"ರಾಜಾ ಸಾಬ್" ಚಿತ್ರೀಕರಣದ ವೇಳೆ ಪ್ರಭಾಸ್ ಗಾಯಗೊಂಡಿದ್ದರಿಂದ ಜಪಾನ್‌ನಲ್ಲಿ "ಕಲ್ಕಿ 2898 AD" ಪ್ರಚಾರಕ್ಕೆ ಗೈರಾಗಲಿದ್ದಾರೆ. ಪಾದ ಉಳುಕಿದ ಪರಿಣಾಮ ಚಿಕಿತ್ಸೆ ಮತ್ತು ವಿಶ್ರಾಂತಿ ಅಗತ್ಯವಿದ್ದು, ಪ್ರಯಾಣಿಸಲು ಸಾಧ್ಯವಿಲ್ಲ. ನಿರ್ದೇಶಕ ನಾಗ್ ಅಶ್ವಿನ್ ಸೇರಿದಂತೆ ಚಿತ್ರತಂಡದ ಇತರ ಸದಸ್ಯರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ.
ಪ್ಯಾನ್ ಇಂಡಿಯಾ ನಟ ಪ್ರಭಾಸ್ ಅವರು ಶೂಟಿಂಗ್ ವೇಳೆ ಅವಘಡಕ್ಕೀಡಾಗಿದ್ದಾರೆ. ತನ್ನ ಮುಂಬರುವ ಹಾರರ್-ಕಾಮಿಡಿ ದಿ ರಾಜಾ ಸಾಬ್‌ಗಾಗಿ ಆಕ್ಷನ್ ಸೀಕ್ವೆನ್ಸ್‌ಗಾಗಿ ಚಿತ್ರೀಕರಣ ಮಾಡುವಾಗ ಗಂಭೀರ ಗಾಯ ಮಾಡಿಕೊಂಡಿದ್ದು,ಪರಿಣಾಮ ಅವರಿಗೆ ಚಿಕಿತ್ಸೆ ಮತ್ತು ವಿಶ್ರಾಂತಿ ಅಗತ್ಯವಿದೆ. ಹೀಗಾಗಿ ಜಪಾನ್‌ನಲ್ಲಿ ಮುಂದಿನ ತಿಂಗಳ 3ನೇ ತಾರೀಕು ಬಿಡುಗಡೆಯಾಗಲಿರುವ ಕಲ್ಕಿ ಚಿತ್ರದ ಪ್ರಚಾರಕ್ಕೆ ಹಾಜರಾಗುವುದಿಲ್ಲ ಎಂದು ಅಲ್ಲಿನ ಫ್ಯಾನ್‌ಗಳಲ್ಲಿ ಕ್ಷಮೆ ಕೇಳಿ ಸ್ಪಷ್ಟಪಡಿಸಿದ್ದಾರೆ.
ಮುಂಬರುವ ಹಾರರ್-ಕಾಮಿಡಿ ಮಾರುತಿ ನಿರ್ದೇಶನದ ದಿ ರಾಜಾ ಸಾಬ್‌ಗಾಗಿ ಆಕ್ಷನ್ ಸೀಕ್ವೆನ್ಸ್ ಗಾಗಿ ಶೂಟಿಂಗ್‌ನಲ್ಲಿರುವಾಗ ಅವಘಡ ಸಂಭವಿಸಿ ಪಾದ ಉಳುಕಿದೆ. ಗಾಯ ಗಂಭೀರವಾಗಿರುವ ಕಾರಣ ಪ್ರಯಾಣಿಸಲು ಮತ್ತು ಕಲ್ಕಿ ಚಿತ್ರದ ಪ್ರಚಾರಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ನಿರ್ದೇಶಕ ನಾಗ್ ಅಶ್ವಿನ್ ಸೇರಿದಂತೆ ಇತರರು ಪ್ರಚಾರ ಚಟುವಟಿಕೆಗಳಿಗೆ ಇರಲಿದ್ದಾರೆ.
ತೆಲುಗು ಬಿಗ್‌ಬಾಸ್ ಗೆದ್ದ ಕನ್ನಡಿಗ ನಿಖಿಲ್‌ಗೆ ಸಿಕ್ಕಿದ್ದು 55 ಲಕ್ಷ ಅಲ್ಲ 1 ಕೋಟಿ ರೂ!
ಪ್ರಭಾಸ್ ಸಹಿತ ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮತ್ತು ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕಲ್ಕಿ 2898 AD ಅನ್ನು ವೈಜಯಂತಿ ಮೂವೀಸ್ ನಿರ್ಮಿಸಿದೆ. ಕಬಾಟಾ ಕೀಜೊ ಒಡೆತನದ ವಿತರಣಾ ಕಂಪನಿಯಾದ ಟ್ವಿನ್ ಸಹಯೋಗದೊಂದಿಗೆ ಜಪಾನ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಪ್ರೊಡಕ್ಷನ್ ಹೌಸ್ ಯೋಜನೆ ಹಾಕಿಕೊಂಡಿದೆ. ಟ್ವಿನ್ ಈ ವರ್ಷದ ಆರಂಭದಲ್ಲಿ ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಅನ್ನು ಸಹ ಬಿಡುಗಡೆ ಮಾಡಿತ್ತು.
7 ರಾಜ್ಯಗಳಲ್ಲಿ ಚಳಿಗಾಳಿಯ ಎಚ್ಚರಿಕೆ, ಡಿಸೆಂಬರ್ 17 ರಿಂದ ಚಳಿ ಹೆಚ್ಚಳ
ಈ ಸಿನಿಮಾಗಳ ಜೊತೆಗೆ ಪ್ರಭಾಸ್ ಕಲ್ಕಿ 2, ಸ್ಪಿರಿಟ್, ಸಲಾರ್ 2 ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದರೊಂದಿಗೆ ಹನು ರಾಘವಪುಡಿ ನಿರ್ದೇಶನದಲ್ಲಿ ಕೂಡ ಸಿನೆಮಾವೊಂದನ್ನು ಮಾಡುತ್ತಿದ್ದಾರೆ.
