Asianet Suvarna News Asianet Suvarna News

ಪಾಕ್​ ವಿರೋಧಿಸಲು ಧರ್ಮೇಂದ್ರ-ಸನ್ನಿಗೂ ಇಷ್ಟವಿಲ್ವಂತೆ: ಪಾಕ್ ನಟಿಯಿಂದಲೇ ಬಹಿರಂಗ

ಪಾಕಿಸ್ತಾನಿ ವಿರೋಧಿ ಹೇಳಿಕೆಯನ್ನು ಚಿತ್ರದಲ್ಲಿ ಹೇಳದಂತೆ ಪಾಕ್​ ನಟಿ ನಾದಿಯಾ ಖಾನ್​, ಧರ್ಮೇಂದ್ರ ಅವರನ್ನು ಕೇಳಿಕೊಂಡಾಗ ನಟ ಹೇಳಿದ್ದೇನು?
 

Actor Nadia Khan recalls Dharmendra dont want statements against Pak suc
Author
First Published Aug 17, 2023, 1:27 PM IST

ಸನ್ನಿ ಡಿಯೋಲ್ ಅವರ ಚಿತ್ರ ಗದರ್ 2 (Gadar-2) ಇತ್ತೀಚಿನ ದಿನಗಳಲ್ಲಿ ಬಾಕ್ಸ್ ಆಫೀಸ್ ಅನ್ನು ಅಲ್ಲಾಡಿಸುತ್ತಿದೆ. ಆರೇ ದಿನಗಳಲ್ಲಿ ಚಿತ್ರ 250 ಕೋಟಿ ಕ್ಲಬ್ ಸೇರಿದೆ. ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಅವರ ಚಿತ್ರ ಎಲ್ಲರಿಗೂ ಇಷ್ಟವಾಗಿದೆ. ಗದರ್ 2 ರ ಯಶಸ್ಸಿನ ನಡುವೆ, ಪಾಕಿಸ್ತಾನಿ ನಟಿ ನಾದಿಯಾ ಖಾನ್ ಅವರು ಸನ್ನಿ ಡಿಯೋಲ್ ಮತ್ತು ಅವರ ತಂದೆ ಧರ್ಮೇಂದ್ರ ಇಬ್ಬರೂ ಪಾಕಿಸ್ತಾನಿ (Pakistan) ವಿರೋಧಿ ಡೈಲಾಗ್‌ಗಳನ್ನು ಇಷ್ಟಪಡುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ನಾದಿಯಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ನಾದಿಯಾ ಅವರು ಧರ್ಮೇಂದ್ರ ಅವರೊಂದಿಗಿನ ಫೋನ್ ಸಂಭಾಷಣೆ ನಡೆಸಿದ್ದು, ಈ ಸಂದರ್ಭದಲ್ಲಿ ನಡೆದ ಮಾತುಕತೆಯನ್ನು ನೆನಪಿಸಿಕೊಂಡಿದ್ದಾರೆ. ಪಾಕಿಸ್ತಾನಿ ವಿರೋಧಿ ಡೈಲಾಗ್​ಗಳ ಬಗ್ಗೆ ಕೇಳಿದಾಗ ಧರ್ಮೇಂದ್ರ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು ಎಂಬ ಬಗ್ಗೆ ನಾದಿಯಾ ಖಾನ್​ ಉಲ್ಲೇಖಿಸಿದ್ದಾರೆ.  

 ಧರ್ಮೇಂದ್ರ ಅವರು ಇಂಗ್ಲೆಂಡ್​ನಿಂದ ತಮಗೆ ಕರೆ ಮಾಡಿದ್ದರು. ಇದು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಮೊದಲಿಗೆ ಈ ವಿಷಯ ಅವರು ಹೇಳಿದಾಗ ಯಾರೋ ತಮಾಷೆ  ಮಾಡುತ್ತಿದ್ದಾರೆ ಎಂದು ಭಾವಿಸಿದೆ. ಆದರೆ ಕೊನೆಗೆ ನಿಜಕ್ಕೂ ಅವರು ಧರ್ಮೇಂದ್ರ ಅವರೇ ಎಂದು ತಿಳಿಯಿತು ಎಂದಿದ್ದಾರೆ. ಅಷ್ಟಕ್ಕೂ ಧರ್ಮೇಂದ್ರ ಅವರು ಕರೆ ಮಾಡಲು ಕಾರಣ, ನಟಿ ನಾದಿಯಾ ಅವರು ಪ್ರಪಂಚದಾದ್ಯಂತದ ಕೂಲ್ ಡ್ಯಾಡ್‌ಗಳ ಮೇಲೆ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ಅದರಲ್ಲಿ  ಧರ್ಮೇಂದ್ರ ಅವರ ಹೆಸರೂ ಇತ್ತು. ಈ ಹಿನ್ನೆಲೆಯಲ್ಲಿ ಅವರು ಕರೆ ಮಾಡಿರುವುದಾಗಿ ತಿಳಿಸಿದ್ದಾರೆ. ಆದರೆ, ಕರೆ ಮಾಡಿರುವುದು ಧರ್ಮೇಂದ್ರ ಅವರು ಎಂದು ನಂಬುವುದು ನನಗೆ ಕಷ್ಟವಾಯಿತು. ಆದರೆ ಕೊನೆಯಲ್ಲಿ ಅವರು  ತಮ್ಮ ಸೆಟ್‌ನ ಬಿಟಿಎಸ್ ವೀಡಿಯೊವನ್ನು ಕಳುಹಿಸಿದರು. ಅದಿನ್ನೂ ಬಿಡುಗಡೆಯಾಗಲಿಲ್ಲ. ಆದ್ದರಿಂದ ಅವರನ್ನು ನಾನು ನಂಬಿದೆ. ನನಗೆ ತುಂಬಾ ಬೇಸರವಾಯಿತು. ಕೊನೆಗೆ ಅವರ ಬಳಿ ಕ್ಷಮೆಯಾಚಿಸಿ ಮಾತನಾಡಿದೆ ಎಂದಿದ್ದಾರೆ ನಾದಿಯಾ (Nadia Khan).

ನಾನು ಹುಚ್ಚನಾಗಿಬಿಟ್ಟೆ, ರಾತ್ರಿಪೂರ್ತಿ ಅಳುತ್ತಿದ್ದೆ- ನಗುತ್ತಿದ್ದೆ ಎಂದು ಕಣ್ಣೀರಾದ ನಟ

ನಂತರ ಕೊನೆಯಲ್ಲಿ, ನಿಮ್ಮ ಮಗ ಸನ್ನಿ ಡಿಯೋಲ್ ಅವರ ಸಿನಿಮಾಗಳಲ್ಲಿ ಪಾಕಿಸ್ತಾನ ವಿರೋಧಿ ಮಾತುಗಳನ್ನಾಡುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದೆ. ಕೂಡಲೇ ಧರ್ಮೇಂದ್ರ ಅವರು, ಇದು ನನಗೂ ಇಷ್ಟವಿಲ್ಲ. ಏಕೆಂದರೆ,  ಸನ್ನಿಗೆ ನನ್ನಂತೆಯೇ ಪಾಕಿಸ್ತಾನದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ ಎಂದರು. ನನಗೆ ಇದನ್ನು ಕೇಳಿ ಖುಷಿಯಾಯಿತು. ನಂತರ  ಚಿತ್ರದಲ್ಲಿ ಪಾಕಿಸ್ತಾನಿ ವಿರೋಧಿ  ಮಾತನಾಡಬಾರದು ಎಂದು ಮಗನಿಗೆ ಹೇಳುವಂತೆ ಧರ್ಮೇಂದ್ರ (Dharmendra) ಅವರಿಗೆ ತಾವು ಹೇಳಿರುವುದಾಗಿ  ನಾದಿಯಾ ಹೇಳಿದ್ದಾರೆ. ಸನ್ನಿ ಕೂಡ ಇಂತಹ ಡೈಲಾಗ್‌ಗಳನ್ನು ಇಷ್ಟಪಡುವುದಿಲ್ಲ. ಆದರೆ ಅದು ಬಲವಂತವಾಗಿದೆ ಎಂದು ಧರ್ಮೇಂದ್ರ ಅವರು ಉತ್ತರ ಕೊಟ್ಟರು ಎಂದಿದ್ದಾರೆ.
 
 'ಗದರ್ 2' ಕುರಿತು ಹೇಳುವುದಾದರೆ,  ಚಿತ್ರವು ಕೇವಲ ಐದು ದಿನಗಳಲ್ಲಿ 230 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಗಳಿಸಿದೆ ಮತ್ತು ಡಿಯೋಲ್ ಕುಟುಂಬಕ್ಕೆ ಅದೃಷ್ಟವನ್ನು ಮರಳಿ ತಂದಿದೆ. ಈ ಅದೃಷ್ಟವನ್ನು ಸನ್ನಿ ಅವರು ತಮ್ಮ ಸೊಸೆ ದೃಶಾ ಆಚಾರ್ಯ ಅವರಿಗೆ ಮೀಸಲು ಇಟ್ಟಿದ್ದಾರೆ.  ವರದಿಗಳ ಪ್ರಕಾರ, ಸನ್ನಿ ತನ್ನ ಮಗ ಕರಣ್ ಡಿಯೋಲ್ ಅವರ ಪತ್ನಿ ಮತ್ತು 'ಘರ್ ಕಿ ಲಕ್ಷ್ಮಿ' ದೃಶಾ ಅದೃಷ್ಟಶಾಲಿ ಎಂದು ನಂಬಿದ್ದಾರೆ.

ಬಾಕ್ಸ್​ ಆಫೀಸ್​ ಧೂಳೆಬ್ಬಿಸ್ತಿದೆ 'ಗದರ್-2'​: ಶಾರುಖ್ ಖಾನ್ ಚಿತ್ರ ಪಠಾಣ್​ ದಾಖಲೆ ಉಡೀಸ್
 

Follow Us:
Download App:
  • android
  • ios