ತೆಲುಗು ಬಿಗ್‌ಬಾಸ್ ಗೆದ್ದ ಕನ್ನಡಿಗ ನಿಖಿಲ್‌ಗೆ ಸಿಕ್ಕಿದ್ದು 55 ಲಕ್ಷ ಅಲ್ಲ 1 ಕೋಟಿ ರೂ!
ಕನ್ನಡಿಗ ನಿಖಿಲ್ ಮಳಿಯಕ್ಕಲ್ ಬಿಗ್ ಬಾಸ್ ತೆಲುಗು ಸೀಸನ್ 8ರ ವಿಜೇತರಾಗಿ, 55 ಲಕ್ಷ ರೂ. ಪ್ರೈಜ್ ಮನಿ ಜೊತೆಗೆ ಕಾರು ಬಹುಮಾನ ಗೆದ್ದಿದ್ದಾರೆ. ಒಟ್ಟಾರೆ ಒಂದು ಕೋಟಿ ರೂ. ಗೆದ್ದ ನಿಖಿಲ್, ತೆರಿಗೆ ಕಡಿತದ ನಂತರ ಸುಮಾರು 38 ಲಕ್ಷ ರೂ. ಪಡೆಯಲಿದ್ದಾರೆ.
ಕನ್ನಡಿಗ ನಿಖಿಲ್ ಮಳಿಯಕ್ಕಲ್ ಬಿಗ್ ಬಾಸ್ ತೆಲುಗು ಸೀಸನ್ 8ರ ವಿಜೇತರಾಗಿ ಇತಿಹಾಸ ಬರೆದಿದ್ದಾರೆ. ಅದರ ಜೊತೆಗೆ ಇಡೀ ಬಿಗ್‌ಬಾಸ್ ಇತಿಹಾಸದಲ್ಲೇ ಅತೀ ಹೆಚ್ಚು ಪ್ರೈಜ್ ಮನಿ ಗೆದ್ದ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಮೈಸೂರು ಮೂಲದ ನಿಖಿಲ್ ಬರೋಬ್ಬರಿ 55 ಲಕ್ಷ ರೂ. ಪ್ರೈಜ್ ಮನಿ ಜೊತೆಗೆ ತೆಲುಗು ಬಿಗ್‌ಬಾಸ್ ನ 8 ನೇ ಸೀಸನ್ ನ ಟ್ರೋಪಿ ಕೂಡ ಪಡೆದುಕೊಂಡರು.
ಇಷ್ಟು ಮಾತ್ರವಲ್ಲ ವಾರಕ್ಕೆ 2.25 ಲಕ್ಷ ರೂ. ಸಂಭಾವನೆಯಂತೆ 15 ವಾರಗಳಿಗೆ ಒಟ್ಟು 33 ಲಕ್ಷ ರೂ. ಸಂಭಾವನೆ ಕೂಡ ಪಡೆದಿದ್ದಾರೆ. ಪ್ರೈಜ್ ಮನಿ 55 ಲಕ್ಷ, ಸಂಭಾವನೆ 33 ಲಕ್ಷ, ಒಟ್ಟು 88 ಲಕ್ಷ ರೂ. ಜೊತೆಗೆ ಮಾರುತಿ ಸುಜುಕಿ ಡಿಜೈರ್ ಕಾರು ಕೂಡ ಒಟ್ಟಾರೆ ಒಂದು ಕೋಟಿ ರೂ. ಗೆದ್ದು ಇತಿಹಾಸ ಬರೆದಿದ್ದಾರೆ ನಿಖಿಲ್.
ಬರ್ತಡೇ ದಿನವೇ ಬಿಗ್‌ಬಾಸ್ ನಿಂದ ಔಟ್ ಆದ ಶಿಶಿರ್ ಬಗ್ಗೆ ಒಂದಿಷ್ಟು ಮಾಹಿತಿ!
ಶೋ ಗೆದ್ದ ಬಳಿಕ ಎಲ್ಲರಿಂದಲೂ ಕಲಿತಿದ್ದೇನೆ ಅಂತ ನಿಖಿಲ್ ಹೇಳಿದ್ದಾರೆ. ನಟ ರಾಮ್ ಚರಣ್ ಕೈಯಿಂದ ಟ್ರೋಫಿ ಪಡೆದರು. ನಿಖಿಲ್ ಗೆ ಬಹುಮಾನದ ಹಣದಲ್ಲಿ ಭಾರಿ ಕಡಿತ ಇರುತ್ತದೆ. 55 ಲಕ್ಷ ರೂ. ಸಂಪೂರ್ಣವಾಗಿ ನಿಖಿಲ್‌ಗೆ ಸಿಗುವುದಿಲ್ಲ. ಆದಾಯ ತೆರಿಗೆ ಕಾಯ್ದೆಗಳ ಪ್ರಕಾರ ಬಹುಮಾನದ ಹಣವನ್ನು ಸಾಮಾನ್ಯ ಆದಾಯವೆಂದು ಪರಿಗಣಿಸುವುದಿಲ್ಲ. ದೊಡ್ಡ ಮೊತ್ತದ ತೆರಿಗೆ ಕಡಿತಗೊಳಿಸಲಾಗುತ್ತದೆ. 30.9% ತೆರಿಗೆ ಕಡಿತ ಇರುತ್ತದೆ. ಅಂದರೆ 16.9 ಲಕ್ಷ ರೂ., ಸುಮಾರು 17 ಲಕ್ಷ ರೂ. ಕಡಿತಗೊಳಿಸಲಾಗುತ್ತದೆ. ಕಾರಿನ ಬೆಲೆಯಲ್ಲೂ ತೆರಿಗೆ ಕಡಿತ ಇರುತ್ತದೆ.
ತೆಲುಗು ಟಿವಿ ಧಾರಾವಾಹಿಗಳ ಮೂಲಕ ಖ್ಯಾತಿ ಗಳಿಸಿ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಕಾಲಿಟ್ಟ ನಿಖಿಲ್ ಸೀಸನ್ -8ರ ಪಟ್ಟ ಅಲಂಕರಿಸಿದ್ದಾರೆ. ಮೈಸೂರಿನ ಹಿರಿಯ ಪತ್ರಕರ್ತ ಶಶಿಕುಮಾರ್ ಅವರ ಮಗ. ತಾಯಿ ಸುಲೇಖಾ ಮಲಿಯಕ್ಕಲ್, ನಿಖಿಲ್‌ಗೆ ದಿಶಾಂಕ್ ಮಳಿಯಕ್ಕಲ್ ಎಂಬ ಕಿರಿಯ ಸಹೋದರನಿದ್ದಾನೆ.
ವಾರಕ್ಕೆ ಯುವಕರು 70 ಗಂಟೆ ದುಡಿಯಲೇಬೇಕು, ಮತ್ತೆ ಸಮರ್ಥಿಸಿಕೊಂಡ ನಾರಾಯಣ ಮೂರ್ತಿ!
ಇನ್ನು ಗೌತಮ್ ಕೃಷ್ಣ ರನ್ನರ್ ಅಪ್ ಆದರು. ಟೈಟಲ್ ಪೈಪೋಟಿ ಗೌತಮ್ ಮತ್ತು ನಿಖಿಲ್ ನಡುವೆ ಇತ್ತು. ನಿಖಿಲ್ ತೆಲುಗು ಬಿಗ್‌ಬಾಸ್ ಶೋ ವೀಕ್ಷಕರ ಫೇವರಿಟ್ ಮತ್ತು ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದರು. ಕನ್ನಡತಿ ಪ್ರೇರಣಾ ಕಂಬಂ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.ಇನ್ನು ಯುಐ ಚಿತ್ರದ ಪ್ರಚಾರಕ್ಕಾಗಿ ಕನ್ನಡದ ನಟ-ನಿರ್ಮಾಪಕ ಉಪೇಂದ್ರ, ನಾಯಕಿ ರೀಷ್ಮಾ ನಾಣಯ್ಯ ವಿಶೇಷ ಅತಿಥಿಗಳಾಗಿ ಫಿನಾಲೆಯಲ್ಲಿ ಭಾಗವಹಿಸಿದ್ದರು. 105 ದಿನಗಳ ಕಾಲ ನಡೆದ ಈ ಶೋವನ್ನು ಸೂಪರ್‌ಸ್ಟಾರ್ ನಾಗಾರ್ಜುನ ಹೋಸ್ಟ್ ಮಾಡಿದ್ದರು.
ನಿಖಿಲ್ ಕಲರ್ಸ್ ಸೂಪರ್ ನ ಮನೆಯೇ ಮಂತ್ರಾಲಯ ಎಂಬ ಧಾರವಾಹಿಯಲ್ಲಿ ನಟಿಸಿದ್ದರು. ಬಳಿಕ ತೆಲುಗು ಧಾರವಾಹಿ ಕ್ಷೇತ್ರಕ್ಕೆ ಕಾಲಿಟ್ಟು ಈಗ ತೆಲುಗಿನಲ್ಲಿ ಜನಪ್ರಿಯರಾಗಿದ್ದಾರೆ. ತೆಲುಗು ನಟ ಅಲ್ಲದ ಕಾರಣ, ಕನ್ನಡ ಗ್ಯಾಂಗ್ ಅಂತ ನಿಂದನೆ. ಯಶ್ಮಿ ವಿಚಾರದಲ್ಲಿ ತನ್ನ ಕ್ಯಾರೆಕ್ಟರ್ ಮೇಲೂ ಕಪ್ಪು ಮಸಿ ಬಳಿದುಕೊಂಡರು. ಹೆಣ್ಣುಮಕ್ಕಳನ್ನ ಉಪಯೋಗಿಸಿಕೊಳ್ಳುವವ ಅಂತ ನಿಂದನೆ. ಆದ್ರೂ ಸಹನೆ ಕಳ್ಕೊಳ್ಳದೆ, ಗೇಮ್ ಆಡಿ ಗೆದ್ದರು.