Asianet Suvarna News Asianet Suvarna News

ಬೆಳ್ಳಂಬೆಳಗ್ಗೆ ನಾಗಚೈತನ್ಯ-ಶೋಭಿತಾ ನಿಶ್ಚಿತಾರ್ಥ ಮುಗಿಸಿ ಫೋಟೋ ಹಂಚಿಕೊಂಡ ನಟ ನಾಗಾರ್ಜುನ!

ತೆಲುಗು ನಟ ನಾಗ ಚೈತನ್ಯ ಹಾಗೂ ನಟಿ ಶೋಭಿತಾ ಧೂಲಿಪಾಲ ಅವರ ನಿಶ್ಚಿತಾರ್ಥವನ್ನು ಬೆಳ್ಳಂಬೆಳಗ್ಗೆ ನೆರವೇರಿಸಿದ ನಟ ಅಕ್ಕಿನೇನಿ ನಾಗಾರ್ಜುನ ಫೋಟೋವನ್ನು ಹಂಚಿಕೊಂಡಿದ್ದಾರೆ.

Actor Nagarjuna Akkineni revealed Actor Naga chaitanya and sobhita dhulipala engagement photo sat
Author
First Published Aug 8, 2024, 1:41 PM IST | Last Updated Aug 9, 2024, 7:10 PM IST

ಹೈದರಾಬಾದ್ (ಆ.08): ತೆಲುಗು ಸಿನಿಮಾ ಚಿತ್ರರಂಗದ ಅಕ್ಕಿನೇನಿ ನಾಗಾರ್ಜುನ ಕುಟುಂಬದಲ್ಲಿ ಇಂದು ಬೆಳ್ಳಂಬೆಳಗ್ಗೆ (2024ರ ಆ.8ರಂದು) ನಟ ನಾಗ ಚೈತನ್ಯ- ನಟಿ ಶೋಭಿತಾ ಧೂಲಿಪಾಲ ಅವರ ನಿಶ್ಚಿತಾರ್ಥವನ್ನು ನೆರವೇರಿಸಿ ಫೋಟೋವನ್ನು ಹಂಚಿಕೊಳ್ಳಲಾಗಿದೆ.

ಈ ಕುರಿತು ನಟ ನಾಗಾರ್ಜುನ ಅಕ್ಕಿನೇನಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ಇಂದು ಬೆಳಿಗ್ಗೆ 9:42 ಕ್ಕೆ ನಡೆದ ಶೋಭಿತಾ ಧೂಲಿಪಾಲ ಅವರೊಂದಿಗೆ ನಮ್ಮ ಮಗ ನಾಗ ಚೈತನ್ಯ ಅವರ ನಿಶ್ಚಿತಾರ್ಥ ಮಾಡಿರುವುದನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಅವಳನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ನಾವು ತುಂಬಾ ಸಂತೋಷಪಡುತ್ತೇವೆ. ಸಂತದಿಂದಿರುವ ದಂಪತಿಗಳಿಗೆ ಅಭಿನಂದನೆಗಳು. ಅವರಿಗೆ ಜೀವನಪೂರ್ತಿ ಪ್ರೀತಿ ಮತ್ತು ಸಂತೋಷವನ್ನು ಹಾರೈಸುತ್ತೇನೆ. ದೇವರು ಆಶೀರ್ವದಿಸಲಿ! ಎಂದು ಆಶೀರ್ವಾದ ಮಾಡಿದ್ದಾರೆ.

 

ನಾಗ ಚೈತನ್ಯ ಮತ್ತು ಶೋಭಿತಾ ಧೂಲಿಪಾಲ ಅವರ ಕುರಿತ ವದಂತಿಗಳು ಕೆಲ ದಿನಗಳಿಂದ ನಿಜವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಇವರಿಬ್ಬರು ಗಂಭೀರ ಸಂಬಂಧದಲ್ಲಿದ್ದಾರೆ ಎಂದು ವ್ಯಾಪಕವಾಗಿ ವರದಿಯಾಗಿತ್ತು. ಇದರ ಬೆನ್ನಲ್ಲಿಯೇ ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದರೂ ಯಾರೊಬ್ಬರೂ ಈ ಬಗ್ಗೆ ಮೌನ ಮುರಿದು ಸ್ಪಷ್ಟನೆ ನೀಡಿರಲಿಲ್ಲ. ಈಗ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಸುದ್ದಿಯನ್ನು ಇಬ್ಬರೂ ತಾರಾ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ನಿಜ ಮಾಡಿದ್ದಾರೆ. 

Actor Nagarjuna Akkineni revealed Actor Naga chaitanya and sobhita dhulipala engagement photo sat

ಅಪ್ಪನಾಗುತ್ತಿದ್ದಾರೆ ಅಭಿಷೇಕ್ ಅಂಬರೀಶ್; ಮತ್ತೆ ಹುಟ್ಟಿಬರಲಿದ್ದಾರಾ ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬಿ

ನಾಗ ಚೈತನ್ಯ ಹಾಗೂ ಶೋಭಿತಾ ಧೂಲಿಪಾಲ ಅವರು ಮನೆಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಅವರು ನವ ಜೋಡಿಯ ಫೋಟೋಗಳನ್ನು  ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮಲಕ ಇಬ್ಬರೂ ಜೋಡಿಗೆ ಶುಭಹಾರೈಸಿದ್ದಾರೆ. ಇನ್ನು ನಿಶ್ಚಿತಾರ್ಥದ ವೇಳೆ ನಟ ನಾಗ ಚೈತನ್ಯ ಸಾಂಪ್ರದಾಯಿಕ ಉಡುಗೆಯಲ್ಲಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶೋಭಿತಾ ತಿಳಿ ಕಿತ್ತಳೆ ಬಣ್ಣದ ಸೀರೆಯಲ್ಲಿ ಮಿಂಚುತ್ತಿದ್ದಾರೆ. ಇಬ್ಬರೂ ಜೋಡಿಯನ್ನು ನಟ ನಾಗಾರ್ಜುನ ತೋಳಬಂಧಿಯಲ್ಲಿ ತಬ್ಬಿ ಹಿಡಿದು ಮುಗುಳ್ನಗುತ್ತಾ ಶೂಭ ಕೋರಿದ್ದಾರೆ. ಮತ್ತೊಂದು ಚಿತ್ರದಲ್ಲಿ, ಶೋಭಿತಾ ತನ್ನ ಭಾವಿ ಪತಿ ಚೈತನ್ಯ ಅವರನ್ನು ಪ್ರೀತಿಯಿಂದ ತಬ್ಬಿಕೊಂಡು ಪೋಟೋಗೆ ಪೋಸ್ ಕೊಟ್ಟಿದ್ದಾರೆ.

Latest Videos
Follow Us:
Download App:
  • android
  • ios