ಕೊರೋನಾವೈರಸ್ ಎರಡನೇ ಅಲೆ ಮೊದಲ ಅಲೆಗಿಂತ ಹೆಚ್ಚು ಮಾರಕವಾಗಿದೆ ಎಂದು ಈಗಾಗಲೇ ಗೊತ್ತಾಗಿದೆ. ಏಕೆಂದರೆ ದೇಶಾದ್ಯಂತ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ.

ಈಗ, 40 ರ ದಶಕದ ಆರಂಭದಲ್ಲಿದ್ದ ನಟಿ ಅಭಿಲಾಷಾ ಪಾಟೀಲ್ ಅವರು ಕೋವಿಡ್ -19 ನಿಂದ ನಿಧನರಾಗಿದ್ದಾರೆ. ಅಭಿಲಾಷಾ ಪಾಟೀಲ್ ಜನಪ್ರಿಯ ಮರಾಠಿ ಚಲನಚಿತ್ರಗಳಾದ ತುಜಾ ಮಂಜಾ ಅರೇಂಜ್ ಮ್ಯಾರೇಜ್, ಬೇಕೊ ದೇತಾ ಕಾ ಬೈಕೊ, ಪಿಪ್ಸಿ ಮುಂತಾದವುಗಳಲ್ಲಿ ನಟಿಸಿದ್ದಾರೆ.

40 ವರ್ಷಗಳ ಹಿಂದೆ ಬಿಡುಗಡೆಯಾದ ಈ ಸಿನಿಮಾದ 10 ಈಗಿಲ್ಲ!

ಬದ್ರೀನಾಥ್ ಕಿ ದುಲ್ಹಾನಿಯಾ, ಗುಡ್ ನ್ಯೂಜ್, ಮತ್ತು ಚಿಚೋರೆಯಂತಹ ಅನೇಕ ಜನಪ್ರಿಯ ಬಾಲಿವುಡ್ ಪ್ರಾಜೆಕ್ಟ್‌ಗಳಲ್ಲಿಯೂ ಅವರು ಭಾಗಿಯಾಗಿದ್ದಾರೆ. ಇದರಲ್ಲಿ ಸುಶಾಂತ್ ಸಿಂಗ್ ರಜಪೂತ್ ಜೊತೆ ಅಭಿನಯಿಸಿದ್ದಾರೆ.

ಇವರಿಗೆ ಪತಿ ಮತ್ತು ಮಗ ಇದ್ದಾರೆ. ಹಿಂದಿ ಮತ್ತು ಭೋಜ್‌ಪುರಿ ಚಲನಚಿತ್ರೋದ್ಯಮಗಳಲ್ಲಿ ಕೆಲಸ ಮಾಡಿದ್ದ ನಟಿ ಶ್ರೀಪಾದಾ ಕೂಡ ಇತ್ತೀಚೆಗೆ ನಿಧನರಾದರು. ಸಾವಿಗೆ ಕಾರಣ ಕೋವಿಡ್ -19 ಎಂದು ವರದಿಯಾಗಿದೆ.