಂತರ ಬಂದ 'ಮಿರ್ಚಿ' ಸಿನಿಮಾ ಉತ್ತಮ ಯಶಸ್ಸು ಕಂಡಿತು. ಈ ಸಿನಿಮಾದಲ್ಲಿ ಈ ಜೋಡಿಯನ್ನು ನೋಡಿದ ಪ್ರೇಕ್ಷಕರು ಇಬ್ಬರೂ ಸೂಕ್ತ ಜೋಡಿ ಎಂದು ಬಣ್ಣಿಸಿದರು. ಇಬ್ಬರ ಎತ್ತರ, ಪರ್ಸನಾಲಿಟಿ ಒಂದೇ ರೀತಿ ಇರುವುದರಿಂದ ಬೆಸ್ಟ್‌ ಪೇರ್‌ ಎಂದು ಕರೆಯಲಾಗುತ್ತಿತ್ತು. ಇದಲ್ಲದೆ ಇಬ್ಬರ ನಡುವೆ ಉತ್ತಮ ಸ್ನೇಹ ಇದ್ದುದರಿಂದ ಹಲವು ವದಂತಿಗಳು ಹುಟ್ಟಿಕೊಂಡವು.

ಅನುಷ್ಕಾ ಪ್ರಭಾಸ್ ಮದುವೆಯ ಗಾಸಿಪ್: ಪ್ರಭಾಸ್‌, ಅನುಷ್ಕಾ ಸತತ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದರಿಂದ ಇಬ್ಬರ ನಡುವೆ ಪ್ರೀತಿ ಇದೆ ಎಂಬ ಗಾಸಿಪ್ ಶುರುವಾಯಿತು. ಇಬ್ಬರೂ ಆಪ್ತವಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಕೂಡ ಈ ವದಂತಿಗೆ ಪುಷ್ಠಿ ನೀಡಿತ್ತು. ಪ್ರಭಾಸ್‌ ಅನುಷ್ಕಾ ಬಗ್ಗೆ ಮಾತನಾಡುವಾಗ ಆಕೆಯನ್ನು ಹಾಡಿ ಹೊಗಳುತ್ತಿದ್ದರು. ತನಗೆ ಅವರು ಬೆಸ್ಟ್‌ ಕೋ-ಸ್ಟಾರ್‌ ಎಂದು ಹಲವು ಬಾರಿ ಹೇಳಿದ್ದಾರೆ. ಅವರ ಸೌಂದರ್ಯದ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ. ಇದೆಲ್ಲವನ್ನೂ ಕಾರಣವಾಗಿಟ್ಟುಕೊಂಡು ಇಬ್ಬರೂ ಡೇಟಿಂಗ್‌ನಲ್ಲಿದ್ದಾರೆ ಎಂಬ ಚರ್ಚೆ ಶುರುವಾಯಿತು. ಇದರ ಬಗ್ಗೆ ಇಬ್ಬರಿಂದ ಯಾವುದೇ ಸ್ಪಷ್ಟನೆ ಬರಲಿಲ್ಲ. ಸ್ಪಷ್ಟವಾಗಿ ನಿರಾಕರಿಸಿಲ್ಲ.

ಇಬ್ಬರೂ ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಎಂದು ಹಲವು ಬಾರಿ ಸುದ್ದಿಗಳು ಹರಿದಾಡಿದವು. ಆದರೆ ಇಬ್ಬರೂ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾದರು. ಈ ನಡುವೆ ಇವರಿಬ್ಬರಿಗೆ ಸಂಬಂಧಿಸಿದ ವಿಷಯವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಪ್ರಭಾಸ್‌, ಅನುಷ್ಕಾ ಅವರ ಹಳೆಯ ಸಂಭಾಷಣೆ ವೈರಲ್‌ ಆಗುತ್ತಿದೆ. ಪ್ರಭಾಸ್‌ ಅವರನ್ನು ಅನುಷ್ಕಾ ಕಾಲೆಳೆಯುತ್ತಿರುವುದು ಇಲ್ಲಿ ಹೈಲೈಟ್‌ ಆಗಿದೆ.

ಪ್ರಭಾಸ್‌, ಅನುಷ್ಕಾ ಜೋಡಿಯಾಗಿ, ಪ್ರೇಮಿಗಳಾಗಿ ತೆರೆಯ ಮೇಲೆ ಮಿಂಚಿದ್ದಾರೆ. ಅದ್ಭುತ ಕೆಮಿಸ್ಟ್ರಿ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಹೀಗಾಗಿಯೇ ಇವರನ್ನು ಬೆಸ್ಟ್‌ ಜೋಡಿ ಎನ್ನುತ್ತಾರೆ. ಆದರೆ, ಸೆಟ್‌ನಲ್ಲಿ ಅನುಷ್ಕಾ, ಪ್ರಭಾಸ್‌ರನ್ನು ಕಾಲೆಳೆಯುತ್ತಿದ್ದರಂತೆ. ಎಲ್ಲರ ಮುಂದೆ ಟೀಸ್‌ ಮಾಡುತ್ತಿದ್ದರಂತೆ. ಡಾರ್ಲಿಂಗ್‌ ಪ್ರಭಾಸ್ ತಲೆ ಎತ್ತಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತಂತೆ. ಪ್ರಭಾಸ್‌ ಅವರನ್ನು ಅನುಷ್ಕಾ.. ನನ್ನ ಮಗ ಎಂದು ಕರೆಯುತ್ತಿದ್ದರಂತೆ. ಪ್ರೇಮಿಯಾಗಿ ನಟಿಸುತ್ತಿದ್ದ ಪ್ರಭಾಸ್‌ರನ್ನು ಮಗ ಎಂದು ಕರೆಯುವುದೇಕೆ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಅದರಲ್ಲೂ ಒಂದು ಲಾಜಿಕ್‌ ಇದೆ.

ನಟಿ ಅನುಷ್ಕಾ, ಪ್ರಭಾಸ್‌ 'ಬಾಹುಬಲಿ' ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರ ಜೊತೆಗೆ ತಾಯಿ-ಮಗನಾಗಿ ನಟಿಸಿದ್ದಾರೆ. ಮೊದಲಿಗೆ ಅಮರೇಂದ್ರ ಬಾಹುಬಲಿಯಾಗಿ ಕಾಣಿಸಿಕೊಳ್ಳುವ ಪ್ರಭಾಸ್‌ ಮಹಿಷ್ಮತಿ ಸಾಮ್ರಾಜ್ಯದ ಯುವರಾಜನಾಗಿರುತ್ತಾರೆ. ಅವರನ್ನು ಪ್ರೀತಿಸಿ ಮದುವೆಯಾಗುವ ದೇವಸೇನೆಯಾಗಿ ಅನುಷ್ಕಾ ನಟಿಸಿದ್ದಾರೆ. ಆದರೆ, ಇವರಿಬ್ಬರಿಗೂ ಮಗನೊಬ್ಬ ಜನಿಸುತ್ತಾನೆ. ಅವನೇ ಮಹೇಂದ್ರ ಬಾಹುಬಲಿ. ಹೀಗೆ ಎರಡನೇ ಪಾತ್ರದಲ್ಲಿ ಅನುಷ್ಕಾಗೆ ಪ್ರಭಾಸ್ ಮಗನಾಗಿ ಕಾಣಿಸಿಕೊಳ್ಳುತ್ತಾರೆ. ಇದನ್ನೇ ನೆಪವಾಗಿಟ್ಟುಕೊಂಡು ಅನುಷ್ಕಾ ಸೆಟ್‌ನಲ್ಲಿ ಡಾರ್ಲಿಂಗ್‌ ಪ್ರಭಾಸ್‌ನನ್ನುಮಗ ಎಂದು ಕರೆಯುತ್ತಾ ಕಾಲೆಳೆಯುತ್ತಿದ್ದರಂತೆ. ಪ್ರಭಾಸ್‌ ಕಾಣಿಸದಿದ್ದರೆ ನನ್ನ ಮಗ ಎಲ್ಲಿ ಎಂದು ಕರೆಯುತ್ತಿದ್ದರಂತೆ. ಇದರಿಂದ ಡಾರ್ಲಿಂಗ್‌ ನಾಚಿಕೆಪಡುತ್ತಿದ್ದರಂತೆ. ಒಂದು ಸಂದರ್ಶನದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. 'ಬಾಹುಬಲಿ' ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ನೀಡಿದ ಪ್ರಮೋಷನ್‌ ಸಂದರ್ಶನದಲ್ಲಿ ಈ ವಿಷಯವನ್ನು ಹೇಳಿದ್ದರು. ಇದೀಗ ಅದು ವೈರಲ್‌ ಆಗುತ್ತಿದೆ.