Asianet Suvarna News Asianet Suvarna News

AIADMK ಪಕ್ಷದ ಚಿಹ್ನೆ ಡಿಸೈನ್ ಮಾಡಿದ್ದ ನಟ ಪಾಂಡು ಕೊರೋನಾದಿಂದ ಸಾವು

ಕಾಲಿವುಡ್ ನಟ ಪಾಂಡು ಕೊರೋನಾದಿಂದ ಸಾವು | AIADMK ಧ್ವಜ ಡಿಸೈನ್ ಮಾಡಿದ್ದ ನಟ

Actor Pandu passes away in Chennai due to COVID 19 dpl
Author
Bangalore, First Published May 6, 2021, 2:49 PM IST

ತಮಿಳು ಚಿತ್ರರಂಗದಲ್ಲಿ ಹಾಸ್ಯ ಪಾತ್ರಗಳಿಂದಲೇ ಫೇಮಸ್ ಆದ ನಟ ಪಾಂಡು ಮೇ 6 ರಂದು ನಿಧನ ಹೊಂದಿದ್ದಾರೆ. ಕೊರೋನವೈರಸ್‌ ಪಾಸಿಟಿವ್ ದೃಢಪಟ್ಟ ನಂತರ ನಟ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪಾಂಡು ಅವರಿಗೆ 74 ವರ್ಷ ವಯಸ್ಸಾಗಿತ್ತು.

ಪಾಂಡು ಅವರ ಪತ್ನಿ ಕುಮುದಾ ಅವರಿಗೂ ಕೊರೋನವೈರಸ್‌ ಪಾಸಿಟಿವ್ ದೃಢಪಟ್ಟಿದ್ದು ಪ್ರಸ್ತುತ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಲನಚಿತ್ರ ವೃತ್ತಿಜೀವನದ ಜೊತೆಗೆ, ಡಿಎಂಕೆ ಯಿಂದ ಬೇರ್ಪಟ್ಟ ನಂತರ ಎಐಎಡಿಎಂಕೆ (ಆಗಿನ ಎಡಿಎಂಕೆ) ಪಕ್ಷದ ಚಿಹ್ನೆ ಎರಡು ಎಲೆಗಳು ಮತ್ತು ಪಕ್ಷದ ಧ್ವಜಗಳ ವಿನ್ಯಾಸ ಮಾಡಿದ್ದು ಇದೇ ನಟ. ದಿವಂಗತ ಹಿರಿಯ ನಟ-ರಾಜಕಾರಣಿ ಎಂ.ಜಿ.ರಾಮಚಂದ್ರನ್ ನಟನಿಗೆ ಈ ಕಾರ್ಯವನ್ನು ವಹಿಸಿದ್ದರು.

ಸುಶಾಂತ್ ಸಹನಟಿ ಅಭಿಲಾಷ ಕೊರೋನಾದಿಂದ ಸಾವು..!

ನಮಕ್ಕಲ್ನಲ್ಲಿ ಜನಿಸಿದ ಪಾಂಡು, ದಿವಂಗತ ನಟ ಇಡಿಚಾಪುಲಿ ಸೆಲ್ವರಾಜ್ ಅವರ ಸಹೋದರರಾಗಿದ್ದು, ಅವರು ಎಂಜಿಆರ್ ಅವರ ಕೆಲವು ಅತ್ಯುತ್ತಮ ಚಿತ್ರಗಳಾದ ಉಲಗಮ್ ಸೂತ್ರಮ್ ವಾಲಿಬಾನ್, ಇಧಾಯಕ್ಕಣಿ ಮುಂತಾದವುಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಪಾಂಡು ಅವರ ತಮಿಳು ಚಿತ್ರರಂಗದಲ್ಲಿ ಮೊದಲ ಬಾರಿಗೆ 1970 ರಲ್ಲಿ ಮನ್ನವನ್ ಸಿನಿಮಾದಲ್ಲಿ ಕಾಣಿಸಿಕೊಂಡರು.

1981 ರಲ್ಲಿ ಜಿ.ಎನ್.ರಂಗರಾಜನ್ ನಿರ್ದೇಶನದ ಕರಯೆಲ್ಲಂ ಶೆನ್ಬಾಗಪೂ ಸಿನಿಮಾದಲ್ಲಿ ಅವರ ಪಾತ್ರ ಗಮನ ಸೆಳೆಯಿತು. ಪ್ರಭು ಅವರ ಚಿನ್ನಾ ತಂಬಿ, ಶರತ್‌ಕುಮಾರ್‌ನ ನಟ್ಟಮೈ, ಅಜಿತ್‌ನ ಕಡಲ್ ಕೊಟ್ಟೈ, ಕಾರ್ತಿಕ್‌ನ ಉಲ್ಲಾಥೈ ಅಲ್ಲಿತಾ, ವಿಜಯ್‌ನ ಬದ್ರಿ ಸೇರಿ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

Follow Us:
Download App:
  • android
  • ios