ನಿಜ ಜೀವನದಲ್ಲಿ ಹೆಂಡ್ತಿಗೆ ಹೀರೋ ಆಗಬೇಕಿದ್ದ ಓಂ ಪುರಿ, ವಿಲನ್ ಆದರು. ನಟ ಓಂ ಪುರಿ ಅಕ್ರಮ ಸಂಬಂಧ ಒಂದೇ ಎರಡೇ! ಈಗ ಓಂ ಪುರಿ ಮೊದಲ ಪತ್ನಿ ಸೀಮಾ ಕಪೂರ್ ಈ ಬಗ್ಗೆ ಮಾತನಾಡಿದ್ದಾರೆ.
ಸಿನಿಮಾದಲ್ಲಿ ವಿಲನ್ ಆಗಿದ್ದ ಓಂ ಪುರಿ, ನಿಜ ಜೀವನದಲ್ಲಿ ಕೂಡ ತನ್ನ ಕುಟುಂಬಕ್ಕೂ ಕೂಡ ವಿಲನ್ ಆಗಿದ್ದರು. ಈ ವಿಷಯವನ್ನು ಇವರ ಪತ್ನಿಯೇ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.
ದೊಡ್ಡ ತಿರುವು ಕೊಟ್ಟ ಡಿವೋರ್ಸ್!
ಬಾಲಿವುಡ್‌ನ ಪ್ರಸಿದ್ಧ ನಟ ಓಂ ಪುರಿಯ ಮೊದಲ ಪತ್ನಿ ಸೀಮಾ ಕಪೂರ್, ತಾನು ಗರ್ಭ ಧರಿಸಿದ್ದ ಸಮಯದಲ್ಲಿ ಪತಿಯ ಮೋಸವನ್ನು ತಿಳಿದು ಅಕ್ಷರಶಃ ದಿಗ್ಭ್ರಮೆಗೊಂಡಿದ್ದರು. ಈ ವಿಷಯ ಅವರ ಜೀವನಕ್ಕೆ ಒಂದು ದೊಡ್ಡ ತಿರುವು ತಂದಿತು ಎಂದು ಅವರೇ ಹೇಳಿಕೊಂಡಿದ್ದಾರೆ.
ಮಗು ಸತ್ತುಹೋಯ್ತು ಅಂತ ಹಣ ಕೊಟ್ಟಿದ್ದ ಓಂ ಪುರಿ!
ತಮ್ಮ ವೃತ್ತಿಜೀವನದಲ್ಲಿ ಹಲವಾರು, ವಿಶಿಷ್ಟ ಪಾತ್ರಗಳಿಗೆ ಜೀವ ತುಂಬಿದ ಓಂ ಪುರಿ ಅವರು, ವೈಯಕ್ತಿಕ ಜೀವನದಲ್ಲಿ ಕೂಡ ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಸೀಮಾ ಕಪೂರ್, “ನಾನು ಗರ್ಭಿಣಿಯಾಗಿದ್ದಾಗ ಓಂ ಬೇರೊಬ್ಬಳ ಜೊತೆ ಸಂಪರ್ಕದಲ್ಲಿದ್ದ ಅಂತ ಗೊತ್ತಾದಾಗ ಬೇಜಾರಾಯ್ತು, ಅದು ನನ್ನ ಜೀವನದ ತುಂಬಾ ಕಷ್ಟಕರವಾದ ಹಂತವಾಗಿತ್ತು. ಆಗ ಮಗುವನ್ನು ಕಳೆದುಕೊಂಡೆ, ಸೆಕ್ರೆಟರಿ ಬಳಿ ಅವರು 25000 ರೂಪಾಯಿ ಕಳಿಸಿದರು. ಆಮೇಲೆ ಯೋಚನೆ ಮಾಡಿಆ ಸಂಬಂಧದಿಂದ ದೂರವಾಗುವುದೇ ಸೂಕ್ತ ಅಂತ ಅನಿಸಿತು" ಎಂದು ಸೀಮಾ ಕಪೂರ್ ಹೇಳಿದ್ದಾರೆ.
14ರ ಹರೆಯದಲ್ಲಿ 55ರ ಕೆಲಸದಾಕೆ ಜೊತೆ ಸಂಬಂಧ ಹೊಂದಿದ್ರು ಖ್ಯಾತ ನಟ
ಎರಡು ಮದುವೆಯಾಗಿದ್ದ ಓಂ ಪುರಿ!
1991ರಲ್ಲಿ ಸೀಮಾ ಮತ್ತು ಓಂ ಪುರಿಯ ಮದುವೆಯಾದರೂ ಕೂಡ, ಅದು ದೀರ್ಘಕಾಲ ಉಳಿಯಲಿಲ್ಲ. ಓಂ ಪುರಿ ಆಮೇಲೆ ನಂದಿತಾ ಪುರಿಯನ್ನು ಮದುವೆಯಾದರು. ಈ ಜೋಡಿಗೆ ಇಶಾನ್ ಓಂ ಪುರಿ ಎಂಬ ಮಗನಿದ್ದಾನೆ. ಆದರೆ ಆ ಸಂಬಂಧವೂ ಕೆಲವು ವರ್ಷಗಳಲ್ಲಿ ಒಡಕು ಬಂದು ಮುರಿದು ಹೋಯ್ತು. “ನಾನು ನನ್ನ ಜೀವನ ಕಂಟಿನ್ಯೂ ಮಾಡಿದೆ, ಅದರ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪ ಇಲ್ಲ” ಎಂದು ಅವರು ಹೇಳಿದ್ದಾರೆ.
ನಿರ್ಧಾರದ ಬಗ್ಗೆ ಖುಷಿಯಿದೆ!
"ಡಿವೋರ್ಸ್ ಕೊಟ್ಟ ಟೈಮ್‌ನಲ್ಲಿ ನಾನು ಚಿಕ್ಕ ಹುಡುಗಿಯಾಗಿದ್ದೆ. ಜೀವನದ ಬಗ್ಗೆ ಅಷ್ಟಾಗಿ ತಿಳುವಳಿಕೆ ಇರಲಿಲ್ಲ. ಆದರೆ ಅಂದು ನಾನು ಕೈಗೊಂಡ ನಿರ್ಧಾರ ನನ್ನ ಜೀವನವನ್ನು ಇನ್ನಷ್ಟು ಚೆನ್ನಾಗಿ ಮಾಡಿತು ಅಂತ ಅಂದುಕೊಳ್ತೀನಿ” ಎಂದು ಸೀಮಾ ಕಪೂರ್ ಹೇಳಿದ್ದಾರೆ.
ಇಬ್ಬರು ಮನೆಗೆಲಸದ ಹೆಂಗಸರ ಜೊತೆಯೇ ಸಂಬಂಧ, ನಟ ಓಂ ಪುರಿಯ ರಹಸ್ಯ ಬಿಚ್ಚಿಟ್ಟಿದ್ರು ಪತ್ನಿ ನಂದಿತಾ!
2017ರಲ್ಲಿ ಓಂ ಪುರಿ ನಿಧನ!
2017 ರಲ್ಲಿ ಓಂ ಪುರಿ ನಿಧನರಾದರು, ಆದರೆ ಅವರ ಜೀವನದ ಕತೆಗಳು, ಸಿನಿಮಾ ಪಾತ್ರಗಳು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಾಗಿ ಉಳಿದಿವೆ. ಈಗ ಸೀಮಾ ಕಪೂರ್ ಅವರು ನಿಜಜೀವನದ ಅನುಭವವನ್ನು ಹಂಚಿಕೊಳ್ಳುವ ಮೂಲಕ ತನ್ನ ಧೈರ್ಯ, ಸ್ವಾಭಿಮಾನವನ್ನು ತೋರಿಸಿದ್ದಾರೆ.
1972-2017ರವರೆಗೆ ಓಂ ಪುರಿ ಅವರು ನಟರಾಗಿ ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದರು. ಹರಿಯಾಣ ಮೂಲಕ ಓಂ ಪುರಿ ಅವರು ಉರ್ದು, ಹಿಂದಿ, ಮಲಯಾಳಂ, ಕನ್ನಡ, ಇಂಗ್ಲಿಷ್, ಪಂಜಾಬಿ, ಗುಜರಾತ್, ತೆಲುಗು, ಮರಾಠಿ ಜೊತೆಗೆ ಇಂಗ್ಲಿಷ್ ಸಿನಿಮಾದಲ್ಲಿಯೂ ನಟಿಸಿದ್ದರು. ಭಾರತದಲ್ಲಿರುವ ಅತ್ಯುತ್ತಮ ನಟರಲ್ಲಿ ಓಂ ಕೂಡ ಒಬ್ಬರು. ಇವರ ನಟನೆಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ, ಪದ್ಮಶ್ರೀ ಪ್ರಶಸ್ತಿ ಕೂಡ ಸಿಕ್ಕಿದೆ. ದಾಲ್ ರೋಟಿ ಹೆಸರಿನಲ್ಲಿ ಡಾಬಾ ಆರಂಭಿಸಬೇಕು ಎಂದುಕೊಂಡಿದ್ದ ಓಂ ಪುರಿ ಅವರು ಕೃಷಿ, ಅಡುಗೆ ಮಾಡುವುದರಲ್ಲಿ ತುಂಬ ಆಸಕ್ತಿ ಹೊಂದಿದ್ದರಂತೆ.
ಓಂ ಪುರಿ ಅವರು ಕನ್ನಡದಲ್ಲಿ ಕೂಡ ಅಭಿನಯಿಸಿದ್ದು ವಿಶೇಷ. ನಟ ದರ್ಶನ್ ನಟನೆಯ ʼಧ್ರುವʼ, ಶಿವರಾಜ್‌ಕುಮಾರ್ ನಟನೆಯ ʼAk 47ʼ, ʼಗೋಧೂಳಿʼ, ʼಟೈಗರ್ʼ ಸಿನಿಮಾದಲ್ಲಿಯೂ ನಟಿಸಿದ್ದರು.
